ಎಗ್ಗಿಲ್ಲದೇ ನಡೆದಿದೆ ಅಕ್ರಮ ಮರುಳು ಸಾಗಾಟ ದಂಧೆ


Team Udayavani, May 13, 2019, 4:27 PM IST

kopp-4

ಕನಕಗಿರಿ: ತಾಲೂಕಿನ ನವಲಿ, ಯತ್ನಟ್ಟಿ, ಬುನ್ನಟ್ಟಿ, ಕರಡೋಣಿ ಸೇರಿದಂತೆ ಹಲವೆಡೆ ಅಕ್ರಮ ಮರಳು ಸಾಗಾಣಿಕೆ ರಾಜರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಸರ್ಕಾರದ ಬೊಕ್ಕಸ ಸೇರಬೇಕಾದ ಹಣ ದಂಧೆಕೋರರ ಜೇಬು ತುಂಬುತ್ತಿದೆ. ಯಾವುದೇ ಪರವಾನಗಿ ಇಲ್ಲದೇ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೇ ಮೌನವಾಗಿದ್ದಾರೆ.

ತಾಲೂಕಿನ ನವಲಿ, ಯತ್ನಟ್ಟಿ, ಬುನ್ನಟ್ಟಿ, ಕರಡೋಣಿ ಗ್ರಾಮದ ಹಳ್ಳ ಮತ್ತು ಖಾಸಗಿ ಜಮೀನಿನಲ್ಲಿ ದೊರೆಯುವ ಮರುಳನ್ನು ಕನಕಗಿರಿ, ಗಂಗಾವತಿ, ರಾಯಚೂರು, ಕುಷ್ಟಗಿ, ತಾವರಗೇರಾ, ಸಿಂಧನೂರು ಪಟ್ಟಣ ಸೇರಿದಂತೆ ವಿವಿಧ ನಗರಗಳಿಗೆ ಅಕ್ರಮವಾಗಿ ಮರಳನ್ನು ಸಾಗಿಸಲಾಗುತ್ತಿದೆ. ರಾತ್ರಿ ವೇಳೆ ಮರುಳನ್ನು ಯಾರ ಭಯವಿಲ್ಲದೇ ಸಾಗಿಸುತ್ತಿದ್ದು, ವಾಹನ ಶಬ್ಧದಿಂದ ಗ್ರಾಮಸ್ಥರು ನಿದ್ದೆಯನ್ನೇ ಮಾಡುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಸಂಬಂಧಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಅಕ್ರಮವಾಗಿ ಮರುಳು ಸಾಗಿಸುವವರು ಅಧಿಕಾರಿಗಳಿಗೆ ಪ್ರತಿ ತಿಂಗಳ ಲಕ್ಷಾಂತರ ರೂ. ಮಾಮೂಲಿ ನೀಡುತ್ತಿದ್ದಾರೆ ಎಂಬ ವಂದತಿಯು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಅಕ್ರಮ ಮರುಳು ಸಾಗಾಣಿಕೆಯ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳತ್ತಿಲ್ಲ. ಇದರಿಂದ ರಾಜರೋಷವಾಗಿ ಯಾರ ಭಯವಿಲ್ಲದೇ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ.

ಚೆಕ್‌ ಪೋಸ್ಟ್‌ ನಿರ್ಮಿಸಿಲ್ಲ: ತಾಲೂಕಿನ ನವಲಿ, ಯತ್ನಟ್ಟಿ, ಬುನ್ನಟ್ಟಿ, ಕರಡೋಣಿ ಭಾಗದಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದರೂ ಕೂಡಾ ಅಧಿಕಾರಿಗಳು ಇದುವರೆಗೂ ಚೆಕ್‌ ಪೋಸ್ಟ್‌ ನಿರ್ಮಾಣಕ್ಕೆ ಮುಂದಾಗಿಲ್ಲ. ಇದರಿಂದ ಸಲಿಸಾಗಿ ರಾತ್ರಿ ವೇಳೆ ಮರುಳನ್ನು ಸಾಗಿಸುತ್ತಿದ್ದಾರೆ. ಚೆಕ್‌ ಪೋಸ್ಟ್‌ ನಿರ್ಮಾಣ ಮಾಡದೇ ಇರುವದರಿಂದ ಸಾರ್ವಜನಿಕರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತಾಲೂಕಿನಲ್ಲಿ ನಡೆಯುವ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಪೊಲೀಸ್‌ ಮತ್ತು ಕಂದಾಯ ಇಲಾಖೆಯ ಗಮನಕ್ಕೆ ಇದ್ದರೂ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ.

