ಪುಟ್‌ಪಾತ್‌ ಒತ್ತುವರಿ ತೆರವಿಗೆ ಅಂಗಡಿಕಾರರ ವಿರೋಧ


Team Udayavani, Jan 4, 2020, 3:42 PM IST

kopala-tdy-1

ಕುಷ್ಟಗಿ: ಪುರಸಭೆಯಿಂದ ಟಿಪ್ಪು ಸುಲ್ತಾನ್‌ ವೃತ್ತದವರೆಗೂ ಫುಟ್‌ಪಾತ್‌ ಒತ್ತುವರಿ ಮಾಡಿರುವ ಅಂಗಡಿಗಳ ತೆರವು ಕಾರ್ಯಾಚರಣೆಗೆ ಅಂಗಡಿಕಾರರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿ, ಸ್ವಯಂ ಪ್ರೇರಿತ ತೆರವಿಗೆ ಜ.7ರವರೆಗೆ ಗಡುವು ವಿಸ್ತರಿಸಲಾಯಿತು.

ಶುಕ್ರವಾರ ಬೆಳ್ಳಂ ಬೆಳಗ್ಗೆ ಜೆಸಿಬಿ ಹಾಗೂ ಪೌರ ಕಾರ್ಮಿಕರು ಬಸವೇಶ್ವರ ವೃತ್ತದ ಕೋರ್ಟ್‌ ಕಾಂಪೌಂಡ್‌ ತೆರವು ಕಾರ್ಯಚರಣೆಗೆ ಮಂದಾದರು. ಇದರಿಂದ ರೊಚ್ಚಿಗೆದ್ದ ವ್ಯಾಪರಸ್ಥರು ಪುರಸಭೆ ಮುಖ್ಯಾ ಧಿಕಾರಿ ಅಶೋಕ ಪಾಟೀಲ, ಜೆ.ಇ. ಚಿದಾನಂದ ವಿರುದ್ಧ ಹರಿಹಾಯ್ದರು. ಇದನ್ನು ಲೆಕ್ಕಿಸದ ಪುರಸಭೆ ಸಿಬ್ಬಂದಿ ತೆರವು ಕಾರ್ಯಚರಣೆ ಮುಂದುವರಿಸಿದಾಗ ವಿರೋಧದ ಮಧ್ಯೆ ಕೆಲವರು ಸ್ವಯಂ ಪ್ರೇರಿತವಾಗಿ ಅಂಗಡಿಯಲ್ಲಿನ ಸರಕು, ಸರಂಜಾಮು ಸ್ಥಳಾಂತರಿಸಲು ಮುಂದಾಗಿರುವುದು ಕಂಡು ಬಂತು.

ವಾಗ್ವಾದ: ಪುರಸಭೆಯವರು ಈ ರಸ್ತೆ ಒಂದು ಬದಿ ಅಂಗಡಿಗಳ ತೆರವಿಗೆ ಗುರುವಾರ ಮೌಖೀಕವಾಗಿ ಸೂಚನೆ ನೀಡಲಾಗಿತ್ತು. ಆದರೆ ಏಕಾಏಕಿ ತೆರವು ಹೇಗೆ ಸಾಧ್ಯ ಪ್ರಶ್ನಿಸಿದರು. ಪುಟ್‌ಪಾತ್‌ನಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ಅಂಗಡಿ ಮಾಡಿಕೊಂಡಿದ್ದು, ತೆರವಿಗೆ ಕಾಲಾವಕಾಶ ನೀಡದಿರುವುದಕ್ಕೆ ಪುರಸಭೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ಪುರಸಭೆಯ 50ಕ್ಕೂ ಹೆಚ್ಚು ಮಳಿಗೆಗಳಿದ್ದು ಅವುಗಳನ್ನು ಬಾಡಿಗೆ ನೀಡಿಲ್ಲ. ಬಡವರು ಬೀದಿಗೆ ಬರುವಂತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಾಚರಣೆಗೆ ಅಡ್ಡಿ: ಈ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ, ನಗರ ಸ್ವತ್ಛತೆ ಸೌಂದರ್ಯದ ನೆಪದಲ್ಲಿ ಬಡ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಜಿಪಂ ಮಾಜಿ ಸದಸ್ಯ ಪರಸಪ್ಪ ಕತ್ತಿ, ಅಂಗಡಿಕಾರರ ಪರವಾಗಿ ನಿಂತು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತೆರವು ಕಾರ್ಯಚರಣೆಗೆ ಅಡ್ಡಿಪಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಠಾಣೆಯಲ್ಲಿ ಪುರಸಭೆ ಅಧಿ ಕಾರಿಗಳು ಹಾಗೂ ಅಂಗಡಿಕಾರರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಿಪಿಐ ಜಿ. ಚಂದ್ರಶೇಖರ, ಪುಟ್‌ಪಾತ್‌ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಪುಟ್‌ಪಾತ್‌ ನಿರ್ಮಿಸಬೇಕಿದೆ. ವ್ಯಾಪಾರಸ್ಥರು ಸಹಕರಿಸಿ ಜ. 7ರಂದು ಸಂಜೆ ವೇಳೆ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು. ಇಲ್ಲವಾದರೆ ಮಾರನೆ ದಿನ ಪುರಸಭೆಯೇ ತೆರವು ಕಾರ್ಯಾಚರಣೆ ಮುಂದುವರಿಸುತ್ತದೆ ಎಂದು ಹೇಳಿದರು. ಇದಕ್ಕೆ ವ್ಯಾಪಾರಸ್ಥರ ಸಮ್ಮತಿಯೂ ವ್ಯಕ್ತವಾಯಿತು.

