500 ಕ್ಕೂ ಹೆಚ್ಚು ಆಲೆಮನೆ: ಕೇವಲ 10 ಕ್ಕೆ ಪರವಾನಗಿ

ಆತ್ಮನಿರ್ಭರ್‌ ಭಾರತ್ ‌ಗೆ ಆಯ್ಕೆಯಾದ ಬೆಲ್ಲದ ಬ್ರ್ಯಾಂಡ್‌ಗೆ ಹಿನ್ನೆಡೆ

Team Udayavani, Mar 17, 2021, 2:09 PM IST

500 ಕ್ಕೂ ಹೆಚ್ಚು ಆಲೆಮನೆ: ಕೇವಲ 10 ಕ್ಕೆ ಪರವಾನಗಿ

ಮಂಡ್ಯ: ಜಿಲ್ಲೆಯಲ್ಲಿ ಸುಮಾರು 1500ಕ್ಕೂ ಹೆಚ್ಚು ಆಲೆಮನೆಗಳಿದ್ದು, ಪ್ರಸ್ತುತ 500ಕ್ಕೂ ಹೆಚ್ಚು ಆಲೆಮನೆ ನಡೆಯುತ್ತಿವೆ. ಆದರೆ, ಇದರಲ್ಲಿ ಕೇವಲ 10 ಆಲೆಮನೆಗಳಿಗೆ ಮಾತ್ರ ಪರವಾನಗಿ ನೀಡಲಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ನೀಡಲಾಗುತ್ತಿದ್ದು, ಸ್ಥಳೀಯ ಗ್ರಾಪಂಗಳಿಗೆಅಧಿಕಾರ ನೀಡಲಾಗಿದೆ. ಆದರೆ, ಪರವಾನಗಿಪಡೆಯದೇ ನಡೆಸುತ್ತಿರುವ ಆಲೆಮನೆಗಳು ಹೆಚ್ಚಾಗಿದೆ. ಕೆಲವು ರೈತರು ತಾವೇ ಆಲೆಮನೆಗಳನ್ನು ನಡೆಸುತ್ತಿದ್ದರೆ, ಬಹುತೇಕ ಮಂದಿ ಹೊರ ರಾಜ್ಯದವರಿಗೆ ಬಾಡಿಗೆ ಹಾಗೂ ಗುತ್ತಿಗೆ ಆಧಾರದ ಮೇಲೆ ಆಲೆಮನೆ ನೀಡಿದ್ದಾರೆ.ಆದರೆ ಅದಕ್ಕೆ ಯಾವುದೇ ಪರವಾನಗಿ ಪಡೆದಿಲ್ಲ.

ಸಾವಯವ ಬೆಲ್ಲ ತಯಾರಿಕೆ ಆಲೆಮನೆಗಳಿಗೆ  ಆತಂಕ: ಜಿಲ್ಲೆಯ ವಿವಿಧೆಡೆ ಕಳಪೆ ಗುಣಮಟ್ಟದ ಬೆಲ್ಲ ಉತ್ಪಾದನೆ ಆಗುತ್ತಿರುವುದರಿಂದ ಮಂಡ್ಯ ಬೆಲ್ಲದಬ್ರ್ಯಾಂಡ್‌ಗೆ ಹಿನ್ನೆಡೆಯಾಗುತ್ತಿದೆ. ಇದರಿಂದ ಬೇರೆ ರಾಜ್ಯಗಳಿಂದ ಇದ್ದ ಬೇಡಿಕೆ ಕಡಿಮೆಯಾಗಿದೆ. ಇದು ಸಾವಯವ ಬೆಲ್ಲ ತಯಾರಿಸುವ, ಆಲೆಮನೆಗಳ ಮಾಲೀಕರಿಗೆ ಆತಂಕ ಎದುರಾಗಿದೆ.

ಮಂಡ್ಯ ಬೆಲ್ಲ ಬ್ರ್ಯಾಂಡ್‌ ಹಿನ್ನೆಡೆ: ಪ್ರಸ್ತುತ ಮಂಡ್ಯ ಬೆಲ್ಲ ಆತ್ಮನಿರ್ಭರ್‌ ಭಾರತ್‌ ಯೋಜನೆಯಡಿ ಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ ಆಯ್ಕೆಯಾಗಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಆಲೆಮನೆಗಳ ಪುನಶ್ಚೇತನಗೊಳಿಸಿ ರಸಾಯನಿಕ ಗುಣಮಟ್ಟದ ಬೆಲ್ಲ ತಯಾರಿಕೆಗೆ ಒತ್ತು ನೀಡಲು ಸರ್ಕಾರ ಮುಂದಾಗಿದೆ. ಆದರೆ, ಪರಿಸ್ಥಿತಿ ನೋಡಿದರೆ ಯೋಜನೆ ಜಾರಿ ಕಷ್ಟ ಎಂಬಂತಾಗಿದೆ.

