ಶ್ರೀರಂಗಪಟ್ಟಣ ಕೈನಲ್ಲಿ ಭುಗಿಲೆದ್ದ ಭಿನ್ನಮತ


Team Udayavani, Mar 30, 2023, 12:59 PM IST

tdy-13

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಮೇಶ ಬಂಡಿಸಿದ್ದೇಗೌಡರನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಭಿನ್ನ ಮತ ಭುಗಿಲೆದ್ದಿದೆ. ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮತ್ತೂಬ್ಬ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದ ಪಾಲ ಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ಕೈ ಮುಖಂಡರ ಸಭೆ ನಡೆಸಿ ಚರ್ಚೆ ನಡೆಸಲಾಯಿತು.

ಕಳೆದ 30 ವರ್ಷದಿಂದ ಕಾಂಗ್ರೆಸ್‌ಗಾಗಿ ದುಡಿದವರಿಗೆ ಕೈ ಪಕ್ಷ ಮಣೆ ಹಾಕದೆ, 2 ಬಾರಿಯೂ ಚಂದ್ರಶೇಖರ್‌ಗೆ ಕೈ ಟಿಕೆಟ್‌ ನೀಡದೆ, ಮೂಲ ಕಾಂಗ್ರೆಸ್‌ ಪಕ್ಷದವರನ್ನು ಕಡೆಗಾಣಿಸಿ, ಜೆಡಿಎಸ್‌ನಿಂದ ವಲಸೆ ಬಂದ ಕಾಂಗ್ರೆಸಿಗರಿಗೆ ಮಣೆ ಹಾಕಿರುವುದು ಕೈ ಮುಖಂಡರಿಗೆ ಅಸಮಧಾನ ಉಂಟಾಗಿ ಸಭೆ ನಡೆಸಲಾಗಿದೆ. ಕ್ಷೇತ್ರದ ವಿವಿಧ ಗ್ರಾಮಗಳಿಂದ ನೂರಕ್ಕೂ ಹೆಚ್ಚು ಮಂದಿ ಅಸಮಧಾನಗೊಂಡ ಕಾಂಗ್ರೆಸ್‌ ಮುಖಂಡರು ಪೂರ್ವ ಭಾವಿಯಾಗಿ ಸಭೆ ಕರೆದಿದ್ದಾರೆ ಎನ್ನಲಾಗಿದೆ.

ಮೂಲ ಕಾಂಗ್ರೆಸಿಗರನ್ನು ಕಡೆಗಣನೆ: ಕಾಂಗ್ರೆಸ್‌ ಪಕ್ಷಕ್ಕೆ ವಲಸೆ ಬಂದ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅಸಮಧಾನಿತ ಮುಖಂಡರನ್ನು ಭೇಟಿ ಮಾಡದೆ ನಿರ್ಲಕ್ಷಿéಸಿದ್ದಾರೆ. ಪಕ್ಷದಲ್ಲಿ ನಡೆದ ಯಾವುದೇ ಕಾರ್ಯಕ್ರಮ, ಸಭೆಗಳಿಗೆ ಮೂಲ ಕಾಂಗ್ರೆಸಿಗರನ್ನು ಕರೆಯದೆ, ಕಡೆಗಣಿಸಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.

