ಐತಿಹಾಸಿಕ ಸಿಡಿಹಬ್ಬಕ್ಕೆ ಕೊಂಡೋತ್ಸವದ ತೆರೆ

Team Udayavani, Feb 5, 2023, 4:26 PM IST

ಐತಿಹಾಸಿಕ ಸಿಡಿಹಬ್ಬಕ್ಕೆ ಕೊಂಡೋತ್ಸವದ ತೆರೆ

ಮಳವಳ್ಳಿ: ಜಾತ್ಯತೀತತೆ ಹಾಗೂ ಭಾವೈಕ್ಯತೆಯ ಪ್ರತೀಕವಾದ ಇತಿಹಾಸ ಪ್ರಸಿದ್ಧ ಎರಡು ದಿನಗಳ ಪಟ್ಟಲದಮ್ಮ ಸಿಡಿಹಬ್ಬಕ್ಕೆ ಕೊಂಡೋತ್ಸವದ ಮೂಲಕ ತೆರೆ ಬಿದ್ದಿತು.  ಸಿಡಿ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸಿದ್ದರು.

ಪಟ್ಟಣದೆಲ್ಲಡೆ ಅಳವಡಿಸಿದ್ದ ರಾಜಕೀಯ ನಾಯಕರ ಬ್ಯಾನರ್‌, ವಿವಿಧ ಮನರಂಜನಾ ಕಾರ್ಯಕ್ರಮ,ಧ್ವನಿವರ್ಧಕದ ಶಬ್ಧಕ್ಕೆ ಯುವಕರು ಹೆಜ್ಜೆ ಹಾಕಿದರು. ಪದ್ಧತಿಯಂತೆ ರಾತ್ರಿ 8 ಗಂಟೆಗೆ ಒಕ್ಕಲಗೇರಿಯಿಂದ ಆರಂಭವಾದ ಘಟ್ಟದ ಮೆರವಣಿಗೆಯಲ್ಲಿ ನೂರಾರುಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಪಟ್ಟಲದಮ್ಮನದೇವಸ್ಥಾನದತ್ತ ತೆರಳಿದರು. ನಂತರ ಸಿದ್ಧಾರ್ಥನಗರ, ಕೀರ್ತಿನಗರ, ಗಂಗಾಮತಸ್ಥರ ಬೀದಿ, ಅಶೋಕ್‌ ನಗರ,ಬಸವಲಿಂಗಪ್ಪನಗರದ ಮಹಿಳೆಯರು ಮೆರವಣಿಗೆಮೂಲಕ ಘಟ್ಟದೊಂದಿಗೆ ತೆರಳಿ ಪಟ್ಟಲದಮ್ಮನಿಗೆ ಪೂಜೆ ಸಲ್ಲಿಸಿದರು.

ವಿಶೇಷ ಪೂಜೆ ಸಲ್ಲಿಕೆ:ಕೋಟೆ ಪಟೇಲ್‌ ಚಿಣ್ಣೇಗೌಡರ ಮನೆ ಮುಂದೆ ಹಿಂದಿನ ನಿಯಮದಂತೆ ಗಂಗಾಮತಸ್ಥರ ಬೀದಿಯ ಪಟ್ಟಲದಮ್ಮ ದೇಗುಲದಿಂದ ತಂದಿದ್ದಸಿಡಿರಣ್ಣನ ಗೊಂಬೆಯನ್ನು ಸಿಡಿ ಮರಕ್ಕೆ ಕಟ್ಟಿ, ಮಧ್ಯರಾತ್ರಿ12ರ ವೇಳೆಗೆ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಯಿತು.

ನಂತರ ಕೋಟೆ ಬೀದಿ ಸೇರಿ ವಿವಿಧ ಬೀದಿಯಯುವಕರು ಪಟ್ಟಣಾದ್ಯಂತ ಸಿಡಿ ಬಂಡಿಯನ್ನುಶಾರ್ಗಪಾಣಿ ಬೀದಿ, ಕೋಟೆ ಬೀದಿ, ಮೈಸೂರು ರಸ್ತೆಮೂಲಕ ಪೇಟೆ ಬೀದಿ ಮೂಲಕ ಶನಿವಾರ ಬೆಳಗ್ಗೆ 10ಕ್ಕೆ ಗಂಗಾಮತ ಬೀದಿಯ ಕುಪ್ಪಸ್ವಾಮಿ ವೃತ್ತಕ್ಕೆ ಬಂದುಸುಲ್ತಾನ್‌ ರಸ್ತೆಯಲ್ಲಿ ಇರುವ ಪಟ್ಟಲದಮ್ಮ ದೇವಸ್ಥಾನದಆವರಣದಲ್ಲಿ 3 ಸುತ್ತು ಸುತ್ತಿದ ನಂತರ ಸಿಡಿಗೆ ನವದಂಪತಿ ಸೇರಿದಂತೆ ಸಾವಿರಾರು ಮಂದಿ ಸಿಡಿಗೆ ಹಣ್ಣು,ದವನ ಎಸೆದು ಭಕ್ತಿ ಭಾವ ಮೆರೆದರು.

