ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

ವಾಸ್ತವ ಸರಾಸರಿ 717.4ಮಿ.ಮೀ ಮಳೆ

Team Udayavani, Oct 21, 2020, 3:27 PM IST

MANDYA-TDY-1

ಮಂಡ್ಯ: ಜಿಲ್ಲೆಯಲ್ಲಿಈವರ್ಷ ಅತಿ ಹೆಚ್ಚು ಮಳೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ವಾಡಿಕೆಗಿಂತ ವಾಸ್ತವವಾಗಿ ಸರಾಸರಿ ಮಳೆಯಾಗಿದೆ. ವಾಡಿಕೆ ಮಳೆ ಪ್ರತಿ ವರ್ಷ ಸರಾಸರಿ 590.4 ಇದ್ದು, ವಾಸ್ತವ  ಸರಾಸರಿ 717.4 ಮಿ.ಮೀ ಮಳೆ ಬಿದ್ದಿರುವ ವರದಿಯಾಗಿದ್ದು, ಶೇ.21.5ರಷ್ಟು ಹೆಚ್ಚುವರಿ ಮಳೆಯಾಗಿದೆ.

ವಾಸ್ತವ 717.4 ಮಿ.ಮೀ ಮಳೆ: ಜಿಲ್ಲೆಯ 7 ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪಾಂಡವಪುರ ತಾಲೂಕಿನಲ್ಲಿ ಅತಿ ಹೆಚ್ಚು 790.9 ಮಿ. ಮೀ ಮಳೆಯಾಗಿದೆ. ವಾಡಿಕೆ ಸರಾಸರಿ 574.7 ಮಿ.ಮೀ ಇದ್ದು, ಶೇ.37.6ರಷ್ಟು ಹೆಚ್ಚು ಮಳೆಯಾಗಿದೆ. ಕೆ.ಆರ್‌.ಪೇಟೆ ತಾಲೂಕಿನಲ್ಲಿ ವಾಡಿಕೆ ಸರಾಸರಿ 638.1 ಮಿ.ಮೀ ಇದ್ದರೆ ಈ ಬಾರಿ ಸರಾಸರಿ 647.2 ಮಳೆ ಬಿದ್ದಿದ್ದು,ಶೇ.1.4ರಷ್ಟು ಹೆಚ್ಚು ಸುರಿದಿದೆ. ಮದ್ದೂರು ವಾಡಿಕೆ 646.8 ಮಿ.ಮೀ ಇದ್ದು, ವಾಸ್ತವ 740.3 ಮಿ.ಮೀ ಮಳೆ ಸುರಿದಿದ್ದು, ಶೇ.14.5ರಷ್ಟು ಹೆಚ್ಚುವರಿ,ಮಳವಳ್ಳಿ ತಾಲೂಕಿನ ವಾಡಿಕೆ ಸರಾಸರಿ 591.6 ಮಿ.ಮೀ ಇದ್ದು, ವಾಸ್ತವ752.2 ಮಿ.ಮೀ ಆಗಿದ್ದು, ಶೇ.27.1ರಷ್ಟು ಹೆಚ್ಚುವರಿ, ಮಂಡ್ಯ ತಾಲೂಕಿನಲ್ಲಿ ವಾಡಿಕೆ575.4 ಮಿ.ಮೀ ಇದ್ದು, ವಾಡಿಕೆ ಸರಾಸರಿ 680.4 ಮಿ.ಮೀ ಆಗಿದ್ದು, ಶೇ.18.2ರಷ್ಟು ಹೆಚ್ಚುವರಿ, ನಾಗಮಂಗಲ ತಾಲೂಕಿನ ವಾಡಿಕೆ ಸರಾಸರಿ 630.8 ಮಿ.ಮೀ ಇದ್ದು, ವಾಸ್ತವ705.1 ಮಿ.ಮೀ ಸೇರಿದಂತೆ ಶೇ.11.8ರಷ್ಟು ಹೆಚ್ಚುವರಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ವಾಡಿಕೆ ಸರಾಸರಿ 535.1 ಮಿ.ಮೀ ಇದ್ದು, ವಾಸ್ತವ ಸರಾಸರಿ 768.8 ಮಿ.ಮೀ ಆಗಿದ್ದು, ಶೇ.43.7ರಷ್ಟು ಹೆಚ್ಚುವರಿ ಮಳೆಯಾಗಿದೆ.

