ಮಲ್ಲಾಪುರ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ತಹಸೀಲ್ದಾರ್ ದಾಳಿ  

ತಹಸೀಲ್ದಾರ್ ಸಿಬ್ಬಂದಿಗಳ ಮೇಲೆ ತಿರುಗಿಬಿದ್ದ ಅಕ್ರಮ ದಂಧೆಕೋರರು ಪೊಲೀಸರ ನೆರವಿನಿಂದ ಪಾರು

Team Udayavani, Sep 13, 2021, 5:10 PM IST

Tehsildar attacks on illegal stone mining in Mallapur

ಗಂಗಾವತಿ : ತಾಲ್ಲೂಕಿನ ಮಲ್ಲಾಪುರ ರಾಂಪುರ ವೆಂಕಟಗಿರಿ ಮತ್ತು ಮೆಡಿಕಲ್ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಕಲ್ಲುಕ್ವಾರಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು ಖಚಿತ ಮಾಹಿತಿಯ ಮೇರೆಗೆ ತಹಸೀಲ್ದಾರ್ ಯು .ನಾಗರಾಜ ತಮ್ಮ ಕಂದಾಯ ಇಲಾಖೆಯ ಸಿಬ್ಬಂದಿಗಳರವಿವಾರ ಮಧ್ಯ ಮಧ್ಯರಾತ್ರಿ ಮಲ್ಲಾಪುರ ಭಾಗದಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಕೊಲ್ಲಾಪುರಕ್ಕೆ ಸಾಗಿಸುತ್ತಿದ್ದ ಲಾರಿಗಳು ಮತ್ತು  ಟ್ರ್ಯಾಕ್ಟರ್ ಗಳ ಮೇಲೆ ದಾಳಿ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಮೂವತ್ತು ಕ್ಕೂ ಹೆಚ್ಚು ಜನರಿದ್ದ ಅಕ್ರಮ ದಂಧೆಕೋರರು ತಹಸೀಲ್ದಾರ್ ಹಾಗೂ ಅವರ ಸಿಬ್ಬಂದಿಯ ಮೇಲೆ ದಾಳಿಗೆ ಯತ್ನ ನಡೆಸಿದ್ದಾರೆ ಈ ಮಧ್ಯೆ ತಹಸಿಲ್ಧಾರ್ ಪೊಲೀಸ್ ಇಲಾಖೆ ಅವರಿಗೆ ದೂರವಾಣಿ ಮೂಲಕ ಕರೆ ಅವರ ನೆರವಿನಿಂದ ಲಾರಿ ಹಾಗೂ ಟ್ರ್ಯಾಕ್ಟರ್ ಗಳನ್ನು ಹಿಡಿದುಕೊಂಡು ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಪೋಲಿಸ್ ಠಾಣೆಗೆ ಟ್ರ್ಯಾಕ್ಟರ್ ಗಳನ್ನು ಕರೆದುಕೊಂಡು ಹೋಗುತ್ತಿರುವಾಗ ಅಕ್ರಮ ದಂಧೆಕೋರರು ಟ್ರ್ಯಾಕ್ಟರ್ ಗಳನ್ನು ಮಾರ್ಗಮಧ್ಯೆ ಬೇರೆಡೆ ಸಾಗಿಸಲು ಯತ್ನಿಸಿ ತಹಸೀಲ್ದಾರ್ ಹಾಗೂ ಅವರ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ವೇದ ಪಾಠಶಾಲೆ ವಿದ್ಯಾರ್ಥಿಗಳ ಕೈಚಳಕದಿಂದ ಅರಳಿದ ಮಣ್ಣಿನ ಗಣಪತಿ ಮೂರ್ತಿಗಳು

ಮಲ್ಲಾಪುರ ವಿಶ್ವಪರಂಪರಾ ಪ್ರದೇಶದ ಪಟ್ಟಿಯಲ್ಲಿರುವ ಊರಾಗಿದ್ದು ಸುತ್ತಲೂ 7ಗುಡ್ಡ ಪ್ರದೇಶವಿದೆ ಇಲ್ಲಿ ಅಮೂಲ್ಯವಾದ ಗುಹಾ ಚಿತ್ರಗಳಿದ್ದು ಮತ್ತು ಇಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದು ನಿಷಿದ್ಧವಾಗಿದೆ.