ಸ್ಥಳೀಯರಿಗಿಲ್ಲ ಮರಳು: ಅಕ್ರಮವಾಗಿ ಮರುಳನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುವುದರಿಂದ ಸ್ಥಳೀಯರಿಗೆ ಮನೆ ಕಟ್ಟಲು ಮರುಳು ಸಿಗದಂತಾಗಿದೆ. ಇದರಿಂದ ಅನಿವಾರ್ಯವಾಗಿ ಹೆಚ್ಚು ಬೆಲೆ ನೀಡಿ ಮರುಳು ಖರೀದಿಸುತ್ತಿದ್ದಾರೆ. ಸರ್ಕಾರದಿಂದ ಮಂಜೂರಾದ ಆಶ್ರಯ ಮನೆಗಳಿಗೆ ಮರಳು ಸಿಗದೇ ಫಲಾನುಭವಿಗಳು ಪರದಾಡುವಂತಾಗಿದೆ.

ಅಕ್ರಮ ತಡೆಗೆ ಮುಂದಾಗದ ಸಮಿತಿ: ಅಕ್ರಮವಾಗಿ ಮರುಳು ಸಾಗಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು 18 ಇಲಾಖೆ ಅಧಿಕಾರಿಗಳು ಒಳಗೊಂಡಂತಹ ಒಂದು ಸಮಿತಿ ರಚಿಸಲಾಗಿದೆ. ಆದರೆ ಅಕ್ರಮ ಮರುಳು ಸಾಗಾಣಿಕೆಯನ್ನು ತಡೆಗಟ್ಟಬೇಕಾದ ಸಮಿತಿಯ ಸದಸ್ಯರ ಸಮನ್ವಯ ಕೊರತೆಯಿಂದ ನಿರಾತಂಕವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ ್ಯದಿಂದ ಸರ್ಕಾರ ಬೊಕ್ಕಸಕ್ಕೆ ಸೇರಬೇಕಾದ ಲಕ್ಷಾಂತರ ರೂ. ದಂಧೆಕೋರರ ಪಾಲಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ಅಕ್ರಮ ಮರುಳು ತಡೆಯಲು ಸಮಿತಿ ರಚಿಸಲಾಗಿದೆ. ಪ್ರತಿದಿನವೂ ನಿಗಾವಹಿಸಿ ಅಕ್ರಮ ಮರುಳು ಸಾಗಾಟ ತಡೆಯುವಂತೆ ಸೂಚಿಸಲಾಗಿದೆ.

•ರವಿ ಅಂಗಡಿ, ತಹಶೀಲ್ದಾರ್‌

ಅಕ್ರಮ ಮರುಳು ಸಾಗಾಟ ಮಾಡುವ ವಾಹನಗಳು ರಾತ್ರಿ ವೇಳೆ ಅವ್ಯಾಹತವಾಗಿ ಸಂಚರಿಸುತ್ತಿದ್ದು, ರಸ್ತೆ ಪಕ್ಕದ ಮನೆಯಲ್ಲಿ ವಾಸಿಸುವವರಿಗೆ ನಿದ್ದೆ ಬರುತ್ತಿಲ್ಲ. ಈ ಕುರಿತು ಅಧಿಕಾರಿಗಳಿಗೆ ಹಲವಾರು ಭಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

