Udayavni Special

245 ಗ್ರಾಮಗಳಿಗೆ ಕುಡಿವ ನೀರಿನ ಸಮಸ್ಯೆ


Team Udayavani, Mar 30, 2021, 4:43 PM IST

Untitled-1

ಮಂಡ್ಯ: ಪ್ರಸ್ತುತ ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ 245ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತಸಾಲಿನಲ್ಲಿ ಉತ್ತಮಮಳೆಯಾಗಿದ್ದು, ಕೆರೆಕಟ್ಟೆಗಳು ಭರ್ತಿಯಾಗಿದ್ದವು. ಅಲ್ಲದೆ, ಜಿಲ್ಲೆಯ ಜೀವನಾಡಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿತ್ತು. ಆದರೆಮಳೆಯಾಶ್ರಿತ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಡಲಿದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ಕುಡಿಯುವನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್‌ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ಸರಬರಾಜು ಮಾಡಲು ಜಿಲ್ಲಾಡಳಿತ ಸೂಚಿಸಿದೆ.

ತಾಲೂಕುವಾರು ವಿವರ: ಬೇಸಿಗೆಯಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ ನೀರಿನ ಸಮಸ್ಯೆ ಕಾಡಲಿದೆ. ನಾಗಮಂಗಲ ತಾಲೂಕಿನಲ್ಲಿ ಹೆಚ್ಚು 63 ಗ್ರಾಮಗಳು,ಮದ್ದೂರು ತಾಲೂಕು 61, ಮಂಡ್ಯ 43, ಕೆ.ಆರ್‌.ಪೇಟೆ 24, ಮಳವಳ್ಳಿ 20, ಪಾಂಡವಪುರ 16 ಹಾಗೂ ಶ್ರೀರಂಗ ಪಟ್ಟಣ ತಾಲೂಕಿನ 18 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದು ಅಂದಾಜಿಸಲಾಗಿದೆ.

ನಾಗಮಂಗಲದಲ್ಲಿ ‌ ಹೆಚ್ಚು ಗ್ರಾಮಗಳು: ನಾಗ ಮಂಗಲತಾಲೂಕು ಮಳೆಯಾಶ್ರಿತ ಪ್ರದೇಶವಾಗಿರು ವುದರಿಂದಬೇಸಿಗೆಯಲ್ಲಿ ಪ್ರತಿ ವರ್ಷ ಹಲವು ಗ್ರಾಮ ಗಳಲ್ಲಿಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಆದರೆ ಈ ಬಾರಿ 63 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಕಾಡಲಿದೆ.

ತುಪ್ಪದಮಡು, ಮಾಯಗೋನಹಳ್ಳಿ, ಹುಲಿಕೆರೆ,ಅರಣಿ, ಬಿಂಡಿಗನವಿಲೆ, ಭೀಮನಹಳ್ಳಿ, ಹರದನಹಳ್ಳಿ,ಕಾಂತಾಪುರ, ದೊಡ್ಡಜಾಲ, ಪಾಲಗ್ರಹಾರ, ಚೀಣ್ಯ,ಚುಂಚನಹಳ್ಳಿ, ದೇವಿಹಳ್ಳಿ, ಗೊಂಡೇನಹಳ್ಳಿ, ಕದಬಹಳ್ಳಿ, ನೆಲ್ಲಿಗೆರೆ, ಕಾಳಿಂಗನಹಳ್ಳಿ, ಲಾಳನಕೆರೆ, ಬೋಗಾದಿ,ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮಸ್ಯೆ ಎದುರಾಗಲಿದೆ.

