ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಅಗತ್ಯ
Team Udayavani, Feb 17, 2021, 2:41 PM IST
ಮಂಡ್ಯ: ಇಡೀ ವರ್ಷದಲ್ಲಿ ರಸ್ತೆ ಅಪಘಾತಗಳು ಕನಿಷ್ಠ ಶೇ.10ರಷ್ಟು ಕಡಿಮೆಯಾಗಬೇಕು. ಇದರ ಬಗ್ಗೆ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಅರಿವು ಮೂಡಿಸುವ ಮುಖ್ಯ. ಈ ಉದ್ದೇಶದಿಂದ ಪ್ರತಿವರ್ಷ ರಸ್ತೆ ಸುರಕ್ಷತಾ ಮಾಸವನ್ನು ಆಚರಿಸುತ್ತೇವೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಎಸ್.ಪುರುಷೋತ್ತಮ್ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ)ಮಂಗಲ ವತಿಯಿಂದ 32ನೇ ರಸ್ತೆ ಸುರಕ್ಷತಾ ಮಾಸ-2021ರ ನಿಮಿತ್ತ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಮಾಸದ ನಿಮಿತ್ತ ಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ರಸ್ತೆ ಅಪಘಾತವಾದ ಸಂದರ್ಭದಲ್ಲಿ ರಕ್ತ ಬಹಳ ಮುಖ್ಯವಾಗಿದೆ. ಗಾಯಾಳುವನ್ನು ಒಂದು ಗಂಟೆಯೊಳಗಾಗಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ: ರೆಡ್ ಕ್ರಾಸ್ ಸಂಸ್ಥೆಯ ಸದಸ್ಯ ಕೆ.ಟಿ.ಹನುಮಂತು ಮಾತನಾಡಿ, ರಕ್ತದಾನಕ್ಕಿಂತ ಮಿಗಿಲಾದ ಮತ್ತೂಂದು ದಾನವಿಲ್ಲ. ಒಬ್ಬ ವ್ಯಕ್ತಿ ನೀಡುವ ರಕ್ತದಲ್ಲಿ ಮೂರು ಜನರ ಪ್ರಾಣ ಉಳಿಸಬಹುದು.
ಹಾಗಾಗಿ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಹೇಳಿದರು. ಪಟ್ಟಣ ಪ್ರದೇಶಗಳ ಜನರಲ್ಲಿ ಜಾಗೃತಿಯಿದ್ದು, ಅವರು ತಾವಾಗಿ ರಕ್ತದಾನ ಮಾಡುತ್ತಾರೆ. ಆದರೆ, ಗ್ರಾಮೀಣ ಭಾಗದ ಜನರಲ್ಲಿ ರಕ್ತದಾನದ ಬಗ್ಗೆ ಅರಿವಿಲ್ಲ. ಅವರಲ್ಲಿ ಅರಿವು ಮೂಡಿಸುವ ರಕ್ತದಾನದ ಮಹತ್ವ ತಿಳಿಸಬೇಕು. ರಕ್ತದಾನ ಮಾಡುವುದರಿಂದ ಹೃದಯಾಘಾತ ಶೇ.80ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದರು.
ಜೀವ ರಕ್ಷಣೆಗೆ ರಕ್ತದಾನ ಪೂರಕ: ಪರಿಸರ ಸಂಸ್ಥೆ ಅಧ್ಯಕ್ಷೆ ಮಂಗಲಯೋಗೇಶ್ ಮಾತನಾಡಿ, ರಸ್ತೆ ನಿಯಮ ಪಾಲಿಸದೆ ದೇಶದಲ್ಲಿ ಪ್ರತಿ ಗಂಟೆಗೆ ಸರಾಸರಿ 55 ಅಪಘಾತಗಳು ನಡೆದು, 17ಮಂದಿ ಸಾವಿಗೀಡಾಗುತ್ತಿದ್ದಾರೆ. ಇಂತಹ ಅವಘಡಗಳಿಂದ ಜೀವ ರಕ್ಷಿಸಲು ರಕ್ತದಾನವೂ ಪೂರಕ ನೆರವಾಗುತ್ತದೆ ಎಂದು ತಿಳಿಸಿದರು.
ಆರ್‌ಟಿಒ, ಸಂಚಾರ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳು, ರಸ್ತೆ ಸುರಕ್ಷತಾ ಸಮಿತಿಯ ಸಲಹೆಗಳನ್ನು ವಾಹನ ಚಾಲಕರು ಮತ್ತು ಮಾಲೀಕರು ಜಾಗೃತಿಯಿಂದ ಪಾಲಿಸಿದರೆ ಅಪಘಾತಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮಿಮ್ಸ್‌ನ ರಕ್ತನಿಧಿ ಕೇಂದ್ರದ ರಫೀಕ್, ಶಿವಲಿಂಗಯ್ಯ, ರಾಜಣ್ಣ ಸೇರಿದಂತೆ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಜೂನಿಯರ್ ಮೇಲೆ ರ್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು
ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ
ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ
ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani
ಹೊಸ ಸೇರ್ಪಡೆ
13 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: 20 ರೂ. ನೀಡಿ ಯಾರಿಗೂ ತಿಳಿಸಬೇಡವೆಂದರು !
ಅನಾವಶ್ಯಕವಾಗಿ ಕೋರ್ಟ್ ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯದಲ್ಲ: ಸದಾನಂದ ಗೌಡ
ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಮೋದಿ ಫೋಟೋ ತೆಗೆಯಿರಿ: ಚುನಾವಣಾ ಆಯೋಗ ಸೂಚನೆ
ಕೈಕೊಟ್ಟ ಅದೃಷ್ಟ: ಅಜೇಯರಾದರೂ ಶತಕ ವಂಚಿತ ವಾಷಿಂಗ್ಟನ್, ಭಾರತಕ್ಕೆ ಉತ್ತಮ ಮುನ್ನಡೆ
ನಾವಷ್ಟೇ ಅಲ್ಲಾ, ಇನ್ನೂ ಐದಾರು ಮಂದಿ ನ್ಯಾಯಾಲಯಕ್ಕೆ ಹೋಗುತ್ತಾರೆ: ಸಚಿವ ಸುಧಾಕರ್