ಕೆಆರ್‌ಎಸ್‌ ರಸ್ತೆಯಲ್ಲಿ ಗುಂಡಿಗಳ ಕಾರುಬಾರು


Team Udayavani, Sep 28, 2021, 4:26 PM IST

ಕೆಆರ್‌ಎಸ್‌ ರಸ್ತೆಯಲ್ಲಿ  ಗುಂಡಿಗಳ ಕಾರುಬಾರು

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಿಂದ ಕೆಆರ್‌ಎಸ್‌ ಮಾರ್ಗದ ರಸ್ತೆಯನ್ನು ಕೋಟ್ಯಂತರ ರೂ. ಖರ್ಚುಮಾಡಿ ಆಧುನೀಕರಣಗೊಳಿಸಿದ್ದು, ಇದೀಗ ರಸ್ತೆಗೆ ಹಾಕಿದ ಡಾಂಬಾರ್‌ ಸಹಿತ ಕಿತ್ತು ಗುಂಡಿ ಬಿದ್ದ ರಸ್ತೆ ದುರಸ್ತಿಯಾಗದೆ ಸವಾರರು ಪರದಾಡುವಂತೆ ಆಗಿದೆ.

ಪ್ರತಿದಿನ ಸಾವಿರಾರು ಜನರು ಹಾಗೂ ಸ್ಥಳೀಯ ಗ್ರಾಮಗಳ ಜನರು ವಾಹನಗಳಲ್ಲಿ ಈ ರಸ್ತೆ ಮೂಲಕವೇ ಮೈಸೂರು, ಇಲವಾಲ, ಹುಣಸೂರು, ಕೆಆರ್‌.ನಗರ, ಕೊಡಗಿಗೆ ಹೋಗಬೇಕಿದೆ. ಕಳೆದ ಎರಡು ವರ್ಷದ  ಹಿಂದೆ ಈ ರಸ್ತೆಯನ್ನು ಕಿತ್ತು ಹೊಸದಾಗಿ ಆಧುನೀಕರಣಗೊಳಿಸಲಾಯಿತು. 2021ರ ಪಾರಂಪರಿಕ ದಸರೆ ಕಾರ್ಯಕ್ರಮಗಳ ಆಯೋಜನೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದೆ. ಗುಂಡಿ ಬಿದ್ದ ರಸ್ತೆಯ ಕಾಮಗಾರಿ ನಡೆಸಲು ಲೋಕೋಪಯೋಗಿ ಅಧಿಕಾರಿಗಳು ಮೀನಾಮೇಷ ಮಾಡುತ್ತಿದ್ದಾರೆ.

ತೇಪೆ ಕಾಮಗಾರಿಯೂ ಇಲ್ಲ: ಮೈಸೂರು-ಶ್ರೀರಂಗ ಪಟ್ಟಣ ದಸರಾಕ್ಕೆ ಕೆಆರ್‌ಎಸ್‌, ಚಾಮುಂಡಿಬೆಟ್ಟ, ಬಲಮುರಿ, ಎಡಮುರಿ, ರಂಗನತಿಟ್ಟು ಪಕ್ಷಿಧಾಮ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ಹಾಗೂ ನಿಮಿಷಾಂಬ ದೇವಾಲಯಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಬರುವ ನಿರೀಕ್ಷ ಇದೆ. ಆದರೂ ಇನ್ನು ಗುಂಡಿ ಮುಚ್ಚಿಸಿ ತೇಪೆ ಕಾಮಗಾರಿಗಳನ್ನು ಸಹಮುಗಿಸುವ ಹಂತವೂ ಮಾಡಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷದಿಂದ ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಎರಡು ಬಾರಿ ಲಾಕ್‌ ಡೌನ್‌ ಮಾಡಿದ್ದಾಗಿನಿಂದ ರಸ್ತೆಯಲ್ಲಿ ಜನಸಂಖ್ಯೆ ಓಡಾಟ ವಿರಳವಾಗಿತ್ತು. ಲಾಕ್‌ ಡೌನ್‌ ತೆರವುಗೊಳಿಸಿದ ಸರ್ಕಾರ ಪ್ರವಾಸಿ ತಾಣಗಳ ಪ್ರವೇಶ ನಿರ್ಬಂದಿಂದ ಮುಕ್ತಿಗೊಳಿಸಿ ಪ್ರವಾಸಿಗರ ಓಡಾಟಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ಆಧುನೀಕರಣವಾದ ಡಾಂಬಾರು ರಸ್ತೆ ದೀರ್ಗ ಬಾಳಿಕೆ ಬರದೇ ಗುಂಡಿ ಬಿದ್ದಿವೆ.