ಮರು ಬೆಲ್ಲ ತಯಾರಿಕೆ: ಬೆಲ್ಲ ತಯಾರಿಕೆಗೆ ಕಬ್ಬಿನ ಕೊರತೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಉತ್ತರ ಪ್ರದೇಶ, ಬಿಹಾರಗಳಿಂದ ಆಗಮಿಸಿರುವಕೆಲವರು ಇಲ್ಲಿನ ರೈತರಿಂದ ಆಲೆಮನೆಗಳನ್ನು ಬಾಡಿಗೆಪಡೆದು ರಸಾಯನಿಕ ಬೆಲ್ಲ ತಯಾರಿಸುತ್ತಿದ್ದಾರೆ. ಕಬ್ಬಿನ ಕೊರತೆ ಉಂಟಾದಾಗ ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅವ ಧಿ ಮುಗಿದಿರುವ ಬೆಲ್ಲ ತರಿಸಿಕೊಂಡುಅದಕ್ಕೆ ಸಕ್ಕರೆ, ರಸಾಯನಿಕ ಬಳಕೆ ಮಾಡಿ ಬೆಲ್ಲ ತಯಾರಿಸುತ್ತಿರುವುದು ಆತಂಕ ಸೃಷ್ಟಿಸಿದೆ.ಬೆಲ್ಲ ತಿರಸ್ಕರಿಸಿದ ರಾಜ್ಯಗಳು: ಮಂಡ್ಯದ ಬೆಲ್ಲ ಗುಜರಾತ್‌, ಪಶ್ಚಿಮಬಂಗಾಳ, ಕೇರಳ, ಆಂಧ್ರಸೇರಿದಂತೆ ಈಶಾನ್ಯ ರಾಜ್ಯಗಳಿಂದ ಬೇಡಿಕೆ ಬರುತ್ತಿತ್ತು.ಆದರೆ, ಇತ್ತೀಚಿನಲ್ಲಿ ಗುಣಮಟ್ಟವಿಲ್ಲದ ಕಾರಣಮಂಡ್ಯ ಬೆಲ್ಲವನ್ನು ತಿರಸ್ಕರಿಸುತ್ತಿದ್ದು, ಬೇಡಿಕೆ ಕಳೆದುಕೊಳ್ಳುವಂತಾಗಿದೆ ಎಂದು ಆಲೆಮನೆ ಮಾಲೀಕರೊಬ್ಬರು ತಿಳಿಸಿದರು.

ಸಾವಯವ ಬೆಲ್ಲದ ಅರಿವು ಅಗತ್ಯ :

ಗ್ರಾಹಕರು ಕಲರ್‌ ಇರುವ ಬೆಲ್ಲವನ್ನು ಹೆಚ್ಚು ಖರೀದಿಸುತ್ತಾರೆ. ಆದರೆ ಅದನ್ನು ರಸಾಯನಿಕದಿಂದ ತಯಾರಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಸಾವಯವ ಬೆಲ್ಲ ಕಪ್ಪಗಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಆತ್ಮನಿರ್ಭರ್‌ಭಾರತ್‌ ಯೋಜನೆಯಡಿ ಮಂಡ್ಯ ಬೆಲ್ಲ ಆಯ್ಕೆಯಾಗಿದೆ. ಆದರೆ ಅದನ್ನು ಹಾಳುಮಾಡಲು ಹೊರಗಿನ ಕೆಲವರು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಲೆಮನೆ ಮಾಲಿಕರ ಸಂಘದ ತಾಲೂಕು ಅಧ್ಯಕ್ಷ ಸೋಮಶಂಕರೇಗೌಡ ತಿಳಿಸಿದರು.

 ಸಾವಯವ ಬೆಲ್ಲ ಖರೀದಿಗೆ ಹಿಂದೇಟು :

ಪ್ರಸ್ತುತ ಕಬ್ಬಿನ ಕೊರತೆ ಉಂಟಾಗಿರುವುದರಿಂದ ಬೇರೆ ರಾಜ್ಯಗಳಿಂದ ಬೆಲ್ಲದ ಟ್ರೇಡರ್ಗಳು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಬೆಲ್ಲ ಕಲರ್‌ನಿಂದ ಕೂಡಿದ್ದು, ಬೇಡಿಕೆ ಹೆಚ್ಚಿದೆ. ಮಂಡ್ಯ ಸಾವಯವ ಬೆಲ್ಲದ ದರ ಹೆಚ್ಚಾಗಿರುವುದರಿಂದ, ಬೇರೆ ರಾಜ್ಯದಿಂದ ಬೆಲ್ಲವನ್ನು ಆಮದುಮಾಡಿಕೊಳ್ಳಲಾಗುತ್ತಿದೆ. ಸಾವಯವ ಬೆಲ್ಲಕಪ್ಪಾಗಿರುವುದರಿಂದ ಖರೀದಿಗೆ ಹಿಂದೇಟುಹಾಕುತ್ತಾರೆ. ಹೀಗಾಗಿ ಬೇರೆರಾಜ್ಯಗಳಿಂದ ಬೆಲ್ಲ ಸರಬರಾಜುಮಾಡಿಕೊಳ್ಳಲಾಗುತ್ತದೆ ಎಂದು ಬೆಲ್ಲವರ್ತಕರೊಬ್ಬರು ತಿಳಿಸಿದರು.

