

Team Udayavani, May 7, 2019, 1:05 PM IST
ಗಂಗಾವತಿ: ಕುರುಹೀನಶೆಟ್ಟಿ ಸಮಾಜದ ಸುಮಂಗಲಿಯರಿಂದ ನಗರದಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಯಿತು.
ಗಂಗಾವತಿ: ನಗರದ ನೀಲಕಂಠೇಶ್ವರ ದೇವಾಲಯ ನಿರ್ಮಾಣದ ಸುವರ್ಣಮಹೋತ್ಸವ ಹಾಗೂ ನೂತನ ಕಲ್ಯಾಣ ಮಂಟಪದ ಉದ್ಘಾಟನೆ ನಿಮಿತ್ತ ಸೋಮವಾರ ಕುರುಹೀನಶೆಟ್ಟಿ ಸಮಾಜದ ಸುಮಂಗಲಿಯರು ಹಮ್ಮಿಕೊಂಡಿದ್ದ 1008 ಕುಂಭ ಮೆರವಣಿಗೆ ಗಮನ ಸೆಳೆಯಿತು.
ನಗರದ ಶ್ರೀಚನ್ನಬಸವಸ್ವಾಮಿ ಮಲ್ಲಿಕಾರ್ಜುನ ಮಠದಿಂದ ಪ್ರಾರಂಭವಾದ ಮೆರವಣಿಗೆ ಮಹಾತ್ಮಗಾಂಧಿ ಬಸವಣ್ಣ ಮಳೆಮಲ್ಲೇಶ್ವರ ವೃತ್ತದ ಮೂಲಕ ಶ್ರೀನೀಲಕಂಠೇಶ್ವರ ದೇವಾಲಯ ತಲುಪಿತು. 1008 ಕುಂಭ ಹೊತ್ತ ಮಹಿಳೆಯರು ಭಂಡಾರ ಬಣ್ಣದ ಸೀರೆ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಭಜನಾ ತಂಡ, ಸಮಾಳ, ತಾಷಾ ಸೇರಿ ಹಲವು ಜಾನಪದ ಕಲಾ ತಂಡಗಳು ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಕುಂಭ ಮೆರವಣಿಗೆಗೆ ಕುರುಹೀನ ಶೆಟ್ಟಿ ಸಮಾಜದ ಜಗದ್ಗುರು ನೀಲಕಂಠ ಪಟ್ಟದಾರ್ಯ ಸ್ವಾಮೀಜಿ, ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಸೇರಿ ಕುರುಹೀನ ಶೆಟ್ಟಿ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಒಂದೂವರೆ ಕಿ.ಮೀ. ಉದ್ದದ ಮೆರವಣಿಗೆಯ ಮಾರ್ಗ ಮಧ್ಯೆ ಕುಂಭ ಹೊತ್ತ ಮಹಿಳೆಯರಿಗೆ ವಿವಿಧ ಸಮುದಾಯದವರು ನೀರು, ಮಜ್ಜಿಗೆ ವಿತರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು.
Ad
Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!
Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ
ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್: ಸಚಿವ ಮಧು ಬಂಗಾರಪ್ಪ
ಸಣ್ಣ ಉದ್ದಿಮೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರುದ್ಧ ಜು.23ರಿಂದ 2 ದಿನ ಬಂದ್
ಐಪಿಎಲ್ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ
You seem to have an Ad Blocker on.
To continue reading, please turn it off or whitelist Udayavani.