ಫೇಸ್‌ಬುಕ್ ಪ್ರೀತಿ: ಯುವತಿ ಎಂದು ನಂಬಿಸಿ ಲಕ್ಷಾಂತರ ರೂ.ವಂಚನೆ

ಮದುವೆಗೂ ಎಲ್ಲ ಬಗೆಯ ಸಿದ್ಧತೆ ನಡೆದಿತ್ತು... !

Team Udayavani, May 22, 2022, 9:24 PM IST

love birds

ನಾಗಮಂಗಲ: ಫೇಸ್‌ಬುಕ್‌ನಲ್ಲಿ ಯುವತಿ ಎಂದು ಪರಿಚಯ ಮಾಡಿಕೊಂಡು ಯುವಕನಿಂದ ಲಕ್ಷಾಂತರ ರೂ. ಹಣ ಪಡೆದು ಪಂಗನಾಮ ಹಾಕಿರುವ ಘಟನೆ ನಾಗಮಂಗಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಕಳೆದ ಮೂರು ತಿಂಗಳ ಹಿಂದೆ  ಫೇಸ್‌ಬುಕ್, ಮೆಸೆಂಜರ್‌ನಲ್ಲಿದ್ದ ಸುಂದರ ಯುವತಿಯ ಭಾವಚಿತ್ರಕ್ಕೆ ಲೈಕ್‌ಕೊಟ್ಟ ಯುವಕನಿಗೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಮಲ್ಲಸಂದ್ರ ಗ್ರಾಮದ ಎಂ.ಆರ್.ಆಶಾ ಎಂದು ಹೇಳಿಕೊಂಡ ಸುಮಾರು 50 ವರ್ಷದ ಮಹಿಳೆಯೊಬ್ಬಳು  ಪರಿಚಯ ಮಾಡಿಕೊಂಡಿದ್ದಾಳೆ.

ಒಂದು ವಾರದ ಬಳಿಕ ಆ ಯುವಕನಿಗೆ ಮೊಬೈಲ್ ನಂಬರ್ ಕೊಟ್ಟ ಮಹಿಳೆ ಯುವತಿಯ ಧ್ವನಿಯಲ್ಲಿ ಮಾತನಾಡಲು ಆರಂಭಿಸಿ ನಾನು ನಿಮ್ಮನ್ನು ಪ್ರೀತಿಸುತ್ತಿದ್ದು, ನನಗೊಂದು ಬಾಳು ಕೊಡುವುದಾದರೆ ನಿಮ್ಮನ್ನು ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಅಂದಿನಿಂದ ನಿರಂತರವಾಗಿ ಇಬ್ಬರ ನಡುವೆ ಮೊಬೈಲ್ ಸಂಭಾಷಣೆ ಹಾಗೂ ವಾಟ್ಸ್ ಆಫ್ ಚಾಟಿಂಗ್ ಆರಂಭಗೊಂಡಿದೆ. ತನ್ನ ಕಷ್ಟಗಳನ್ನು ಹೇಳಿಕೊಂಡ ಆಶಾ ಹೆಸರಿನ ವಂಚಕಿ ಮಹಿಳೆ ಮೊಬೈಲ್ ನಂಬರ್‌ಗೆ ಫೋನ್ ಪೇ ಮೂಲಕ ಹಣ ಹಾಕುವಂತೆ ಕೇಳಿಕೊಂಡಿದ್ದಾಳೆ. ಇದನ್ನು ನಂಬಿದ ಯುವಕ ಆಕೆ ಕೇಳಿದಾಗಲೆಲ್ಲ ಹಣ ಹಾಕಲು ಶುರು ಮಾಡಿದ್ದಾನೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಮೂರೇ ತಿಂಗಳಲ್ಲಿ ಬಿಡಿ ಬಿಡಿಯಾಗಿ ಬರೋಬ್ಬರಿ 3.50 ಲಕ್ಷ ರೂ. ಹಣವನ್ನು ತನ್ನ ಖಾತೆಯಿಂದ ಮಹಿಳೆಗೆ ವರ್ಗಾವಣೆ ಮಾಡಿದ್ದಾನೆ. ಅಲ್ಲದೆ 30 ಸಾವಿರ ರೂ. ದಿನಸಿ ಪದಾರ್ಥಗಳನ್ನು ತರಿಸಿಕೊಂಡಿದ್ದಾಳೆ.