•ದೊಡ್ಡ ಬಸವ, ಹಿರೆಖೇಡ ಗ್ರಾಮಸ್ಥ

ಶರಣಪ್ಪ ಗೋಡಿನಾಳ

ಟಾಪ್ ನ್ಯೂಸ್

ಶಶಿಕಲಾ ಸೇರ್ಪಡೆ ವರಿಷ್ಠರ ನಿರ್ಧಾರ:.ಪನ್ನೀರ್‌ಸೆಲ್ವಂ

ಶಶಿಕಲಾ ಸೇರ್ಪಡೆ ವರಿಷ್ಠರ ನಿರ್ಧಾರ:.ಪನ್ನೀರ್‌ಸೆಲ್ವಂ

ನೀಟ್‌-ಪಿಜಿ ಕೌನ್ಸೆಲಿಂಗ್‌ ಪ್ರಕ್ರಿಯೆ ಮತ್ತಷ್ಟು ವಿಳಂಬ

ನೀಟ್‌-ಪಿಜಿ ಕೌನ್ಸೆಲಿಂಗ್‌ ಪ್ರಕ್ರಿಯೆ ಮತ್ತಷ್ಟು ವಿಳಂಬ

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಕ್ಷೇತ್ರದಲ್ಲಿ ಬಹುದೊಡ್ಡ ಗೌರವವಿದೆ ರೋಷನ್ ಶ್ರೀಕಾಂತ್

ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಕ್ಷೇತ್ರದಲ್ಲಿ ಬಹುದೊಡ್ಡ ಗೌರವವಿದೆ ರೋಷನ್ ಶ್ರೀಕಾಂತ್

24koppala

ಕುಷ್ಟಗಿ: ರಕ್ತದಾನ ಮಾಡಿ ಮಾದರಿಯಾದ ತಹಶಿಲ್ದಾರ್

21publisher

ಪ್ರಕಾಶಕರು ಆರ್ಥಿಕವಾಗಿ ಸದೃಢರಾಗಲಿ

ಕುಷ್ಟಗಿ: ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ವೃದ್ದ

ಕುಷ್ಟಗಿ: ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ವೃದ್ದ

ಜಿಲ್ಲಾಸ್ಪತ್ರೆ ಸಮಸ್ಯೆ ವಾರದಲ್ಲಿ ಇತ್ಯರ್ಥ: ಆಚಾರ್‌

ಜಿಲ್ಲಾಸ್ಪತ್ರೆ ಸಮಸ್ಯೆ ವಾರದಲ್ಲಿ ಇತ್ಯರ್ಥ: ಆಚಾರ್‌

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಶಶಿಕಲಾ ಸೇರ್ಪಡೆ ವರಿಷ್ಠರ ನಿರ್ಧಾರ:.ಪನ್ನೀರ್‌ಸೆಲ್ವಂ

ಶಶಿಕಲಾ ಸೇರ್ಪಡೆ ವರಿಷ್ಠರ ನಿರ್ಧಾರ:.ಪನ್ನೀರ್‌ಸೆಲ್ವಂ

ನೀಟ್‌-ಪಿಜಿ ಕೌನ್ಸೆಲಿಂಗ್‌ ಪ್ರಕ್ರಿಯೆ ಮತ್ತಷ್ಟು ವಿಳಂಬ

ನೀಟ್‌-ಪಿಜಿ ಕೌನ್ಸೆಲಿಂಗ್‌ ಪ್ರಕ್ರಿಯೆ ಮತ್ತಷ್ಟು ವಿಳಂಬ

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಧಾರವಾಡದ ಮಣ್ಣಿನಲ್ಲಿದೆ ಕಲೆಯ ಸತ್ವ: ಕುಂಬಿ

ಧಾರವಾಡದ ಮಣ್ಣಿನಲ್ಲಿದೆ ಕಲೆಯ ಸತ್ವ: ಕುಂಬಿ

ಕನ್ನಡ ಹೃದಯ ಶ್ರೀಮಂತಿಕೆ ಭಾಷೆ:ಸಾಹಿತಿ ಡಾ| ಗುರುಲಿಂಗ

ಕನ್ನಡ ಹೃದಯ ಶ್ರೀಮಂತಿಕೆ ಭಾಷೆ:ಸಾಹಿತಿ ಡಾ| ಗುರುಲಿಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.