

Team Udayavani, Aug 23, 2018, 7:00 AM IST
ಮಂಡ್ಯ: ಪುತ್ರನ ಮದುವೆ ಮಾಡಿದ ಸಂಭ್ರಮದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಇದೀಗ ಬೀಗರ ಔತಣ ಕೂಟ ರದ್ದುಪಡಿಸಿ ಅದಕ್ಕೆ ಖರ್ಚಾಗುತ್ತಿದ್ದ 10 ಲಕ್ಷ ರೂ. ಹಣವನ್ನು ಕೊಡಗು ನೆರೆ ಸಂತ್ರಸ್ತರ ನಿಧಿಗೆ ಸಮರ್ಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಜನರ ಋಣ ನಮ್ಮ ಮೇಲಿದೆ. ಅವರು ಸಂಕಷ್ಟದಲ್ಲಿರುವಾಗ ನಾವಿಲ್ಲಿ ಔತಣಕೂಟ ಏರ್ಪಡಿಸಿಕೊಂಡು ಸಂಭ್ರಮಿಸುವುದು ಸರಿಯಲ್ಲ. ಅದಕ್ಕಾಗಿಯೇ ಆ.26ರಂದು ಏರ್ಪಡಿಸಿದ್ದ ಬೀಗರ ಔತಣಕೂಟ ಸಮಾರಂಭ ರದ್ದುಪಡಿಸಿ ಅದಕ್ಕೆ ಖರ್ಚಾಗುವ ಹಣವನ್ನು ಕೊಡಗು ಸಂತ್ರಸ್ತರ ಪರಿಹಾರ ನಿಧಿಗೆ ನೀಡುವುದೇ ಉತ್ತಮ ಎಂದು ನಿರ್ಧರಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದರು.
Ad
You seem to have an Ad Blocker on.
To continue reading, please turn it off or whitelist Udayavani.