ಮ‌ದ್ದೂರಿನ 61 ಗ್ರಾಮಗಳು: ತಾಲೂಕಿನ ಮಲ್ಲನ ಕುಪ್ಪೆ,ಕೆಸ್ತೂರು, ಕೌಡ್ಲೆ, ಕೊಪ್ಪ, ಸೋಮನಹಳ್ಳಿ, ನಿಡಘಟ್ಟ, ಬೆಕ್ಕಳಲೆ, ಆತಗೂರು, ಕದಲೂರು, ಬಿದರಕೋಟೆ,ಅಬಲವಾಡಿ, ಮರಳಿಗ, ಹೊಸಕೆರೆ, ನಿಲುವಾಗಿಲು,ಹೊಸಗಾವಿ, ಹೂತಗೆರೆ, ಆಲೂರು, ತೊರೆಬೊಮ್ಮನಹಳ್ಳಿ,ಎಸ್‌.ಐ.ಹೊನ್ನಲಗೆರೆ, ಅಣ್ಣೂರು, ಭಾರತೀನಗರ, ಬಿದರಹಳ್ಳಿ, ಮೆಣಸಗೆರೆ, ಚಾಮನಹಳ್ಳಿ, ಗೆಜ್ಜಲಗೆರೆ, ಗೊರವನಹಳ್ಳಿ, ಕ್ಯಾತಘಟ್ಟ, ನಗರಕೆರೆ, ಸಾದೊಳಲು,ವಳಗೆರೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 61 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಲಿದೆ.

ಮಂಡ್ಯ ‌ 43 ಗ್ರಾಮಗಳು: ತಾಲೂಕಿನ ಬೇಬಿ, ಬೇಲೂರು, ಬೇವುಕಲ್ಲು, ಸಂತೆಕಸಲಗೆರೆ, ಬಸರಾಳು,ಬೂದನೂರು, ಬಿ.ಗೌಡಗೆರೆ, ಶಿವಪುರ, ಶಿವಳ್ಳಿ, ಮಂಡ್ಯ ಗ್ರಾಮಾಂತರ,ಮುತ್ತೇಗೆರೆ, ಮಾರಚಾಕನಹಳ್ಳಿ, ಆಲಕೆರೆ, ಹನಕೆರೆ, ಹಳುವಾಡಿ, ಹುಲಿವಾನ, ಕನ್ನಲಿ, ಕಂಬದಹಳ್ಳಿ, ಕೊತ ¤ತ್ತಿ, ಗೋಪಾಲಪುರ, ತೂಬಿನಕೆರೆ, ದುದ್ದ ಸೇರಿದಂತೆ ಒಟ್ಟು22 ಗ್ರಾಪಂಗಳ ವ್ಯಾಪ್ತಿಯ 43 ಗ್ರಾಮಗಳು.

ಕೆ.ಆರ್‌.ಪೇಟೆ 24 ಗ್ರಾಮಗಳು: ಸಂತೇಬಾಚಹಳ್ಳಿ,ಆಘಲಯ, ಭಾರತೀಪುರ ಕ್ರಾಸ್‌, ಬಲ್ಲೇನಹಳ್ಳಿ,ಐಚನಹಳ್ಳಿ, ಶೀಳನೆರೆ, ಮುರುಕನಹಳ್ಳಿ, ಬಿರುವಳ್ಳಿ,ರಂಗನಾಥಪುರ ಕ್ರಾಸ್‌, ಬೂಕನಕೆರೆ, ಮಂದಗೆರೆ,ಗಂಜಿಗೆರೆ, ಅಕ್ಕಿಹೆಬ್ಟಾಳು ಸೇರಿದಂತೆ 13 ಗ್ರಾಪಂಗಳ ವ್ಯಾಪ್ತಿಯ 24 ಗ್ರಾಮಗಳು.

ಮಳವಳ್ಳಿ ‌ 20 ಗ್ರಾಮಗಳು: ಬ್ಯಾಡರಹಳ್ಳಿ, ಟಿ.ಕೆ.ಹಳ್ಳಿ, ನೆಲಮಾಕನಹಳ್ಳಿ, ಎಚ್‌.ಬಸವಾಪುರ, ಕಂದೇಗಾಲ,ತಳಗವಾದಿ, ಅಗಸನಪುರ, ನಾಗೇಗೌಡನದೊಡ್ಡಿ,ಚಿಕ್ಕಮುಲಗೂಡು, ಲಿಂಗಪಟ್ಟಣ, ಬಂಡೂರು,ದುಗ್ಗನಹಳ್ಳಿ, ಹಲಗೂರು ಸೇರಿದಂತೆ 13 ಗ್ರಾಪಂಗಳ ವ್ಯಾಪ್ತಿಯ 20 ಗ್ರಾಮಗಳು.