ವಿವಿಧೆಡೆ ಅಧಿಕಾರಿಗಳ ದಾಳಿ :  ಕಳೆದ ಶನಿವಾರ ಬೇರೆ ರಾಜ್ಯಗಳಿಂದ ಕಳಪೆ ಗುಣಮಟ್ಟದ ಬೆಲ್ಲಪೂರೈಕೆಯಾಗುತ್ತಿರುವ ಬಗ್ಗೆ ರೈತರದೂರಿನ ಮೇರೆಗೆ ಆಹಾರ ಸುರಕ್ಷತೆ,ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಾಳಿ ನಡೆಸಿದರು. ಮಂಡ್ಯ ತಾಲೂಕು ಸೇರಿದಂತೆಜಿಲ್ಲೆಯ ವಿವಿಧೆಡೆ 40 ಆಲೆಮನೆಗಳಮೇಲೆ ದಾಳಿ ನಡೆಸಿ ಸುಮಾರು 29ಆಲೆಮನೆಗಳ ಬೆಲ್ಲದ ಮಾದರಿ ಸಂಗ್ರಹಿಸಿ ಲ್ಯಾಬ್‌ಗ ಕಳುಹಿಸಲಾಗಿದೆ.

ಹೊರ ರಾಜ್ಯಗಳಿಂದ ಕಳಪೆ ಗುಣಮಟ್ಟದ ಬೆಲ್ಲಸರಬರಾಜು ಮಾಡಿಕೊಂಡು ಅದಕ್ಕೆ ಸಕ್ಕರೆ ಹಾಗೂ ರಸಾಯನಿಕ ಹಾಕಿ ಬೆಲ್ಲ ತಯಾರಿಸಲಾಗುತ್ತಿದೆ. ಇದರಿಂದ ಮಂಡ್ಯ ಬೆಲ್ಲಕ್ಕೆ ತೊಂದರೆಯಾಗುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಆಲೆಮನೆಗಳಮೇಲೆ ದಾಳಿ ನಡೆಸಲಾಗಿದ್ದು, ದಾಳಿ ಮುಂದುವರಿಸ ಲಾಗಿದೆ. ಪರವಾನಗಿ ಪಡೆಯದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗುತ್ತಿದೆ. – ಡಾ.ಜಿ.ಸಿ.ಬೆಟ್ಟಸ್ವಾಮಿ, ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಮಂಡ್ಯ

-ಎಚ್‌.ಶಿವರಾಜು

ಟಾಪ್ ನ್ಯೂಸ್

belagavi news

ಬೆಳಗಾವಿ ಜಿಲ್ಲೆಯ ವಿಧವೆಯರಿಗೆ 8 ಸಾವಿರ ಮನೆ ಮಂಜೂರು- ಕವಟಗಿಮಠ

ಅನಧಿಕೃತ ವೈದ್ಯಕೀಯ ತರಬೇತಿ : ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೋಟಿಸ್

ಅನಧಿಕೃತ ವೈದ್ಯಕೀಯ ತರಬೇತಿ : ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೋಟಿಸ್

ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು

ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

22congress

ಅ. 30ಕ್ಕೆ ಗೋವಾಗೆ ರಾಹುಲ್ ಗಾಂಧಿ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

ಗ್ರಾಮಸ್ಥರು

2 ಗ್ರಾಮಸ್ಥರಿಂದ ಪರಸ್ಪರ ಬಡಿದಾಟ

krs

ಕೆಆರ್‌ಎಸ್‌ ಜಲಾಶಯ ಭರ್ತಿಗೆ 3 ಅಡಿ ಬಾಕಿ

28

ಅಪಪ್ರಚಾರ ಮಾಡಿದವರ ಬಾಯಿ ಮುಚ್ಚಿಸಿದ್ದೇವೆ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

MUST WATCH

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

udayavani youtube

ಮೊಸಳೆ ಬಾಯಿಯಿಂದ ಬಾಲಕನ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಿತು ನೋಡಿ

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

ಹೊಸ ಸೇರ್ಪಡೆ

belagavi news

ಬೆಳಗಾವಿ ಜಿಲ್ಲೆಯ ವಿಧವೆಯರಿಗೆ 8 ಸಾವಿರ ಮನೆ ಮಂಜೂರು- ಕವಟಗಿಮಠ

ಅನಧಿಕೃತ ವೈದ್ಯಕೀಯ ತರಬೇತಿ : ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೋಟಿಸ್

ಅನಧಿಕೃತ ವೈದ್ಯಕೀಯ ತರಬೇತಿ : ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೋಟಿಸ್

ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು

ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

26sugar

ಘಟಪ್ರಭಾ ಶುಗರ್ಸ್‌ನಿಂದ ಕಬ್ಬಿಗೆ 2700 ರೂ. ದರ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.