ನಂತರ ಯುವಕ ಮದುವೆ ಪ್ರಸ್ತಾಪ ಮಾಡಿದ್ದಾನೆ. ಕೇವಲ ಹಣ ಕೇಳುತ್ತೀದ್ದೀರಿ. ಮದುವೆ ಬಗ್ಗೆ ಮಾತನಾಡುತ್ತಿಲ್ಲ. ನನಗೆ ಹಣ ವಾಪಸ್ ಕೊಡಿ. ಇಲ್ಲ ಮದುವೆ ಫಿಕ್ಸ್ ಮಾಡಿ ಎಂದು ಯುವಕ ಕೇಳಿದಾಗ, ಮಾತು ಬದಲಿಸಿದ ಮಹಿಳೆ ನಾನು ಆಶಾಳಿಗೆ ದೊಡ್ಡಮ್ಮ ಆಗಬೇಕು. ನನ್ನ ಹೆಸರು ಸವಿತಾ ಮಂಡ್ಯದ ಕಲ್ಲಹಳ್ಳಿಯವಳು. ಆಶಾ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಹಾಗಾಗಿ ಅವಳ ಮದುವೆಯನ್ನು ನಾನೇ ಮುಂದೆ ನಿಂತು ಮಾಡಿಸಬೇಕು. ಮದುವೆ ವಿಚಾರ ಪ್ರಸ್ತಾಪಿಸಲು ನಾನೇ ನಿಮ್ಮ ಮನೆಗೆ ಬರುವುದಾಗಿ ಹೇಳಿ ಯುವಕನ ಮನೆಗೆ ಪೋಷಕರನ್ನು ಪರಿಚಯಿಸಿಕೊಂಡು ಮದುವೆ ಮಾತುಕತೆ ನಡೆಸಿ ಹೋಗಿದ್ದಾಳೆ. ನಂತರ ಮದುವೆಯ ದಿನವೇ ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂದು ನಂಬಿಸಿದ್ದಾರೆ.

ಮದುಮಗಳ ದೊಡ್ಡಮ್ಮ ಎಂದು ಹೇಳಿಕೊಂಡ ಮಹಿಳೆಯ ಮಾತನ್ನು ನಂಬಿದ ಯುವಕನ ಪೋಷಕರು ಮೇ 20 ರಂದು ಆದಿಚುಂಚನಗಿರಿ ಕ್ಷೇತ್ರದ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿಯಲ್ಲಿ ಮದುವೆ ಕಾರ್ಯ ಮಾಡಲು ನಿರ್ಧರಿಸಿ ಲಗ್ನಪತ್ರಿಕೆಯನ್ನು ಮುದ್ರಿಸಿ ಸಂಬಂಧಿಕರಿಗೆಲ್ಲ ಆಹ್ವಾನ ಕೊಟ್ಟು ಮದುವೆಗೆ ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದ್ದರು.

ದಿನಾಂಕ ನಿಗದಿಪಡಿಸಿದಂತೆ ಮೇ 19 ರ ಗುರುವಾರ ಚಪ್ಪರ ಶಾಸ್ತ್ರ ಮುಗಿಸಿದ್ದ ಯುವಕನ ಪೋಷಕರು ಗುರುವಾರ ಸಂಜೆ ನಿಶ್ಚಿತಾರ್ಥಕ್ಕಾಗಿ ವಧು ಮತ್ತು ಅವರ ಪೋಷಕರನ್ನು ಕಾಯ್ದು ಕುಳಿತರೂ ಸಹ ಅವರು ಬರಲಿಲ್ಲ. ಮೇ 20ರ ಬೆಳಿಗ್ಗೆಯಾದರೂ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು. ಶುಕ್ರವಾರ ಬೆಳಿಗ್ಗೆಯೂ ಸಹ ಹೆಣ್ಣಿನ ಕಡೆಯವರು ಬಾರದಿದ್ದಾಗ ಗಾಬರಿಗೊಂಡಿದ್ದಾರೆ.

