ಪಾದಯಾತ್ರೆ; ಸಂವಾದದಲ್ಲಿ ಸಮಸ್ಯೆ ಹೇಳಿಕೊಂಡು ರೈತ ಮಹಿಳೆಯರ ಕಣ್ಣೀರು

ಹಸುಗಳ ಆಕಸ್ಮಿಕ ಸಾವಿನಿಂದ ನಷ್ಟ ಉಂಟಾಗಿ 10 ಲಕ್ಷ ರೂ. ಸಾಲ ಮಾಡಿದ್ದೇನೆ

Team Udayavani, Oct 7, 2022, 6:28 PM IST

ಪಾದಯಾತ್ರೆ; ಸಂವಾದದಲ್ಲಿ ಸಮಸ್ಯೆ ಹೇಳಿಕೊಂಡು ರೈತ ಮಹಿಳೆಯರ ಕಣ್ಣೀರು

ಮಂಡ್ಯ: “ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ, ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ, ಹೈನೋದ್ಯಮದಲ್ಲಿ ತೊಡಗಿರುವ ರೈತರಿಗೆ ಕಡಿಮೆ ದರದಲ್ಲಿ ಮೇವು ಸಿಗುವಂತೆ ಮಾಡಿ’ ಎಂಬ ಬೇಡಿಕೆ ರೈತ ಸಂವಾದದಲ್ಲಿ ಕೇಳಿ ಬಂದವು. ಚೌಡಗೋನಹಳ್ಳಿ ಗೇಟ್‌ ಬಳಿ ರೈತ ರೊಂದಿಗೆ ನಡೆದ ಸಂವಾದದಲ್ಲಿ ರೈತ ಮಹಿಳೆಯರು ಸಮಸ್ಯೆ ಹೇಳಿಕೊಂಡು ಕಣ್ಣೀರು ಹಾಕಿದ ಘಟನೆ ನಡೆಯಿತು.

ರೈತ ನಾಯಕಿ ನಂದಿನಿಜಯರಾಂ ಮಾತನಾಡಿ, ರೈತರಿಗೆ ಉಚಿತ ಹಣ ಬೇಡ. ಆದರೆ, ಆತ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಜತೆಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಬ್ಯಾಂಕುಗಳಿಂದ ರೈತರಿಗೆ ಸುಲಭ ವಾಗಿ ಸಾಲ ಸಿಗುವಂತಾಗಬೇಕು ಎಂದು ಹೇಳಿದರು.

ಕೆ.ಆರ್‌.ಪೇಟೆ ತಾಲೂಕಿನಿಂದ ಆಗಮಿಸಿದ್ದ ಪುಷ್ಪಾ ಎಂಬ ರೈತ ಮಹಿಳೆ ಭತ್ತದ ಗದ್ದೆಗೆ ನೀರು ಹಾಯಿಸಲು ಹೋದ ನನ್ನ ಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ. ಆತ ಬೆಳೆ ಬೆಳೆಯಲು 2 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದ ಎಂದು ಕಣ್ಣೀರು ಹಾಕಿದಳು. ಕಣ್ಣೀರು:ಹೈನೋದ್ಯಮ ನಂಬಿಕೊಂಡು ಜೀವನ ಸಾಗಿಸು ತ್ತಿರುವ ಗಿರಿಜಾ, ತನ್ನ ಪತಿ ಹಸುವಿಗೆ ಮೇವು ತರಲು ಹೋದಾಗ ಹಾವು ಕಚ್ಚಿ ಸಾವಿಗೀಡಾದರು.

ಹಸುಗಳನ್ನೇ ನಂಬಿದ್ದೇನೆ. ಹಸುಗಳಿಗಾಗಿ ಬಳಸುವ ಇಂಡಿ, ಬೂಸಾ, ಫೀಡ್ಸ್‌ ಬೆಲೆಗಳ ಹೆಚ್ಚಳ ದಿಂದ ಹಾಲು ಮಾರಾಟದಿಂದ ಬರುವ ಹಣವನ್ನು ಮೇವಿಗೆ ಹಾಕುವುದೇ ಆಗಿದೆ. ಇದಲ್ಲದೆ ಇಬ್ಬರು ಮಕ್ಕಳನ್ನು ಸಾಕುವ ಹೊಣೆ ನನ್ನ ಮೇಲಿದೆ. ಹಸುಗಳ ಆಕಸ್ಮಿಕ ಸಾವಿನಿಂದ ನಷ್ಟ ಉಂಟಾಗಿ 10 ಲಕ್ಷ ರೂ. ಸಾಲ ಮಾಡಿದ್ದೇನೆ ಎಂದು ಕಣ್ಣೀರು ಹಾಕಿದರು.

