ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚಳ
Team Udayavani, Jan 19, 2022, 1:08 PM IST
ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆದಿದ್ದು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೂ ಹರಡುತ್ತಿದೆ. ಇದರಿಂದ ಪೋಷಕರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.
ಈಗಾಗಲೇ 1ರಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಇನ್ನುಳಿದಂತೆಪ್ರೌಢ ಶಾಲೆ ಹಾಗೂ ಕಾಲೇಜುಗಳಲ್ಲಿ ಕೋವಿಡ್‌ನಿಯಮಗಳನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ತರಗ ತಿ ಗಳು ನಡೆಯುತ್ತಿದ್ದರೂ ಸೋಂಕು ಕಾಣಿಸಿಕೊಳ್ಳುತ್ತಿದೆ.
322 ವಿದ್ಯಾರ್ಥಿಗಳಿಗೆ ಸೋಂಕು: ಇದುವರೆಗೂಜಿಲ್ಲೆಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುಮಾರು 322 ಮಂದಿ ವಿದ್ಯಾರ್ಥಿಗಳಿಗೆಸೋಂಕು ಕಾಣಿಸಿಕೊಂಡಿದೆ. ಈಗಾಗಲೇ ಕೆಲವು ವಿದ್ಯಾರ್ಥಿಗಳು ಗುಣಮುಖರಾಗಿದ್ದು, ಇನ್ನೂ ಕೆಲವು ವಿದ್ಯಾರ್ಥಿಗಳು ಚೇತರಿಸಿಕೊಳ್ಳುವ ಹಂತದಲ್ಲಿದ್ದಾರೆ. 87 ಶಿಕ್ಷಕರಿಗೆ ಕೋವಿಡ್: ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸುಮಾರು 87 ಶಿಕ್ಷಕರಿಗೆ ಕೊರೊನಾ ಆವರಿಸಿದೆ. ಇದರಿಂದ ಶಾಲಾ ಶಿಕ್ಷಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಚೇತರಿಸಿಕೊಂಡಿದ್ದಾರೆ.
12 ಮಂದಿ ಉಪನ್ಯಾಸಕರು: ಕಾಲೇಜುಗಳಲ್ಲೂಸೋಂಕು ಕಾಣಿಸಿಕೊಳ್ಳುತ್ತಿದೆ. ಈಗಾಗಲೇಜಿಲ್ಲೆಯಲ್ಲಿ 12 ಮಂದಿ ಉಪನ್ಯಾಸಕರು ಹಾಗೂಅಧ್ಯಾಪಕರಿಗೆ ಸೋಂಕು ಕಾಣಿಸಿಕೊಂಡಿದೆ.ವಿದ್ಯಾರ್ಥಿಗಳಿಗೂ ಸೋಂಕು: ಕಾಲೇಜಿನ ವಿದ್ಯಾರ್ಥಿಗಳಿಗೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ 1ರಿಂದ 3 ವಿದ್ಯಾರ್ಥಿಗಳಿಗೆಸೋಂಕು ದೃಢಪಟ್ಟಿದೆ. ಇದುವರೆಗೂ ಕಾಲೇಜಿನ12 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದೆ.
ಲಸಿಕೆ: ಈಗಾಗಲೇ ಪ್ರೌಢಶಾಲೆ ಹಾಗೂ ಕಾಲೇಜಿನ 15ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಲಸಿಕೆಹಾಕಲಾಗುತ್ತಿದೆ. ಪ್ರೌಢ ಶಾಲಾ ಹಂತದಲ್ಲಿಗುರುವಾರದೊಳಗೆ ಎಲ್ಲ ವಿದ್ಯಾರ್ಥಿಗಳಿಗೂಮೊದಲ ಲಸಿಕೆ ಪೂರ್ಣವಾಗಲಿದೆ. ಅದರಂತೆಕಾಲೇಜಿನ 29,064 ವಿದ್ಯಾರ್ಥಿಗಳ ಪೈಕಿ 26 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ. ಇನ್ನುಳಿದಂತೆ 3 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆಬಾಕಿ ಉಳಿದಿದೆ. ಶಾಲಾ-ಕಾಲೇಜಿಗೆ ಹಾಜರಾಗದವಿದ್ಯಾರ್ಥಿಗಳಿಗೂ ಕರೆ ಮಾಡಿ ಲಸಿಕೆ ಪಡೆಯುವಂತೆ ಸೂಚಿಸಲಾಗುತ್ತಿದೆ.
