ಮಂಡ್ಯಕ್ಕೆ ಟ್ರಾಮಾ ಕೇರ್‌ ಆಸ್ಪತ್ರೆ ಅಗತ್ಯ


Team Udayavani, Jan 21, 2023, 10:31 AM IST

ಮಂಡ್ಯಕ್ಕೆ ಟ್ರಾಮಾ ಕೇರ್‌ ಆಸ್ಪತ್ರೆ ಅಗತ್ಯ

ಮಂಡ್ಯ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275 ಈಗ ಸೂಪರ್‌ ಫಾಸ್ಟ್‌ ಮಾರ್ಗವಾಗಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಮಂಡ್ಯ ನಗರದಲ್ಲಿ 100 ಬೆಡ್‌ಗಳ ಹೊಸ ಟ್ರಾಮಾ ಕೇರ್‌ ಆಸ್ಪತ್ರೆಯ ಅವಶ್ಯಕತೆ ಇದೆ. ಆದ್ದರಿಂದ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಸೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಿಫಾರಸು ಮಾಡುವಂತೆ ಸ್ಥಳೀಯ ಸಂಸ್ಥೆಗಳ ಶಾಸಕ ದಿನೇಶ್‌ ಗೂಳಿಗೌಡ ಅವರ ನಿಯೋಗ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾ ರಿಯು ಈಗ ಸೂಪರ್‌ ಫಾಸ್ಟ್‌ ಮಾರ್ಗವಾಗಿದೆ. ಇಲ್ಲಿ ವಾಹನಗಳು ಹೆಚ್ಚಾಗಿ ಓಡಾಡುವುದರಿಂದ ಅಫಘಾತ ಗ ಳು ಸಂಭವಿಸಿದರೆ ಮೈಸೂರು ಅಥವಾ ಬೆಂಗಳೂರಿಗೆ ಗಾಯಾಳುಗಳನ್ನು ದಾಖಲಿಸಬೇಕಾದ ಪರಿಸ್ಥಿತಿ ಇದೆ. ಇದು ಬಹಳವೇ ದೂರವಾಗುತ್ತದೆ. ಇಂಥ ಸಂದರ್ಭ ದಲ್ಲಿ ಪ್ರಾಥಮಿಕ ಚಿಕಿತ್ಸೆ ಸೇರಿದಂತೆ ಕೆಲವು ಅಗತ್ಯ ತ್ವರಿತ ಚಿಕಿತ್ಸೆಯ ಅಗತ್ಯತೆ ಇದೆ. ಆದರೆ, ಬೆಂಗಳೂರು ಇಲ್ಲವೇ ಮೈಸೂರಿಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಹಾನಿಯಾಗುವ ಸಂಭವವೂ ಹೆಚ್ಚಿರುತ್ತದೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿದೆ. ಇದಕ್ಕಾಗಿ ಮಂಡ್ಯ ನಗರ ದಲ್ಲಿ 100 ಬೆಡ್‌ಗಳ ಹೊಸ ಟ್ರಾಮಾ ಕೇರ್‌ ಆಸ್ಪತ್ರೆಯನ್ನು ತೆರೆಯಬೇಕು ಎಂದು ಮನವರಿಕೆ ಮಾಡಿದರು.

ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಾರಂಭಿಸಿ: ಮೈಸೂರು-ಬೆಂಗಳೂರು ನಗರಗಳ ಮಧ್ಯದಲ್ಲಿ ಇರುವ ಮಂಡ್ಯ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದು, ಸುಮಾರು 150 ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸದಾ ಲಭ್ಯವಿರುತ್ತಾರೆ. ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತೆ ಇರುವ 5 ಎಕರೆ ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸುತ್ತಿರುವುದರಿಂದ ಆ ಜಾಗದಲ್ಲಿ 100 ಬೆಡ್‌ಗಳ ಟ್ರಾಮಾ ಕೇರ್‌ ಆಸ್ಪತ್ರೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತ್ವರಿತವಾಗಿ ಹೊಸದಾಗಿ ಪ್ರಾರಂಭಿಸ ಬಹು ದಾಗಿದೆ ಎಂದು ತಿಳಿಸಿದರು.

ಈ ಎಲ್ಲ ಅಗತ್ಯತೆ ಹಾಗೂ ಅವಕಾಶಗಳ ಬಗ್ಗೆ ಮುಖ್ಯ ಮಂತ್ರಿ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿ ಆಯ ವ್ಯಯದಲ್ಲಿ ಸೇರ್ಪಡೆಗೊಳಿಸಲು ಶಿಫಾ ರಸು ಮಾಡ ಬೇಕೆಂದು ಮನವಿ ಸಲ್ಲಿಸಿದರು.

ಪಕ್ಷದ ಮುಖಂಡ ಎಸ್‌.ಗುರುಚರಣ್‌, ಮದ್ದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗಣ್ಣ, ಮಾಜಿ ಮದ್ದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡ ರಾದ ಜೋಗಿಗೌಡ, ಸಂದರ್ಶ್‌, ರಾಘು ಹಾಗೂ ಪ್ರಶಾಂತ್‌ ಹಾಜರಿದ್ದರು. ನಂತರ ಆರೋಗ್ಯ ಸಚಿವ ಡಾ. ಕೆ.ಸುಧಾ ಕರ್‌ ಅವರಿಗೆ ಮನವಿ ಮಾಡಿ ಆಸ್ಪತ್ರೆಯ ಅವಶ್ಯಕತೆ ಬಗ್ಗೆ ಶಾಸಕ ದಿನೇಶ್‌ಗೂಳಿಗೌಡ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

Mandya: Theft of sandal trees from school premises after threatening security guards

Mandya: ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಶಾಲಾ ಆವರಣದ ಗಂಧದ ಮರಗಳ ಕಳವು

ಮಂಡ್ಯದಲ್ಲಿ ಅಂಬರೀಷ್‌ ದಾಖಲೆ ಮುರಿದ ಎಚ್‌.ಡಿ.ಕುಮಾರಸ್ವಾಮಿ

ಮಂಡ್ಯದಲ್ಲಿ ಅಂಬರೀಷ್‌ ದಾಖಲೆ ಮುರಿದ ಎಚ್‌.ಡಿ.ಕುಮಾರಸ್ವಾಮಿ

police crime

Srirangapatna; ಕಾರಿನಲ್ಲಿ ಜಾನುವಾರು ಸಾಗಾಟ:ಉಸಿರುಗಟ್ಟಿ 6 ಕರುಗಳು ಸಾವು

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.