ಪಾಂಡವಪುರ 1‌ 6 ಗ್ರಾಮಗಳು: ಕಟ್ಟೇರಿ, ಬಳಘಟ್ಟ,ಡಿಂಕಾ, ನಾರಾಯಣಪುರ, ಟಿ.ಎಸ್‌.ಛತ್ರ, ಜಕ್ಕನಹಳ್ಳಿ, ಸುಂಕಾತೊಣ್ಣೂರು, ಮಾಣಿಕ್ಯನಹಳ್ಳಿ, ಹಳೇಬೀಡು, ಕ್ಯಾತನಹಳ್ಳಿ, ಹರವು, ದೊಡ್ಡಬ್ಯಾಡರಹಳ್ಳಿ ಸೇರಿದಂತೆ 12

ಗ್ರಾಪಂಗಳ ವ್ಯಾಪ್ತಿಯ 16 ಗ್ರಾಮಗಳು.

ಶ್ರೀರಂಗಪಟ್ಟಣ 18 ಗ್ರಾಮಗಳು: ಅರಕೆರೆ, ಬಳ್ಳಕೆರೆ, ಬಲ್ಲೇನಹಳ್ಳಿ, ಗಾಮನಹಳ್ಳಿ, ಕೊಡಿಯಾಲ, ತಡಗವಾಡಿ,ಮುಂಡುಗದೊರೆ, ಟಿ.ಎಂ.ಹೊಸೂರು, ಹುಲಿಕೆರೆ,ಚಿಕ್ಕಂಕನಹಳ್ಳಿ, ಕಿರಂಗೂರು, ಮೇಳಾಪುರ, ಮಹದೇವಪುರಸೇರಿದಂತೆ 13 ಗ್ರಾಪಂಗಳ ವ್ಯಾಪ್ತಿಯ 18 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ.

ದುರಸ್ತಿಯಲ್ಲಿರುವ ಘಟಕಗಳು :

ಜಿಲ್ಲೆಯ 7 ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳುದುರಸ್ತಿಯಲ್ಲಿವೆ. ಇದರ ಬಗ್ಗೆ ಜಿಪಂ ಸಾಮಾನ್ಯ ಸಭೆಯಲ್ಲಿಜೋರಾಗಿ ಸದ್ದು ಮಾಡಿತ್ತು. ಕೆಟ್ಟು ಹಲವು ತಿಂಗಳು ಕಳೆದರೂ ದುರಸ್ತಿಮಾಡುತ್ತಿಲ್ಲ. ನಿರ್ವಹಣೆ ಸರಿಯಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಮದ್ದೂರು, ಕೆ.ಆರ್‌.ಪೇಟೆ, ನಾಗಮಂಗಲ ತಾಲೂಕುಗಳಲ್ಲಿ ಹೆಚ್ಚು ದುರಸ್ತಿಯಾಗಬೇಕಿ¨.

ಖಾಸಗಿ ಕೊಳವೆ ಬಾವಿ ಬಳಕೆಗೆ ಕ್ರಮ :

ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಭವಿಸುವ ಗ್ರಾಮಗಳಲ್ಲಿ ಆಯಾ ಗ್ರಾಮ ಪಂಚಾಯ್ತಿಗಳು ಟ್ಯಾಂಕರ್‌ ಹಾಗೂ ಖಾಸಗಿ ಕೊಳವೆಬಾವಿಬಳಕೆ ಮಾಡಿಕೊಂಡು ನೀರು ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಎಸ್‌. ಅಶ್ವಥಿ ಅ ಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಾದ್ಯಂತ ಯಾವುದೇಗ್ರಾಮಗಳಲ್ಲಿ ಕುಡಿಯುವ ನೀರಿನಸಮಸ್ಯೆ ಕಾಡದಂತೆ ಮುನ್ನೆಚ್ಚರಿಕೆಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಕೆ.ಆರ್‌.ಪೇಟೆ3 ಗ್ರಾಮಗಳಿಗೆಟ್ಯಾಂಕರ್‌ ನೀರು ಈಗಾಗಲೇ ಕೆ.ಆರ್‌.ಪೇಟೆ ತಾಲೂಕಿನರಂಗನಾಥಪುರ ಕ್ರಾಸ್‌, ಹಿರಿಕಳಲೆ, ಸಾರಂಗಿಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿ.ಬೊಪ ³ನಹಳ್ಳಿ,ಚಿಕ್ಕಹಾರನಹಳ್ಳಿ, ಗಂಗನಹಳ್ಳಿ ಗ್ರಾಮಗಳಿಗೆ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ.

ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಕಾಡುವ ಗ್ರಾಮಗಳ ಪಟ್ಟಿಮಾಡಲಾಗಿದ್ದು, ಕೊಳವೆಬಾವಿ ಹಾಗೂಟ್ಯಾಂಕರ್‌ಗಳ ಮೂಲಕ ನೀರು ಸರಬರಾಜುಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಪಂಗಳಿಗೆ ಸೂಚಿಸಲಾಗಿದೆ.-ಕುಮಾರ್‌, ಕಾರ್ಯಪಾಲಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ, ಮಂಡ್ಯ

 

-ಎಚ್‌.ಶಿವರಾಜು

ಟಾಪ್ ನ್ಯೂಸ್

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಚಗಬಹ್ಗದಸ಻

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

್ಗ್ಹಗಹಜಗ್

ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್

Reached out to PM Modi for additional vaccines, medicines: Mamata

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

ಕಜಹಯತಹಗರ4ತ

ರಮೇಶ್ ಜಾರಕಿಹೊಳಿ ಕೋವಿಡ್ ನಿಂದ ಗುಣಮುಖ : ನಾಳೆ SIT ವಿಚಾರಣೆಗೆ ಹಾಜರಾಗುವುದು ಡೌಟ್!

hfghfxc

ಕೋವಿಡ್ ಹೆಚ್ಚಳ ಹಿನ್ನೆಲೆ : ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

ghfgdgste

‘ಮಠ’ ನಿರ್ದೇಶಕನಿಗೆ ಕೋವಿಡ್ ದೃಢ : ಸರ್ಕಾರದ ವಿರುದ್ಧ ‘ಗುರ್’ ಎಂದ ಗುರು ಪ್ರಸಾದ್  ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡ್ಯ : ಒಂದೇ ದಿನ ಮುನ್ನೂರರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಓರ್ವ ಸಾವು

ಮಂಡ್ಯ : ಒಂದೇ ದಿನ 300ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ, ಓರ್ವ ಸಾವು

Follow fire safety measures

ಅಗ್ನಿ ಸುರಕ್ಷಾ ಕ್ರಮ ಅನುಸರಿಸಿ: ಶಿವಕುಮಾರ್‌

Temple Band

ಮೇ 15ರವರೆಗೆ ಪ್ರವಾಸಿ ತಾಣ, ದೇವಾಲಯ ಬಂದ್‌

The need to provide the necessary facilities

ಈ-ಸಮೀಕ್ಷೆ ನಡೆಸಲು ಅಗತ್ಯ ಸೌಲಭ್ಯ ನೀಡಲು ಆಗ್ರಹ

Loss of sugarcane, tomato, chilli crop to rain

ಮಳೆಗೆ ಕಬ್ಬು, ಟೊಮೆಟೋ, ಮೆಣಸಿನಕಾಯಿ ಬೆಳೆ ನಷ್ಟ

MUST WATCH

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

ಹೊಸ ಸೇರ್ಪಡೆ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

covid: Flight passenger numbers dwindle

ಕೋವಿಡ್: ವಿಮಾನ ಪ್ರಯಾಣಿಕರ ಸಂಖ್ಯೆ ಕ್ಷೀಣ

Ragi Malt Recipe For Weight Loss

ತೂಕ ಇಳಿಸಿಕೊಳ್ಳಲು ರಾಗಿ ಮಾಲ್ಟ್ ಬೆಸ್ಟ್..!

adBVC

ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಪ್ರಶಂಸಾ ಪತ್ರ

ಚಗಬಹ್ಗದಸ಻

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.