ಎರಡು ಡೋಸ್ ಲಸಿಕೆ ಪಡೆದಿದ್ದರೂ ಸೋಂಕು: ಶಾಲೆ ಆರಂಭಕ್ಕೂ ಮುನ್ನ ಶಿಕ್ಷಕರು ಹಾಗೂಉಪನ್ಯಾಸಕರು ಎರಡು ಡೋಸ್ ಲಸಿಕೆಪಡೆದವರಿಗೆ ತರಗತಿ ನಡೆಸಲು ಅವಕಾಶನೀಡಲಾಗಿತ್ತು. ಅದರಂತೆ ಲಸಿಕೆ ಪಡೆದವರಿಗೂಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಹೆಚ್ಚುವಂತೆ ಮಾಡಿದೆ.
ಬಿಸಿ ನೀರು ವ್ಯವಸ್ಥೆ: ಎಲ್ಲ ಶಾಲಾ-ಕಾಲೇಜುಗಳಲ್ಲಿಸೋಂಕು ಹರಡದಂತೆ ನಿಯಂತ್ರಿಸಲು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬಿಸಿ ನೀರು, ಸಾಮಾಜಿಕಅಂತರ, ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಸೇರಿ ದಂತೆ ಕೊರೊನಾ ನಿಯಮಗಳನ್ನು ಪಾಲಿಸಲಾಗುತ್ತಿದೆ. ಆದರೂ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ.ನೆಗಡಿ, ಕೆಮ್ಮು ಹೆಚ್ಚಳ: ಚಳಿಯ ವಾತಾವರಣದಲ್ಲಿವಿದ್ಯಾರ್ಥಿಗಳಿಗೆ ನೆಗಡಿ, ಕೆಮ್ಮು ಹೆಚ್ಚು ಕಂಡು
ಬರುತ್ತಿದೆ. ಅಂಥ ವಿದ್ಯಾರ್ಥಿಗಳು ಮನೆಯಲ್ಲಿಯೇಉಳಿದು ವೈದ್ಯರ ಬಳಿ ಚಿಕಿತ್ಸೆ ಪಡೆದುಗುಣಮುಖರಾದ ನಂತರ ಶಾಲೆಗೆ ಬರಲು ಅವಕಾಶ ಕಲ್ಪಿಸಲಾಗಿದೆ.
ಪೋಷಕರ ಸಭೆ: ಶಾಲೆಗಳಲ್ಲಿ ಪೋಷಕರ ಸಭೆ ನಡೆಸಿ ಕೊರೊನಾ ನಿಯಮಗಳ ಬಗ್ಗೆ ಅರಿವುಮೂಡಿಸ ಲಾಗುತ್ತಿದೆ. ಮಕ್ಕಳ ಆರೋಗ್ಯದ ಬಗ್ಗೆಗಮನಹರಿಸುವಂತೆ ತಿಳಿ ಹೇಳಲಾಗುತ್ತಿದೆ. ಜತೆಗೆಶಾಲೆಗೆ ಕಳುಹಿಸುವಾಗ ಮಾಸ್ಕ್, ಸ್ಯಾನಿಟೈಸರ್,ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪೋಷಕರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗುತ್ತಿದೆ.
ಶಾಲೆಗಳಲ್ಲಿ ಕೋವಿಡ್ ನಿಯಮಗಳನ್ನು ಕೈಗೊಳ್ಳಲಾಗಿದೆ.ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗುತ್ತಿದ್ದು ,ಗುರುವಾರದೊಳಗೆ ಪೂರ್ಣಗೊಳ್ಳಲಿದೆ.ಪೋಷಕರ ಸಭೆ ನಡೆಸಿ ಮನೆಯಲ್ಲೂಕೊರೊನಾ ನಿಯಮ ಪಾಲಿಸುವಂತೆ ಅರಿವು ಮೂಡಿಸಲಾಗುತ್ತಿದೆ. –ಚಂದ್ರಶೇಖರ್, ಶಿಕ್ಷಣ ಸಂಯೋಜಕರು, ಡಿಡಿಪಿಐ ಕಚೇರಿ, ಮಂಡ್ಯ
ಕಾಲೇಜಿನ ಕೆಲವು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಸೋಂಕುಕಾಣಿಸಿಕೊಂಡಿದೆ. ಎಲ್ಲ ಕಾಲೇಜಿನಲ್ಲೂಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆಹಾಕಲಾಗುತ್ತಿದ್ದು, ಇನ್ನು ಮೂರುಸಾವಿರ ವಿದ್ಯಾರ್ಥಿಗಳು ಬಾಕಿಉಳಿದಿದ್ದು, ಶೀಘ್ರದಲ್ಲಿ ಲಸಿಕೆ ಹಾಕಲಾಗುವುದು. –ಉಮೇಶ್, ಡಿಡಿಪಿಯು, ಮಂಡ್ಯ
–ಎಚ್.ಶಿವರಾಜು