ಫೇಸ್‌ಬುಕ್ ಪ್ರೇಮಿಗಳ ಮದುವೆಗೆ ಮಧ್ಯವರ್ತಿಯಾಗಿದ್ದ ಸವಿತಾ ಹೆಸರಿನ ಮಹಿಳೆ ಮೇ 20 ರ ಶುಕ್ರವಾರ ಬೆಳಿಗ್ಗೆ ೮ ಗಂಟೆ ಸಮಯದಲ್ಲಿ ಯುವಕನ ಗ್ರಾಮದಲ್ಲಿ ದಿಢೀರ್ ಪ್ರತ್ಯಕ್ಷಗೊಂಡು ನಾನು ಹುಷಾರಿಲ್ಲದೆ ಆಸ್ಪತ್ರೆಯಲ್ಲಿದ್ದ ವೇಳೆ ಹುಡುಗಿಯ ಮಾವಂದಿರು ಹಾಗೂ ದೊಡ್ಡಪ್ಪ ಎಲ್ಲರೂ ಸೇರಿ ಮದುಮಗಳನ್ನು ಬಚ್ಚಿಟ್ಟಿದ್ದಾರೆ. ಆದ್ದರಿಂದ ಈ ಮದುವೆಯನ್ನು ಸಧ್ಯಕ್ಕೆ ಸ್ಥಗಿತಗೊಳಿಸಿ ಇನ್ನೊಂದು ವಾರದಲ್ಲಿ ಹುಡುಗಿಯನ್ನು ಕರೆತಂದು ಮದುವೆ ಮಾಡಿಸುತ್ತೇನೆಂದು ಮತ್ತೊಂದು ಕಥೆ ಕಟ್ಟಿದ್ದಾಳೆ. ಇವಳ ಮಾತಿನಿಂದ ಅನುಮಾನಗೊಂಡ ಯುವಕನ ಪೋಷಕರು ಆ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಠಾಣೆಗೆ ಕರೆದೊಯ್ಯುತ್ತಿದ್ದಂತೆ ಮತ್ತೊಂದು ಹೈಡ್ರಾಮ ನಡೆಸಿದ ವಂಚಕಿ ಮಹಿಳೆ ನಾನು ಅಮಾಯಕಳಾಗಿದ್ದು, ತಂದೆ ತಾಯಿಯಿಲ್ಲದ ಹುಡುಗಿಗೆ ಮದುವೆಯ ಮಾಡಿಸುವ ಜವಾಬ್ದಾರಿ ಹೊತ್ತಿದ್ದೇನೆ ಅಷ್ಟೆ. ನನ್ನನ್ನು ಏಕೆ ಪೊಲೀಸರಿಗೆ ಒಪ್ಪಿಸುತ್ತಿದ್ದೀರಿ ಎಂದು ಆರಂಭದಲ್ಲಿ ನಾಟಕವಾಡಿ, ಕೊನೆಗೆ ತನ್ನೆಲ್ಲ ತಪ್ಪುಗಳನ್ನು ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರ ಮುಂದೆ ಪಡೆದ ಹಣವನ್ನೆಲ್ಲ ವಾಪಸ್ ಕೊಡುವ ಬಗ್ಗೆ ಮುಚ್ಚಳಿಕೆ ಬರೆದುಕೊಟ್ಟ ನಂತರ ಪ್ರಕರಣ ಇತ್ಯರ್ಥಗೊಳಿಸಲಾಗಿದೆ.

ಟಾಪ್ ನ್ಯೂಸ್

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

roadNational Highways ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Fraud Case ಮೆಸ್‌ ಮ್ಯಾನೇಜರ್‌, ಸಿಬಂದಿಯಿಂದ ಮಾಲಕರಿಗೆ 30 ಲಕ್ಷ ರೂ. ವಂಚನೆ

Fraud Case ಮೆಸ್‌ ಮ್ಯಾನೇಜರ್‌, ಸಿಬಂದಿಯಿಂದ ಮಾಲಕರಿಗೆ 30 ಲಕ್ಷ ರೂ. ವಂಚನೆ

Manipal ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವನೆ: ಇಬ್ಬರು ವಶಕ್ಕೆ

Manipal ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವನೆ: ಇಬ್ಬರು ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

krs

Karnataka Bandh: ಮಂಡ್ಯ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

tdy-5

Pandavapur: ಅಕ್ರಮ ದಾಖಲೆ ಸೃಷ್ಟಿ ಆರೋಪ: ಅಧಿಕಾರಿಗಳ ಪರಿಶೀಲನೆ

Road Mishap: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ್ಯು

Road Mishap: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ್ಯು

Cauvery issue; ನಟ ದರ್ಶನ್‌ ವಿರುದ್ಧ ಕಾವೇರಿ ಹೋರಾಟಗಾರರ ಆಕ್ರೋಶ

Cauvery issue; ನಟ ದರ್ಶನ್‌ ವಿರುದ್ಧ ಕಾವೇರಿ ಹೋರಾಟಗಾರರ ಆಕ್ರೋಶ

Cauvery Issue; ಸುಪ್ರೀಂ ಆದೇಶ ವಿರೋಧಿಸಿ ಮಂಡ್ಯ ಬಂದ್; ವ್ಯಾಪಕ ಬೆಂಬಲ

Cauvery Issue; ಸುಪ್ರೀಂ ಆದೇಶ ವಿರೋಧಿಸಿ ಮಂಡ್ಯ ಬಂದ್; ವ್ಯಾಪಕ ಬೆಂಬಲ

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

roadNational Highways ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.