
ಜ.1 ರಿಂದ ಆನ್‌ಲೈನ್ ಯೋಗ ಶಿಬಿರ
Team Udayavani, Dec 27, 2020, 3:15 PM IST

ಕಾರಟಗಿ: ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ್ ಟ್ರಸ್ಟ ವತಿಯಿಂದ ಹೊಸ ವರ್ಷದ ಆರಂಭದಿಂದ “ಬೇಡ ಮಧ್ಯಪಾನ ಮಾಡು ಯೋಗ ಧ್ಯಾನ’ ಎಂಬ ಧ್ಯೇಯದೊಂದಿಗೆ ಆನ್‌ಲೈನ್ ಯೋಗ ಶಿಬಿರ ಆರಂಭಿಸಲಾಗುವುದು ಎಂದು ಪತಂಜಲಿ ಯೋಗ ಸಮಿತಿಯ ಕೊಪ್ಪಳಜಿಲ್ಲಾ ಪ್ರಭಾರಿ ಶರಣಪ್ಪ ಸಿ.ಎಚ್. ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಂಜಲಿಯೋಗ ಪೀಠದ ರಾಜ್ಯ ಪ್ರಭಾರಿಯೋಗಾಚಾರ್ಯ ಭವರಲಾಲ್‌ಆರ್ಯ ಅವರ ನೇತೃತ್ವದಲ್ಲಿ ಆನ್‌ಲೈನ್‌ಸಹಯೋಗ ಶಿಕ್ಷಕರ ಯೋಗ ತರಬೇತಿಜ. 1ರಿಂದ ಪ್ರಾರಂಭಿಸಲಾಗುತ್ತಿದೆ.ಜ. 30ರವರೆಗೆ ನಡೆಯಲಿದೆ ಹಾಗೂಹರಿದ್ವಾರದ ಯೋಗ ಋಷಿ ಸ್ವಾಮಿ ರಾಮದೇವಜೀ ಮಹಾರಾಜ್,ಕೇಂದ್ರಿಯ ಪ್ರಭಾರಿ ಜಿ. ಡಾ|ಜಯದೀಪ್ ಆರ್ಯಜೀ ಹಾಗೂ50ಕ್ಕೂ ಹೆಚ್ಚು ಅನುಭವಿ ಯೋಗತಜ್ಞರು ತರಬೇತಿ ನೀಡುತ್ತಿದ್ದಾರೆ. ಅಲ್ಲದೇ ಪ್ರಕೃತಿ ಚಿಕಿತ್ಸೆ, ಪಂಚಕರ್ಮರ್ಮ ಚಿಕಿತ್ಸೆ, ಆಯುರ್ವೇದಸ್ವಸ್ಥ ಜೀವನ ಪದ್ಧತಿಯ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ.
ಈ ಶಿಬಿರದಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ಆತ್ಮವಿಶ್ವಾಸ, ನೆನಪಿನ ಶಕ್ತಿ ಹೆಚ್ಚಿಸುವ ಹಾಗೂ ಪರೀಕ್ಷಾ ಭಯ ಮತ್ತು ಆತಂಕ ನಿವಾರಣಾ ತರಬೇತಿ ನೀಡಲಾಗುತ್ತದೆ. ಆದ್ದರಿಂದ ತಾಲೂಕಿನ ಎಲ್ಲ ನಾಗರಿಕರು ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಸದ್ಬಳಕೆ ಮಾಡಿಕೊಂಡು ಒಳ್ಳೆಯ ಆರೋಗ್ಯ ಹಾಗೂ ಆಯಸ್ಸು ಪಡೆಯಲು ಪಣ ತೊಡಬೇಕು. ಅಲ್ಲದೆ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು 9448116438, 9449007779, 9591499828, 7019823129 ಸಂಖ್ಯೆಗೆ ದೂರವಾಣಿ ಕರೆ ಮಾಡಿ ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ಮಹಿಳಾ ಜಿಲ್ಲಾ ಪ್ರಭಾರಿ ಸಿ.ಎಚ್. ಮೀನಾಕ್ಷಿ, ಯುವ ಭಾರತ ಜಿಲ್ಲಾ ಪ್ರಭಾರಿ ಶರಣೇಗೌಡಬೂದಗುಂಪಾ, ಪತಂಜಲಿ ಯೋಗಸಮಿತಿ ತಾಲೂಕು ಪ್ರಭಾರಿ ಪ್ರಸಾದ್‌ಚಿಟ್ಟೂರಿ, ಯೋಗಸಾಧಕರಾದ ದುರುಗೇಶ, ವೆಂಕಟೇಶ ನಾಗನಕಲ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