ತಿಂಗಳುವಾರು ಮಳೆ: ಪ್ರಸ್ತುತ ವರ್ಷದ ಜನವರಿ ತಿಂಗಳಲ್ಲಿ ವಾಡಿಕೆ ಸರಾಸರಿ2.0 ಮಿ.ಮೀ ಇತ್ತು. ಆದರೆ, 0.3 ವಾಸ್ತವ ಮಳೆಯಿಂದ ಶೇ.84ರಷ್ಟು ಮಳೆ ಕೊರತೆಯಾಗಿತ್ತು. ಫೆಬ್ರವರಿ ಮಾಹೆಯಲ್ಲಿ 0.10 ಮಿ.ಮೀ ಆಗಿದ್ದು, ಶೇ.98ರಷ್ಟು ಕೊರತೆ, ಮಾರ್ಚ್‌ನಲ್ಲಿ ವಾಡಿಕೆ ಮಳೆ 8.1 ಮಿ.ಮೀ ಇದ್ದರೆ, ವಾಸ್ತವ 20.6 ಮಿ.ಮೀ ಹೆಚ್ಚು ಮಳೆಯಾಗಿತ್ತು. ಏಪ್ರಿಲ್‌ನಲ್ಲಿ ಸರಾಸರಿ 71.2 ಮಿ.ಮೀ ಆಗುವ ಮೂಲಕ ಶೇ.44ರಷ್ಟು ಹೆಚ್ಚು ಮಳೆ, ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ.15ರಷ್ಟು ಸರಾಸರಿ 136.2 ಮಿ.ಮೀ, ಜೂನ್‌ನಲ್ಲಿ ಸರಾಸರಿ 74.3 ಮಿ.ಮೀ, ಜುಲೈನಲ್ಲಿ 116.1 ಮಿ.ಮೀ, ಆಗಸ್ಟ್‌ನಲ್ಲಿ ವಾಡಿಕೆ 72.9 ಮಿ.ಮೀ ಇದ್ದರೆ, ವಾಸ್ತವ39.2 ಮಿ.ಮೀ ಆಗಿತ್ತು. ಇದರಿಂದ ಶೇ.46.2ರಷ್ಟು ಮಳೆ ಕೊರತೆಯಾಗಿತ್ತು. ಸೆಪ್ಟಂಬರ್‌ನಲ್ಲಿ ವಾಡಿಕೆಗಿಂತ ವಾಸ್ತವ 142.3 ಮಿ.ಮೀ, ಅಕ್ಟೋಬರ್‌ 20ರವರೆಗೆ ಸರಾಸರಿ 115.9 ಮಿ.ಮೀ ಮಳೆ ಆಗಿದ್ದು, ಶೇ.7ರಷ್ಟು ಹೆಚ್ಚುವರಿ ಮಳೆಯಾಗಿದೆ.

ಧಾರಾಕಾರವಾಗಿ ಸುರಿದ ಮಳೆ :  ಕಳೆದ ಮೂರ್‍ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇದರಿಂದ ಸಾರ್ವಜನಿಕರ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಮಂಡ್ಯ ನಗರದಲ್ಲಿ ಸ್ಲಂ ನಿವಾಸಿಗಳ ಪರಿಸ್ಥಿತಿ ಹೇಳ ತೀರದಾಗಿದೆ. ಹಾಲಹಳ್ಳಿ ಸ್ಲಂ, ಬೀಡಿ ಕಾರ್ಮಿಕರ ಕಾಲೋನಿಯ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಪ್ರತಿದಿನ ಮೋಡಕವಿದ ವಾತಾವರಣವಿದ್ದು, ಮಳೆಯಾಗುತ್ತಿದೆ. ಮಂಗಳವಾರ ಬೆಳಗ್ಗೆ8ಕ್ಕೆಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 23.7 ಮಿ.ಮೀ ಮಳೆಯಾಗಿದೆ. ಮಂಡ್ಯ 2.0 ಮಿ.ಮೀ, ಶ್ರೀರಂಗಪಟ್ಟಣ 17.1 ಮಿ.ಮೀ ಹಾಗೂ ಪಾಂಡವಪುರ ತಾಲೂಕುಗಳಲ್ಲಿ4.06 ಮಿ.ಮೀ ಮಳೆಯಾಗಿದೆ.