ಕೊಂಡೋತ್ಸವ: ದೇವಸ್ಥಾನದ ಆಡಳಿತ ಮಂಡಳಿ ಸೂಚನೆಯಂತೆ 50ಕ್ಕೂ ಅಧಿಕ ಮಂದಿಗೆ ಕೊಂಡ ಹಾಯಲು ಅವಕಾಶ ನೀಡಲಾಗಿತ್ತು. ಗಂಗಾಮತಸ್ಥಬೀದಿಯ ಅಡ್ಡೆನಿಂಗಯ್ಯನ ಕೇರಿಯ ರಘು ಸೇರಿ ಹಲವರು ಉಪವಾಸದೊಂದಿಗೆ ಕೊಂಡ ಹಾಯ್ದರು.

ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾ ಧಿಕಾರಿಹಾಗೂ ಡಿವೈಎಸ್ಪಿ ಎನ್‌.ನವೀನ್‌ಕುಮಾರ್‌ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ರಾತ್ರಿಯ ಘಟ್ಟದ ಮೆರವಣಿಗೆ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ಶನಿವಾರ ಬೆಳಗ್ಗೆ ಪಟ್ಟಲದಮ್ಮ, ಚಿಕ್ಕಮ್ಮತಾಯಿ,ದೊಡ್ಡಮ್ಮತಾಯಿ, ಒಳಗೆರೆ ಹುಚ್ಚಮ್ಮ ದೇವಸ್ಥಾನಗಳಿಗೆಶಾಸಕ ಡಾ.ಕೆ.ಅನ್ನದಾನಿ, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂನರೇಂದ್ರಸ್ವಾಮಿ, ಬಿಜೆಪಿ ಮುಖಂಡ ಜಿ.ಮುನಿರಾಜು,ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಎಂ.ಟಿ.ಪ್ರಶಾಂತ್‌, ಮಾಜಿ ಅಧ್ಯಕ್ಷರಾದ ದೊಡ್ಡಯ್ಯ,ಎಂ.ಎಚ್‌.ಕೆಂಪಯ್ಯ, ಚಿಕ್ಕರಾಜು, ನಂಜುಂಡಯ್ಯ, ಪ್ರಭಾರತಹಶೀಲ್ದಾರ್‌ ಕುಮಾರ್‌, ಪುರಸಭೆ ಮುಖ್ಯಾ ಧಿಕಾರಿ ಪಿ.ಹರಿಪ್ರಸಾದ್‌ ಮತ್ತಿತರರು ದೇವರ ದರ್ಶನ ಪಡೆದರು.

ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾದ ಸಿಡಿಹಬ್ಬ :  ವಿಧಾನಸಭಾ ಚುನಾವಣೆಗೆ 3 ತಿಂಗಳು ಇರುವುದರಿಂದ ಈ ಬಾರಿಯ ಸಿಡಿಹಬ್ಬರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು.ಒಕ್ಕಗೇರಿಯಿಂದ ಆರಂಭವಾದ ಘಟ್ಟ ಮೆರವಣಿಗೆಪಟ್ಟಣದ ಅನಂತ್‌ ರಾಂ ವೃತ್ತದ ಬಳಿ ಶುಕ್ರವಾರರಾತ್ರಿ ಬಂದಾಗ ಸಂಪ್ರದಾಯಕ ಎದುರಾಳಿಗಳಾದಶಾಸಕ ಡಾ.ಕೆ.ಅನ್ನದಾನಿ ಹಾಗೂ ಕೆಪಿಸಿಸಿ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸುವ ವೇಳೆಬೆಂಬಲಿಗರು ಪರಸ್ಪರ ಜೈಕಾರ ಕೂಗಿ ತಮ್ಮ ನಾಯಕರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಸಿದ್ದಾರ್ಥನಗರದಲ್ಲಿ ಘಟ್ಟಕ್ಕೆಪೂಜೆ ಸಲ್ಲಿಸುವ ವೇಳೆ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಡಾ.ಕೆ.ಅನ್ನದಾನಿ ಸಮ್ಮುಖದಲ್ಲಿ ಕಾಂಗ್ರೆಸ್‌ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ತಳ್ಳಾಟನೂಕಾಟ ನಡೆಯಿತು. ಕೂಡಲೇ ಎಚ್ಚೆತ್ತ ಪೊಲೀಸರು ಘಟನೆ ತಿಳಿಗೊಳಿಸಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.