ಟಾಪ್ ನ್ಯೂಸ್

LIC

LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?

1-asaasasa

Sikkim ಭಾರೀ ಮಳೆ: ಭೂಕುಸಿತದಲ್ಲಿ ಸಿಲುಕಿದ 1,200 ಪ್ರವಾಸಿಗರು

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsadsad

Bakrid ಶಾಂತಿಸಭೆ: ಗಂಗಾವತಿಯಲ್ಲಿ ಮುಸ್ಲಿಂ ಮುಖಂಡರ ಪರಸ್ಪರ ವಾಗ್ವಾದ

9-dotihala-1

Dotihala: ಬಸವಣ್ಣ ಮೂರ್ತಿಯ ಮುಂದೇ ಶಿವ; ವಿಶಿಷ್ಟ ದಿಡಗಿನ ಬಸವೇಶ್ವರ ದೇವಸ್ಥಾನ

Falls: ಕಪಿಲತೀರ್ಥ ಜಲಪಾತ…: ಇದು ಕಲ್ಯಾಣ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತ

Falls: ಕಪಿಲತೀರ್ಥ ಜಲಪಾತ…: ಇದು ಕಲ್ಯಾಣ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತ

ಒಂಟಿಗಾಲಲ್ಲೇ ಬದುಕು; ನಾಗರಾಜನಿಗೆ ಆಸರೆಯಾದ ಉದ್ಯೋಗ ಖಾತ್ರಿ

ಒಂಟಿಗಾಲಲ್ಲೇ ಬದುಕು; ನಾಗರಾಜನಿಗೆ ಆಸರೆಯಾದ ಉದ್ಯೋಗ ಖಾತ್ರಿ

ಶತಮಾನೋತ್ಸವ ಕಂಡ ಸರ್ಕಾರಿ ಶಾಲೆ: ದುರಸ್ತಿ ನೆಪದಲ್ಲಿ ಆರಂಭವಾಗದ ಪಾಠ

ಶತಮಾನೋತ್ಸವ ಕಂಡ ಸರ್ಕಾರಿ ಶಾಲೆ: ದುರಸ್ತಿ ನೆಪದಲ್ಲಿ ಆರಂಭವಾಗದ ಪಾಠ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

LIC

LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?

1-asaasasa

Sikkim ಭಾರೀ ಮಳೆ: ಭೂಕುಸಿತದಲ್ಲಿ ಸಿಲುಕಿದ 1,200 ಪ್ರವಾಸಿಗರು

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

pinarayi

ಅಗ್ನಿ ದುರಂತ; ಕುವೈಟ್‌ಗೆ ತೆರಳಲು ಸಚಿವೆಗೆ ಕೇಂದ್ರ ಅಡ್ಡಿ: ಕೇರಳ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.