ಮಳೆಯಿಂದ ಉತ್ತಮ ಫ‌ಸಲಿನ ನಿರೀಕ್ಷೆ :  ಜಿಲ್ಲೆಯಲ್ಲಿಕಬ್ಬು, ಭತ್ತ, ರಾಗಿ, ಉದ್ದು, ಹುರುಳಿ, ಎಳ್ಳು, ಹೆಸರು, ಆಲಸಂದೆ, ತೊಗರಿ, ಜೋಳ, ಮುಸುಕಿನ ಜೋಳ, ಅವರೆ ಬೆಳೆಗಳನ್ನು ಬೆಳೆಯಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಶೇ.97 ರಷ್ಟು ಬೆಳೆ ಬಿತ್ತನೆಯಾಗಿದೆ. ಆದರೆ,ಕಳೆದ ಒಂದು ವಾರದಿಂದ ಪ್ರತಿ ದಿನ ಮಳೆ ಸುರಿಯುತ್ತಿದೆ. 55828 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಹಾಗೂ55765 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯ ಲಾಗಿದೆ. ಈಗಾಗಲೇಕೆಲವೆಡೆ ಬೆಳೆಕಾಳುಕಟ್ಟು ತ್ತಿದೆ. ಈ ಸಂದರ್ಭದಲ್ಲಿ ಉತ್ತಮವಾಗಿ ಮಳೆ ಯಾಗುತ್ತಿ ರುವುದರಿಂದ ರಾಗಿ ಹಾಗೂ ಭತ್ತ ಬೆಳೆಗೆ ಅನು ಕೂಲವಾಗಲಿದೆ. ಇದರಿಂದ ಉತ್ತಮ ಫ‌ಸಲು ಬರಲಿದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದರಿಂದ ‌ ಬಿತ್ತನೆ ಕಾರ್ಯಗಳು ಮುಗಿದಿದೆ. ಬೆಳೆಗಳು ಕಾಳು ಕ‌ಟ್ಟುವ‌ ಸಂದರ್ಭ ಬಂದಿದೆ. ಇದರಿಂದ ‌ ಉತ್ತಮ ಫ‌ಸಲು ನಿರೀಕ್ಷಿಸಬಹುದು. ಜೂನ್‌ನಲ್ಲಿ ಬಿತ್ತನೆ ಮಾಡಿದ ಕೆಲವೊಂದು ಕಡೆ ರಾಗಿ ಕ ಟಾವಿಗೆ ಬಂದಿದ್ದು, ಆ ಭಾಗದಲ್ಲಿ ಸ್ವಲ್ಪ ತೊಂದರೆಯಾಗಬಹುದು. ಆದರೆ,  ಇದುವರೆಗೂಎಲ್ಲಿಯೂ ಬೆಳೆ ನಷ್ಟ ಸಂಭವಿಸಿಲ್ಲ. – ಚಂದ್ರಶೇಖರ್‌, ಕೃಷಿ ಜಂಟಿ ನಿರ್ದೇಶಕ, ಮಂಡ್ಯ

 

ಎಚ್‌.ಶಿವರಾಜು

ಟಾಪ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾಂಪತ್ಯಕ್ಕೆ ಕಾಲಿಟ್ಟ ಹಿರಿಯ ಪ್ರೇಮಿಗಳು

ದಾಂಪತ್ಯಕ್ಕೆ ಕಾಲಿಟ್ಟ ಹಿರಿಯ ಪ್ರೇಮಿಗಳು

ಹಂದಿಗಳ ಹಾವಳಿ

ಹಂದಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ

ಕೃಷಿ ಮೇಳ

ನಾಳೆ, ನಾಡಿದ್ದು ಕೃಷಿ ಮೇಳ

ಶ್ರೀರಂಗಪಟ್ಟಣ ದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.