
ಕೋವಿಡ್ ಸಂಕಷ್ಟದಲ್ಲೂ ಅಭಿವೃದ್ಧಿಗೆ ಬದ್ಧ
Team Udayavani, Oct 11, 2020, 4:19 PM IST

ಕೆ.ಆರ್.ಪೇಟೆ: ಕೋವಿಡ್ ಸಂಕಷ್ಟದ ನಡುವೆಯೂ ಕ್ಷೇತ್ರಕ್ಕೆ ಹೆಚಿÌನ ಅನುದಾನ ತಂದು, ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅಭಿವೃದ್ಧಿ ಕೆಲಸ ಗಳಿಗೆ ತಾಲೂಕಿನ ಜನತೆ ನಮ್ಮೊಂದಿಗೆಕೈಜೋಡಿ ಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಸಿ.ನಾರಾಯಣಗೌಡ ಮನವಿ ಮಾಡಿದರು.
ತಾಲೂಕಿನ ಬಳ್ಳೇಕೆರೆ ಗ್ರಾಪಂ ವ್ಯಾಪ್ತಿಯ ಚೌಡೇನಹಳ್ಳಿ, ನಾರ್ಗೋನಹಳ್ಳಿ, ಕಾಮನಹಳ್ಳಿ, ಮೊಸಳೆಕೊಪ್ಪಲು,ಹೆಮ್ಮಡಹಳ್ಳಿ,ಹಳೆಯೂರು, ನಾಟನಹಳ್ಳಿ ಹಾಗೂ ಬಳ್ಳೇಕೆರೆ ಗ್ರಾಮಗಳಲ್ಲಿರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕೆ.ಆರ್.ಪೇಟೆ ತಾಲೂಕಿನ ಸಮಗ್ರವಾದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಯಾರು ಎಷ್ಟೇ ಟೀಕೆಗಳನ್ನು ಮಾಡಿದರೂ ಅವುಗಳಿಗೆ ಅಂಜದೇ ಅಭಿವೃದ್ಧಿ ಕಾರ್ಯದ ಮೂಲಕ ಅವರಿಗೆ ಉತ್ತರಿಸುತ್ತೇನೆ. ಬೂಕನಕೆರೆ ಹೋಬಳಿಯಲ್ಲಿ 10 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ರೈತರ ಜಮೀನಿಗೆ ನೀರು ಹರಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಕೆ.ಶ್ರೀನಿವಾಸ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವೀಂದ್,ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ರೈತಮೋರ್ಚಾ ಅಧ್ಯಕ್ಷ ಹೊಸಹೊಳಲು ರಾಜು,ಎಸ್‌ಸಿ ಮೋರ್ಚಾ ಅಧ್ಯಕ್ಷ ರವಿ ಶಿವಕುಮಾರ್, ಗ್ರಾಪಂ ಮಾಜಿ ಸದಸ್ಯ ಹರೀಶ್, ಪಿಡಿಒ ರವಿ,ಮುಖಂಡರಾದ ನಾರ್ಗೋನಹಳ್ಳಿ ಕುಮಾರ್, ಬಿಲ್ಲೇನಹಳ್ಳಿ ಕುಮಾರ್, ಬಳ್ಳೆಕೆರೆ ಪ್ರವೀಣ್, ಬಾಣೇಗೌಡ, ಬಿಜೆಪಿ ಮಹಿಳಾ ಅಧ್ಯಕ್ಷೆ ಚಂದ್ರಕಲಾ, ಸಚಿವರ ಆಪ್ತ ಸಹಾಯಕರಾದ ದಯಾ ನಂದ, ಪ್ರಥಮ ದರ್ಜೆ ಗುತ್ತಿಗೆದಾರರಾದಅರ್ಜುನ ಪಾರ್ಥ, ಕೆ.ವಿನೋದ್ ಕುಮಾರ್ ಹಾಜರಿದ್ದರು.
ಸೋಂಕಿತರ ಆರೋಗ್ಯಕ್ಕೆ ಆದ್ಯತೆ :
ಕೆ.ಆರ್.ಪೇಟೆ: ಸೋಂಕಿತರ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ.ಹೀಗಾಗಿ ಕೋವಿಡ್ ಸೆಂಟರ್‌ಗಳಿಗೆ ಸೌಲಭ್ಯ ನೀಡಲು ಆರೋಗ್ಯ ಇಲಾಖೆ ಬದ್ಧವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಚೇಗೌಡ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿ, ರೋಗಿಗಳೊಂದಿಗೆ ಆಸ್ಪತ್ರೆಯಲ್ಲಿನ ಸ್ವಚ್ಛತೆ, ಆಹಾರ, ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಕೋವಿಡ್ ರೋಗಿಗಳ ಸುರಕ್ಷತೆಗಾಗಿ ಪಿಎಚ್ ಸಿಗಳಿಂದ ಮೂವರು ವೈದ್ಯರು ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ. ಪ್ರತಿ ತಿಂಗಳೂ ಪರೀಕ್ಷೆ ಮಾಡಲು ಗ್ರಾಮ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ. ಈ ಮೂಲಕ ಸಾವಿನ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯ ನಿರ್ದೇಶನ ಪಾಲಿಸಬೇಕು ಎಂದರು.
ತಾಲೂಕುಆರೋಗ್ಯಾಧಿಕಾರಿಡಾ.ಮಧು ಸೂದನ್. ವೈದ್ಯರಾದ ಡಾ.ಶಶಿ ಧರ್. ಡಾ. ಶ್ರೀಕಾಂತ್. ಡಾ.ರವಿ, ಫಾರ್ಮಸಿ ಅಧಿಕಾರಿ ಸತೀಶ್ ಬಾಬು, ಸರ್ಮದ್ ಗಫಾರಿ, ಹಿರಿಯ ಆರೋಗ್ಯ ಪರೀಕ್ಷಕರಾದ ಸತೀಶ್, ಧಮೇಂದ್ರ, ಗಿರೀಶ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಸಿಡಿ ವಿಚಾರದಲ್ಲಿ ನಾನು ಎಲ್ ಬೋರ್ಡ್: ವಸತಿ ಸಚಿವ ವಿ.ಸೋಮಣ್ಣ

ಪೇಶಾವರದಲ್ಲಿ ತಾಲಿಬಾನ್ ಅಟ್ಟಹಾಸ: 46 ಸಾವು,150ಕ್ಕೂ ಹೆಚ್ಚು ಮಂದಿಗೆ ಗಾಯ

ಗೋರಖ್ನಾಥ್ ದೇಗುಲ ದಾಳಿ: ಆರೋಪಿ ಅಹ್ಮದ್ ಮುರ್ತಾಜಾಗೆ ಮರಣದಂಡನೆ ಶಿಕ್ಷೆ

ಡಿಕೆಶಿ, ಸಿದ್ದರಾಮಯ್ಯ ಮಕ್ಕಳು ಬಿಜೆಪಿಗೆ: ನಳಿನ್ ಕುಮಾರ್ ಕಟೀಲ್

ಬಿಜೆಪಿಯಲ್ಲೇ ಕುಟುಂಬ ರಾಜಕಾರಣ ಹೆಚ್ಚು… ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆದರೆ ತಪ್ಪೇನು?