ನರೇಗಾದಡಿ ವೈಯಕ್ತಿಕ ಕಾಮಗಾರಿ

Team Udayavani, Apr 22, 2020, 6:27 PM IST

ನರೇಗಾದಡಿ ವೈಯಕ್ತಿಕ ಕಾಮಗಾರಿ

ಸಾಂದರ್ಭಿಕ ಚಿತ್ರ

ಕೊಪ್ಪಳ: ಮಹಾಮಾರಿ ಕೋವಿಡ್ 19 ವೈರಸ್‌ ಭೀತಿಯಿಂದ ದೇಶವೇ ಲಾಕ್‌ಡೌನ್‌ ಆಗಿದ್ದು, ಜನತೆಗೆ ದುಡಿಮೆ ಇಲ್ಲದಂತಾಗಿದೆ. ಇದರ ಮಧ್ಯೆಯೂ ಕೊಪ್ಪಳ ಜಿಪಂ ನರೇಗಾದಡಿ ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ವೈಯಕ್ತಿಕ ಕಾಮಗಾರಿ ನೀಡಲು ಮುಂದಾಗಿದೆ.

ಇಲ್ಲಿವರೆಗೂ 33,734 ಮಾನವ ದಿನಗಳ ಸೃಜನೆ ಮಾಡಿ ಕೆಲಸ ನೀಡಲು ಆರಂಭಿಸಿದೆ. ಕೊಪ್ಪಳ ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶ. ದುಡಿಮೆ ಇಲ್ಲದೆ ಜನತೆ ತುತ್ತಿನಚೀಲ ತುಂಬಿಸಿಕೊಳ್ಳಲು ದೂರದ ಊರುಗಳಿಗೆ ಗುಳೆ ಹೋಗುತ್ತಿದ್ದರು. ಆದರೆ ಗುಳೆ ಹೋಗಿದ್ದ 22 ಸಾವಿರ ಜನ ಕೋವಿಡ್ 19 ವೈರಸ್‌ ಭೀತಿಯಿಂದ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಈಗ ಜನತೆ ದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಇದನ್ನರಿತು ನರೇಗಾದಡಿ ಕೂಲಿಕಾರ್ಮಿಕರಿಗೆ ಕೆಲಸ ಕೊಡಲಾಗುತ್ತಿದೆ.

ಮಾನವ ದಿನ ಸೃಜನೆ: ಪ್ರತಿ ವರ್ಷ ಬೇಸಿಗೆ ವೇಳೆ ಜನತೆಗೆ ನರೇಗಾದಡಿ ಹೆಚ್ಚು ಕೆಲಸ ನೀಡಲಾಗುತ್ತಿತ್ತು. ಆದರೆ ಕೋವಿಡ್ 19 ದಿಂದ ಆರಂಭಿಕ ದಿನದಲ್ಲಿ ಕೆಲವೆಲ್ಲ ಸ್ಥಗಿತಗೊಂಡಿದ್ದವು. ಜನತೆ ಪರಿತಪಿಸುತ್ತಿರುವುದನ್ನು ಅರಿತು ಸರ್ಕಾರವು ಕೆಲವು ಮಾರ್ಗಸೂಚಿ ಅನ್ವಯ ಕೆಲಸ ನೀಡಲು ಮುಂದಾಗಿದೆ. ಕೊಪ್ಪಳ ಜಿಪಂ ಈ ವರೆಗೂ 33,734 ಮಾನವ ದಿನ ಸೃಜನೆ ಮಾಡಿ ಕೆಲಸ ನೀಡಲಾರಂಭಿಸಿದೆ.

ವೈಯಕ್ತಿಕ ಕಾಮಗಾರಿಗೆ ಆದ್ಯತೆ: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬ ಅವಶ್ಯವಾಗಿದೆ. ರೈತನು ಮನೆಯಲ್ಲಿ ಕುರಿ ದೊಡ್ಡಿ ನಿರ್ಮಾಣ, ದನದ ದೊಡ್ಡಿ ನಿರ್ಮಾಣ ಮಾಡಿಕೊಳ್ಳುವುದು. ಮನೆಯ ಬುನಾದಿ ತೆಗೆಯುವ ಕಾಮಗಾರಿ, ಇನ್ನೂ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣದಂತಹ ಕೆಲಸ ನೀಡಲಾಗುತ್ತಿದೆ. ಮನೆಯಲ್ಲಿನ 3-4 ಸದಸ್ಯರೇ ಈ ಕಾಮಗಾರಿಯನ್ನು ನಿರ್ವಹಿಸಲು ಸಾಧ್ಯವಾಗಲಿದೆ. ಇನ್ನೂ 1,284 ಮುಂದುವರಿದ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆ. ಬಹುಪಾಲು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಮಾಡಿಕೊಳ್ಳುವ ಕುಟುಂಬಕ್ಕೆ ಬುನಾದಿ ಸೇರಿ ಇತರೆ ಕೆಲಸ ನಿರ್ಮಾಣಕ್ಕೆ ನರೇಗಾದಡಿ ಕೆಲಸ ನೀಡಲಾಗುತ್ತಿದೆ. ಅವು ಮುಂದುವರಿದ ಕಾಮಗಾರಿಗಳಾಗಿವೆ.

