
ಹನುಮಸಾಗರದ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವ
Team Udayavani, Feb 5, 2023, 9:28 PM IST

ಹನುಮಸಾಗರ :ಐತಿಹಾಸಿಕ ಹಿನ್ನಲೆಯಿರುವ ಹನಮಸಾಗರದ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವದ ರಥೋತ್ಸವ ಸಕಲಮಂಗಲ ವಾದ್ಯಗಳೊಂದಿಗೆ ರವಿವಾರ ಸಾಯಂಕಾಲ ಭಾರಿ ವಿಜೃಂಭಣೆಯಿಂದ ನಡೆಯಿತು.
ವೇ.ಮೂ. ಮುನಿಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಗಾಯಿತ್ರಿ ಹೋಮ, ಪಲ್ಲಕ್ಕಿ ಉತ್ಸವ, ಉಚ್ಚಯ್ಯ ಕಾರ್ಯಕ್ರಮಗಳು ಜರುಗಿದವು. ಶ್ರೀ ಬನಶಂಕರಿ ದೇವಿ ಈ ಭಾಗದಲ್ಲಿ ವಿಶೇಷ ಪವಾಡಗಳಿಂದ ಪ್ರಸಿದ್ಧಿ ಹೊಂದಿದ್ದು ವಿಶೇಷ.
ಭಜನೆ
ವರ್ಷವಿಡಿ ಶ್ರೀಬನಶಂಕರಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ದೇವಿಗೆ ಅಭಿಷೇಕ ಭಜನೆ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.
ಪಲ್ಲಕ್ಕಿ ಉತ್ಸವ
ವರ್ಷವಿಡಿ ಶ್ರೀಬನಶಂಕರಿ ದೇವಸ್ಥಾನದಲ್ಲಿ ಪ್ರತಿ ಪೌರ್ಣಮಿಯ ದಿನದಂದು ಪಲ್ಲಕ್ಕಿ ಉತ್ಸವ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುವುದು ವಿಷೇಶ.
ಈ ಜಾತ್ರೆಯ ಅಂಗವಾಗಿ ಶನಿವಾರ ಸಂಜೆ ರಥೋತ್ಸವದ ಕಳಸದ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಲವು ವಾದ್ಯಗಳೊಂದಿಗೆ, ಭಜನೆಯೊಂದಿಗೆ ನಡೆಸಲಾಯಿತು.
ಭಾರತ ಹುಣ್ಣುಮೆಯ ಜಾತ್ರೆಯ ದಿನವಾದ ಇಂದು ಬೆಳಿಗ್ಗೆಯಿಂದಲೆ ಬನಶಂಕರಿ ದೇವಿಗೆ ಅಭಿಶೇಕ , ಹೋಮ ಹವನಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ವೀರಪ್ಪ ಸಿನ್ನೂರ, ಶಂಕ್ರಪ್ಪ ಸಪ್ಪಂಡಿ, ಬಸವರಾಜ ಸಿನ್ನೂರ, ರವಿ ಸಿನ್ನೂರ, ಶ್ರೀನಿವಾಸ ಸಿನ್ನೂರ, ಮಹೇಶ ಹುಲಮನಿ, ರಾಘವೇಂದ್ರ, ಹನಮಂತಗೌಡ ಸಿನ್ನೂರ ಬಸವರಾಜ ಸಿನ್ನೂರ, , ದೆವಸ್ಥಾನದ ಅರ್ಚಕರಾದ ರಾಘವೆಂದ್ರ ಸಿನ್ನೂರ, ಮಂಜುನಾಥ ಸಿನ್ನೂರ, ರಾಮನಗೌಡ ಸಿನ್ನೂರ ಇದ್ದರು.
ಬನಶಂಕರಿ ದೇವಿಯ ರಥೋತ್ಸವದ ಹಗ್ಗವನ್ನು ಮಡಿಕ್ಕೇರಿ ಗ್ರಾಮದ ಮೂಲಕ ಮೆರವಣಿಗೆಯಲ್ಲಿ ಬಂದ ಬಳಕ ರವಿವಾರ ಸಾಯಂಕಾಲ ಬನಶಂಕರಿ ರಥೋತ್ಸವದಲ್ಲಿ ಹನುಮಸಾಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರ ಪಾಲ್ಗೊಂಡರು.
ಈ ರಥೋತ್ಸವದಲ್ಲಿ “ಬನಶಂಕರಿ ನಿನ್ ಪಾದಕ್ ಶಂಬೂಕೋ” ಎಂಬ ವೇದಘೋಷಣೆ ಭಕ್ತರ ಕೂಗು ಮುಗಿಲು ಮುಟ್ಟಿತು ರಥೋತ್ಸವದ ಬಳಿಕ ಬಾನಂಗಳದಲ್ಲಿ ಪಟಾಕ್ಷಿಗಳ ಬಣ್ಣಬಣ್ಣದ ಚಿತ್ತಾರ ಜನರನ್ನು ಆಕರ್ಷಿಸಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಫೆ ೬ ರಂದು ಸೋಮವಾರ ಸಂಗೀತ ಮತ್ತು ಹಾಸ್ಯ ಕಾರ್ಯಕ್ರಮವು ಸಂಜೆ ೬ ಗಂಟೆಗೆ ಜರುಗುವುದು ಸಂಗೀತ ಹಾಸ್ಯ ಕಾರ್ಯಕ್ರಮವನ್ನು ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ದೊಡ್ಡನಗೌಡ ಪಾಟೀಲ ಉದ್ಘಾಟನೆಯನ್ನು ನೇರವೇರಿಸುವರು, ಸಂಗೀತ ಕಾರ್ಯಕ್ರಮವನ್ನು ಜುಮ್ಮನಗೌಡ ಪಾಟೀಲ ಹಾಗೂ ಹಾಸ್ಯ ಕಾರ್ಯಕ್ರಮವನ್ನು ಜನಪದ ಹಾಸ್ಯ ಕಲಾವಿದ ಜೀವನಸಾಬ ಬಿನ್ನಾಳ ಅವರು ನಡೆಸಿಕೊಡಲಿದ್ದಾರೆ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಉಪಾದ್ಯಕ್ಷರು ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಷ್ಟಗಿ: ಅಪಾಯದ ವಿದ್ಯುದ್ದಿಪದ ಕಂಬ ತೆರವುಗೊಳಿಸಿದ ಪುರಸಭೆ

ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಪಾಯವನ್ನು ಆಹ್ವಾನಿಸುತ್ತಿದೆ ವಿದ್ಯುತ್ ಕಂಬ

ಅಂಜನಾದ್ರಿ ಬೆಟ್ಟ ಹತ್ತುವ ವೇಳೆ ಹೃದಯಾಘಾತ: ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತ್ಯು

ಎರಡನೇ ಪಟ್ಟಿಯಲ್ಲಿ ಹೆಸರು ಖಂಡಿತ: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಚಿವ ಅನ್ಸಾರಿ ಆಡಿಯೋ ವೈರಲ್

ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗ ಕೈ ಬಿಡುವ ಭರವಸೆ ನೀಡಿದ ಗಾಲಿ ರೆಡ್ಡಿ
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್