ಮೂಲಸೌಲಭ್ಯಕ್ಕೆ ಅನುದಾನ ಕಲ್ಪಿಸಲು ಕ್ರಮ

Team Udayavani, Dec 23, 2020, 3:41 PM IST

ಮೂಲಸೌಲಭ್ಯಕ್ಕೆ ಅನುದಾನ ಕಲ್ಪಿಸಲು ಕ್ರಮ

ಮಂಡ್ಯ: ನಗರದ ಹಾಲಹಳ್ಳಿ ಹಾಗೂ ಹೊರವಲಯದ ಚಿಕ್ಕಮಂಡ್ಯ ಬಳಿ ಕೊಳಗೇರಿ ನಿವಾಸಿಗಳ ವಾಸಕ್ಕೆ ನಿರ್ಮಿಸುತ್ತಿರುವ ವಸತಿ ಕಟ್ಟಡಗಳ ಕಾಮಗಾರಿಯನ್ನು ಸಂಸದೆ ಸುಮಲತಾ ಅಂಬರೀಷ್‌ ವೀಕ್ಷಿಸಿದರು.

ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಕೊಳಗೇರಿನಿವಾಸಿಗಳಿಗೆ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್‌ ಗಾಂಧಿ ಆವಾಸ್‌ ಯೋಜನೆಯಡಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ಮಂಡ್ಯ ನಗರದ ಚಿಕ್ಕ ಮಂಡ್ಯ ಹಾಗೂ ಹಾಲಹಳ್ಳಿ ಸಮೀಪ ನಿರ್ಮಿಸುತ್ತಿರುವ ಮೂಲಭೂತ ಸೌಕರ್ಯವಿರುವ ವಾಸಕ್ಕೆಯೋಗ್ಯವಾದ ವಸತಿಕಟ್ಟಡಗಳ ಕಾಮಗಾರಿಯ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು.

ಅನುದಾನ ಬಿಡುಗಡೆಗೆ ಪ್ರಯತ್ನ: ನಂತರ ಮಾತನಾಡಿದ ಅವರು, ಕೊಳಚೆ ಪ್ರದೇಶದ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೊರತೆಯಿರುವ ಅನುದಾನ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತಂದಿರುವುದು ನನ್ನ ಗಮನದಲ್ಲಿದೆ.ಈ ಕುರಿತು ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚಿಸಿ, ವಸತಿ ಇಲಾಖೆ ವತಿಯಿಂದ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಕಾಮಗಾರಿ ಪೂರ್ಣಕ್ಕೆ ಸೂಚನೆ: ನಂತರ ಕಾಮಗಾರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಂಸದರು, ಈ ಹಿಂದೆ ಕರ್ನಾಟಕ ರಾಜ್ಯದ ವಸತಿ ಸಚಿವರಾಗಿದ್ದ ಡಾ.ಅಂಬರೀಷ್‌ ಅವರು ಈ ಯೋಜನೆಗೆ ಚಾಲನೆ ನೀಡಿದ್ದು, ಅಂದಿನಿಂದ ಈವರೆಗೂ ಕೊಳಗೇರಿ ನಿವಾಸಿಗಳಿಗೆ ಮೂಲಭೂತ ಸೌಕರ್ಯವಿರುವ ಕಟ್ಟಡ ನಿರ್ಮಾಣ ಕಾಮಗಾರಿಯು ವಿಳಂಬವಾಗಿ ನಡೆಯುತ್ತಿದೆ. ಇದರಿಂದ ಕೊಳಚೆ ಪ್ರದೇಶದ ನಿರಾಶ್ರಿತರು ಕಷ್ಟಕರವಾದ ವಾತಾವರಣದಲ್ಲಿ ಬದುಕು ನಡೆಸುತ್ತಿದ್ದಾರೆ. ಹವಾಮಾನ ವೈಪರಿತ್ಯದಿಂದ ಅಹಿತಕರ ಘಟನೆ ಉಂಟಾಗಿ ಅನಾಹುತಗಳು ಸಂಭವಿಸುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಆದ್ಯತೆ ಮೇಲೆ ಅತಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಬೇಕುಎಂದುಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಆಯುಕ್ತ ಎಂ.ಲೋಕೇಶ್‌, ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್‌ಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳಿದ್ದರು.

ಟಾಪ್ ನ್ಯೂಸ್

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

1-asdas

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

State Government ಎಲ್ಲರೊಂದಿಗೆ ಚರ್ಚಿಸಿ ಸಂಕಷ್ಟ ಸೂತ್ರ ಸಿದ್ಧಪಡಿಸಿ ಮುನ್ನಡೆಯಲಿ

State Government ಎಲ್ಲರೊಂದಿಗೆ ಚರ್ಚಿಸಿ ಸಂಕಷ್ಟ ಸೂತ್ರ ಸಿದ್ಧಪಡಿಸಿ ಮುನ್ನಡೆಯಲಿ

krs

Karnataka Bandh: ಮಂಡ್ಯ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

tdy-5

Pandavapur: ಅಕ್ರಮ ದಾಖಲೆ ಸೃಷ್ಟಿ ಆರೋಪ: ಅಧಿಕಾರಿಗಳ ಪರಿಶೀಲನೆ

Road Mishap: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ್ಯು

Road Mishap: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ್ಯು

Cauvery issue; ನಟ ದರ್ಶನ್‌ ವಿರುದ್ಧ ಕಾವೇರಿ ಹೋರಾಟಗಾರರ ಆಕ್ರೋಶ

Cauvery issue; ನಟ ದರ್ಶನ್‌ ವಿರುದ್ಧ ಕಾವೇರಿ ಹೋರಾಟಗಾರರ ಆಕ್ರೋಶ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

army

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.