ಅರ್ಧಕ್ಕೆ ನಿಲ್ಲಿಸಿದೆ: ಕೆಲವು ದಿನಗಳ ಹಿಂದೆ ಗುಂಡಿ ಬಿದ್ದ ರಸ್ತೆಗೆ ಗ್ರಾಮಗಳ ವ್ಯಾಪ್ತಿಯ ಗಡಿರೇಖೆಗಳ ಹೊರಗೆ ಗುಂಡಿ ಮುಚ್ಚಲು ಡಾಂಬಾರು ತೇಪೆ ಕೆಲಸ ಮಾಡಿದ ಲೋಕೋಪಯೋಗಿ ಇಲಾಖೆ, ಕೆಲವು ಭಾಗಗಳಲನ್ನು ಬಿಟ್ಟು ಅರ್ಧಕ್ಕೆ ನಿಲ್ಲಿಸಿದೆ. ಹಾಕಿದ ತೇಪೆ ಕೆಲಸ ಮತ್ತೆ ಗುಂಡಿ ಮುಚ್ಚದೆ ಇದೀಗ ಎಲ್ಲಿ ಹಾಕಿದ್ದಾರೆ ಎನ್ನುವುದು ಕಾಮಗಾರಿ ನಡೆಸಿದವರಿಗೆ ಮರೆತು ಹೋಗಿರಬಹುದು.

ದಸರಾ ಆರಂಭಕ್ಕೆ ಇನ್ನು 15 ದಿನ ಬಾಕಿಯಿದ್ದು, ಸರ್ಕಾರ ಎಚ್ಚೆತ್ತುಕೊಂಡು ಲೋಕೋಪ ಯೋಗಿಇಲಾಖೆ ಮೂಲಕ ಗುಂಡಿ ಬಿದ್ದ ರಸ್ತೆ ದುರಸ್ತಿ ಕಾರ್ಯ ನಡೆಸುವ ಕಾರ್ಯಕ್ಕೆ ಮುಂದಾಗುತ್ತದೆಯೋ ಕಾದು ನೋಡಬೇಕು.

ದಸರಾ ಆರಂಭಕ್ಕೆ ಮುನ್ನ : ದುರಸ್ತಿ ಪಾಲಹಳ್ಳಿ ನೀಲಗಿರಿ ತೋಪಿನಿಂದ ರಸ್ತೆಗೆ ಡಾಂಬಾರ್‌ನಿಂದ ತೇಪೆ ಕಾರ್ಯ ನಡೆಯುತ್ತಿದ್ದು, ಹೊಸಹಳ್ಳಿ ವರೆಗೂ ಸಾಗಿದೆ. ಪಂಪ್‌ಹೌಸ್‌ ವೃತ್ತ ಹಾಗೂ ಹೊಸ ಆನಂದೂರು ಮಾರ್ಗ ಮಧ್ಯದ ಗುಂಡಿಗಳನ್ನು ಮುಚ್ಚಲಾಗುತ್ತದೆ. ನಂತರ ಬೆಳಗೋಳದ ಬಳಿ ಮೂರ್ನಾಲ್ಕು ದೊಡ್ಡ ಗುಂಡಿಯಿದ್ದು, ಅದನ್ನು ಮುಚ್ಚಿಸಿ ನಂತರ ಇಲವಾಲದವರೆಗೂ ತೇಪೆ ದುರಸ್ತಿ ಮಾಡಲಾಗುತ್ತದೆ. ಕಾಮಗಾರಿ ನಡೆಸುವ ಗುತ್ತಿಗೆದಾರನಿಗೂ ಈ ವಿಷಯ ತಿಳಿಸಲಾಗಿದ್ದು, ತ್ವರಿತವಾಗಿ ದಸರಾ ಆರಂಭದೊಳಗೆ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಶ್ರೀರಂಗಪಟ್ಟಣದ ಪಿಡಬ್ಯೂಡಿ ಇಲಾಖೆ ಎಇ ಉದಯಕುಮಾರ್‌ ಉದಯವಾಣಿಗೆ ತಿಳಿಸಿದರು.

ಗಂಜಾಂ ಮಂಜು

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.