ಸಮುದಾಯಿಕ ಕೆಲಸ ಸ್ಥಗಿತ: ಕೋವಿಡ್ 19 ವೈರಸ್‌ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದೆ. ಲಾಕ್‌ಡೌನ್‌ ಘೋಷಣೆ ಮಾಡಿ ಮನೆಯಲ್ಲೇ ಇರಬೇಕು ಎಂಬ ಕಟ್ಟಾಜ್ಞೆ ಮಾಡಿದೆ. ಹಾಗಾಗಿ ಸಾಮುದಾಯಿಕವಾಗಿ ಕೆಲಸ ನೀಡಿದರೆ ತೊಂದರೆ ಎದುರಾಗಲಿದೆ ಎನ್ನುವುದನ್ನು ಅರಿತು ಜಿಲ್ಲಾ ಪಂಚಾಯತ್‌ ಗುಂಪು ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಕೆರೆಗಳ ಹೂಳೆತ್ತುವುದು. ಚೆಕ್‌ಡ್ಯಾಂ ಹೂಳೆತ್ತುವುದು, ಬದುಗಳ ಸಮತಟ್ಟು ಮಾಡುವಂತ ಕಾಮಗಾರಿಗಳು ಬಂದ್‌ ಮಾಡಲಾಗಿದೆ.

ಜನತೆ ಗುಂಪು ಸೇರದಂತ ಕಾಮಗಾರಿಗಳನ್ನೇ ನೀಡಲು ಜಿಪಂ ಯೋಜನೆ ರೂಪಿಸುತ್ತಿದೆ. ಅಲ್ಲದೇ ಕೈಲಸದ ಸ್ಥಳಗಳಲ್ಲೂ ಕೋವಿಡ್ 19 ಜಾಗೃತಿ ಮೂಡಿಸುತ್ತಿದೆ. ಒಟ್ಟಿನಲ್ಲಿ ಕೋವಿಡ್ 19  ಅಬ್ಬರದಿಂದ ಜನತೆಗೆ ದುಡಿಮೆ ಇಲ್ಲದಂತಾಗಿದೆ. ಇದ್ದರೂ ಅಲ್ಪಸ್ವಲ್ಪ ದುಡಿಮೆ ಮಾಡಿಕೊಳ್ಳಬೇಕಿದೆ.

ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸದ್ಯಕ್ಕೆ ಕೋವಿಡ್ 19 ವೈರಸ್‌ ನಿಯಂತ್ರಣಕ್ಕಾಗಿ ಸಾಮುದಾಯಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಹೊಲದ ಬದು ನಿರ್ಮಾಣದಂತಹ ಕಾಮಗಾರಿ ಮಾಡಿಕೊಳ್ಳಬಹುದು. ಇಲ್ಲಿವರೆಗೂ 33 ಸಾವಿರ ಮಾನವ ದಿನಗಳ ಸೃಜನೆ ಮಾಡಿದ್ದೇವೆ. ಕೆಲವೊಂದು ಮುಂದುವರಿದ ಕಾಮಗಾರಿಗಳು ನಡೆಯುತ್ತಿವೆ. –ರಘುನಂದನ್‌ ಮೂರ್ತಿ, ಜಿಪಂ ಸಿಇಒ, ಕೊಪ್ಪಳ

-ದತ್ತು ಕಮ್ಮಾರ

ಟಾಪ್ ನ್ಯೂಸ್

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್‌ ರೆಕಗ್ನಿಷನ್‌ ಇನ್ನು ಅಧಿಕೃತ ಪುರಾವೆ

Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್‌ ರೆಕಗ್ನಿಷನ್‌ ಇನ್ನು ಅಧಿಕೃತ ಪುರಾವೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉತ್ತಮ ಮಳೆ: ಬಿತ್ತನೆಗಾಗಿ ಡಿಎಪಿ ಗೊಬ್ಬರ ಖರೀದಿಸಲು ಮುಗಿಬಿದ್ದ ರೈತರು 

ಉತ್ತಮ ಮಳೆ: ಬಿತ್ತನೆಗಾಗಿ ಡಿಎಪಿ ಗೊಬ್ಬರ ಖರೀದಿಸಲು ಮುಗಿಬಿದ್ದ ರೈತರು 

21formers

ಆಪ್‌ ಜತೆ ರೈತ ಸಂಘ ಚುನಾವಣೆ ಕಣಕ್ಕೆ

ಕುಷ್ಟಗಿ: ಕೃತಿಕಾ ಮಳೆಗೆ ಭರ್ತಿಯಾದ ರಾಯನಕೆರೆ; ಜನರಲ್ಲಿ ಸಂತಸ

ಕುಷ್ಟಗಿ: ಕೃತಿಕಾ ಮಳೆಗೆ ಭರ್ತಿಯಾದ ರಾಯನಕೆರೆ; ಜನರಲ್ಲಿ ಸಂತಸ

17

7.18 ಎಕರೆ ಗಾಂವಠಾಣಾ ಸಂಗಾಪುರ ಗ್ರಾಪಂ ವಶಕ್ಕೆ

16

ಸರಿಯಾಗಿ ಕೆಲಸ ಮಾಡದಿದ್ರೆ ತೆಗೆದು ಹಾಕಿ

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.