ಮಧ್ಯ ಪ್ರವೇಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಹಾಲು ಖರೀದಿಗೆ ನೀಡುತ್ತಿರುವ ಹಣ ಕಡಿಮೆಯಾಗಿದ್ದು, ರೈತ ಹಸು ಸಾಕಲು ಹೆಚ್ಚು ಹಣ ವ್ಯಯವಾಗುತ್ತಿದೆ. ಹೀಗಾಗಿ ರೈತರಿಗೆ ನಷ್ಟವಾಗುತ್ತಿದೆ ಎಂದು ರಾಹುಲ್‌ ಗಮನಕ್ಕೆ ತಂದರು.

ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ.ಸಿ.ಮೋಹನ್‌ ಕುಮಾರ್‌ ಮಾತನಾಡಿ, ತಾಲೂಕು ಹೇಮಾವತಿ ನಾಲೆಯ ಕೊನೆ ಭಾಗದಲ್ಲಿದ್ದು, ಕಡೆ ಭಾಗಕ್ಕೆ ನೀರು ಹರಿಸಲು ನಾಲೆಗಳ ಆಧುನೀಕರಣ ವಾಗಬೇಕು. ಜತೆಗೆ ನಾಲೆಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಹಣ ಬಿಡುಗಡೆ ಯಾಗಿಲ್ಲ ಎಂದು ಹೇಳಿದರು.

ಮದ್ದೂರಿನ ಅಲೋಕ ಮಾತನಾಡಿ, ಕಬ್ಬು ಬೆಳೆ ಯಲು ಟನ್‌ವೊಂದಕ್ಕೆ 3600 ರೂ. ಖರ್ಚಾಗುತ್ತಿದ್ದು, ಸಕ್ಕರೆ ಕಾರ್ಖಾನೆ ನೀಡುತ್ತಿರುವ ಹಣ ಸಾಲುತ್ತಿಲ್ಲ. ಜತೆಗೆ 3 ರಿಂದ 6 ತಿಂಗಳು 2 ವರ್ಷವಾದರೂ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹಣ ನೀಡದೆ ಕೋಟ್ಯಂತರ ಹಣ ಬಾಕಿ ಉಳಿಸಿಕೊಂಡಿವೆ ಎಂದರು.

ಟಾಪ್ ನ್ಯೂಸ್

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

1-asdsadasd

ಹೈಡ್ರಾಲಿಕ್ ವೈಫಲ್ಯ: 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

1-asdadasd

ಹಿಂದೂಗಳು 18 ವರ್ಷಕ್ಕೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಿ: ಸಂಸದ ಬದ್ರುದ್ದೀನ್ ವಿವಾದ

ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆ

“ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೌಟುಂಬಿಕ ಕಲಹ: ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಕೌಟುಂಬಿಕ ಕಲಹ: ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ನಷ್ಟ ತಪ್ಪಿಸಲು ಕೆಆರ್‌ಎಸ್‌ ಬೃಂದಾವನ ಪ್ರವಾಸಿಗರಿಗೆ ಮುಕ್ತ

ನಷ್ಟ ತಪ್ಪಿಸಲು ಕೆಆರ್‌ಎಸ್‌ ಬೃಂದಾವನ ಪ್ರವಾಸಿಗರಿಗೆ ಮುಕ್ತ

TDY-15

ಅನಧಿಕೃತ ಜಾಹೀರಾತು, ಫ್ಲೆಕ್ಸ್‌ ಅಳವಡಿಸಿದರೆ ಕಠಿಣ ಕ್ರಮ

ನಾನು ಮತ್ತೆ ಸಿಎಂ ಆಗಲು “ಕೈ’ ಬೆಂಬಲಿಸಿ: ಸಿದ್ದರಾಮಯ್ಯ

ನಾನು ಮತ್ತೆ ಸಿಎಂ ಆಗಲು “ಕೈ’ ಬೆಂಬಲಿಸಿ: ಸಿದ್ದರಾಮಯ್ಯ

ಹುಂಡಿ ಹಣ ಅರ್ಚಕರು, ಯಜಮಾನರ ಪಾಲು?

ಹುಂಡಿ ಹಣ ಅರ್ಚಕರು, ಯಜಮಾನರ ಪಾಲು?

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

1-asdsadasd

ಹೈಡ್ರಾಲಿಕ್ ವೈಫಲ್ಯ: 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.