ಈ ಮಧ್ಯೆ ರಾಜಕೀಯ ಪಕ್ಷಗಳ ಮುಖಂಡರು ಇಲ್ಲೂ ಕಲ್ಲು ಗಣಿಗಾರಿಕೆ ನಡೆಸಲು ತಾವು ಅವಕಾಶ ಕಲ್ಪಿಸುವುದಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದ್ಧು ರಾಜಕಾರಣಿಗಳ ಭರವಸೆ ಹಿನ್ನೆಲೆಯಲ್ಲಿ ಪುನಃ ಅಕ್ರಮ ಕಲ್ಲು ಹೊಡೆದು ದ್ರಾಕ್ಷಿಹಣ್ಣಿನ ತೋಟಗಳಿಗಾಗಿ ಮಹಾರಾಷ್ಟ್ರ ಆಂಧ್ರ ಪ್ರದೇಶಕ್ಕೆ ಕಲ್ಲುಕಂಬಗಳನ್ನು ಸಾಗಿಸುವ ದಂಧೆಯನ್ನು ಹಗಲು ರಾತ್ರಿ ನಿರಂತರವಾಗಿ ನಡೆಸಲಾಗುತ್ತಿದೆ.ಖಚಿತ ಮಾಹಿತಿಯ ಮೇರೆಗೆ ರವಿವಾರ ರಾತ್ರಿ 2.30 ಕ್ಕೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಲಾರಿ ಹಾಗೂ ಟ್ರ್ಯಾಕ್ಟರ್ ಗಳನ್ನು ಜಪ್ತಿ ಮಾಡಿದ್ದಾರೆ.ಲಾರಿ ಹಾಗೂ ಟ್ರ್ಯಾಕ್ಟರ್ ಗಳನ್ನು ಸೀಜ್ ಮಾಡುವಾಗ ಅಕ್ರಮ ದಂಧೆಕೋರರು ಮತ್ತು ತಹಸೀಲ್ದಾರ್ ನಡುವೆ ವಾಗ್ವಾದ ಜರುಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಸದ್ಯ 1ಲಾರಿ ಹಾಗೂ 1 ಟ್ರ್ಯಾಕ್ಟರ್ ನ ಪೋಲಿಸ್ ಠಾಣೆಗೆ ಒಪ್ಪಿಸಲಾಗಿದ್ದು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಭದ್ರತೆ ನೀಡಲು ಮನವಿ:ಅಕ್ರಮ ಕಲ್ಲು ಗಣಿಗಾರಿಕೆ ಮರಳು ಗಣಿಗಾರಿಕೆ ನಡೆಸುವವರ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ಪದೇ ಪದೇ ದಾಳಿ ಮಾಡಿ ಕೇಸ್ ದಾಖಲಿಸಿದ್ದು ಇದನ್ನು ಸಹಿಸದ ಅಕ್ರಮ ದಂಧೆಕೋರರು ಹಲ್ಲೆ ಹಾಗೂ ನಿಂದನೆಯಂತಹ ಕೃತ್ಯವೆಸಗುತ್ತಿದ್ದಾರೆ ಸರಕಾರ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಕಂದಾಯ ಇಲಾಖೆಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಲ್ಲಾಪುರ ಹತ್ತಿರ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿ ಕಲ್ಲು ಕಂಬಗಳನ್ನು ಮಹಾರಾಷ್ಟ್ರ ಆಂಧ್ರ ಪ್ರದೇಶಕ್ಕೆ ಸಾಗಿಸುತ್ತಿದ್ದ ಲಾರಿ ಮತ್ತು ಟ್ರ್ಯಾಕ್ಟರ್ ಗಳನ್ನು ಜಪ್ತಿ ಮಾಡಲಾಗಿದೆ ಈಗಾಗಲೇ ಗ್ರಾಮೀಣ ಠಾಣೆಯಲ್ಲಿ ದೂರು 1ಲಾರಿ 1ಟ್ರ್ಯಾಕ್ಟರ್ ನ ವಶಕ್ಕೆ ನೀಡಲಾಗಿದೆ ಎಂದು ತಹಸೀಲ್ದಾರ್ ಯು. ನಾಗರಾಜ ಉದಯವಾಣಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : “ಇನ್ನೂ ಸಮಯ ಇದೆ”: ಕಲಬುರಗಿ ಪಾಲಿಕೆ ಬೆಂಬಲ ವಿಚಾರದಲ್ಲಿ ಕುಮಾರಸ್ವಾಮಿ ನಡೆ ಇನ್ನೂ ನಿಗೂಢ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.