ಪ್ರಜಾಧ್ವನಿ ಯಾತ್ರೆಗೆ ಕರೆದಿಲ್ಲ: ಪ್ರಜಾಧ್ವನಿ ಯಾತ್ರೆಗೆ ನಮ್ಮನ್ನು ಕರೆದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕ್ಷೇತ್ರಕ್ಕೆ ಆಗಮಿಸಿದ್ದರೂ, ಪಾಲಹಳ್ಳಿ ಚಂದ್ರಶೇಖರ್‌ ಕೈ ಪಕ್ಷದ ಆಕಾಂಕ್ಷಿ ಎಂದು ತಿಳಿದಿದ್ದರೂ ಇಲ್ಲಿನ ಸಮಸ್ಯೆ ಕುರಿತು ಚರ್ಚಿಸಿಲ್ಲ. ಯಾವುದೇ ಫ್ಲೆಕ್ಸ್‌ಗಳಲ್ಲಿ ಚಂದ್ರಶೇಖರ್‌ ಭಾವಚಿತ್ರ ಹಾಕದಿರುವುದು ಚಂದ್ರಶೇಖರ್‌ ಬೆಂಬಲಿಗರಿಗೆ ಅಸಮಧಾನ ಉಂಟಾಗಿದೆ. ಪ್ರಸ್ತುತ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಬೇಕೆಂಬ ಒತ್ತಾಯವನ್ನು ಅಭಿಮಾನಿಗಳು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನಮ್ಮ ಬಗ್ಗೆ ಗಮನಹರಿಸಿಲ್ಲ: ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದ ಪಾಲಹಳ್ಳಿ ಚಂದ್ರಶೇಖರ್‌ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಮ್ಮ ಆತ್ಮೀಯರಾಗಿದ್ದು, ಹಲವು ದಿನದಿಂದ ರಾಜ್ಯದಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿ ದ್ದೇನೆ. ಆದರೆ, ಕ್ಷೇತ್ರಕ್ಕೆ ಬಂದು ಹೋಗುವವರೆಗೂ ಅವರು ನಮ್ಮ ಬಗ್ಗೆ ಗಮನಹರಿಸದಿರುವುದು ಬೇಸರ ತಂದಿದೆ. ಪಕ್ಷೇತರವಾಗಿ ಸ್ಪರ್ಧೆ ವಿಚಾರದಲ್ಲಿ ಮುಂದಿನ 2-3 ದಿನದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಚಿಕಂಕನಹಳ್ಳಿ ಗ್ರಾಮದ ಯುವಕರು ಪಾಲಹಳ್ಳಿ ಚಂದ್ರಶೇಖರ್‌ ಅವರನ್ನು ಅಭಿನಂದಿಸಿ, ಪಕ್ಷೇತರವಾಗಿ ಸ್ಪರ್ಧೆ ಮಾಡಿ, ಕ್ಷೇತ್ರದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಪ್ರಮುಖರಾದ ಮರಳಾಗಾಲ ಧನಂಜಯ್, ಕೆಆರ್‌ಎಸ್‌ ತಮ್ಮಣ್ಣ, ನೆಲ ಮನೆ ಸಿದ್ದಲಿಂಗಣ್ಣ, ಮರಳಾಗಾಲ ವಿಜಯ್‌ ಕುಮಾರ್‌, ದರಸಗುಪ್ಪೆ ಗೋಪಾಲ್‌, ಕೂಡಲಕುಪ್ಪೆ ಸಿದ್ದೇಗೌಡ ಹಾಜರಿದ್ದರು.

ಟಾಪ್ ನ್ಯೂಸ್

ISSF Junior World Cup: ಧನುಷ್‌ ಶ್ರೀಕಾಂತ್‌ಗೆ ಚಿನ್ನ

ISSF Junior World Cup: ಧನುಷ್‌ ಶ್ರೀಕಾಂತ್‌ಗೆ ಚಿನ್ನ

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಡೂರು ಟಗರು 1.10 ಲಕ್ಷ ರೂ.  

ಬಂಡೂರು ಟಗರು 1.10 ಲಕ್ಷ ರೂ.  

ಕೊನೆ ಭಾಗದ ಬೆಳೆಗೆ ನೀರು ಹರಿಸಿ

ಕೊನೆ ಭಾಗದ ಬೆಳೆಗೆ ನೀರು ಹರಿಸಿ

ಮಂಡ್ಯ: ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು: ನಾಲ್ವರು ಯುವಕರು ಸಾವು

ಮಂಡ್ಯ: ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು: ನಾಲ್ವರು ಯುವಕರು ಸಾವು

ಕಿಕ್ಕೇರಿಯಲ್ಲಿ ನಾಯಿಗಳ ಉಪಟಳಕ್ಕೆ ಜನರು ಕಂಗಾಲು

ಕಿಕ್ಕೇರಿಯಲ್ಲಿ ನಾಯಿಗಳ ಉಪಟಳಕ್ಕೆ ಜನರು ಕಂಗಾಲು

tdy-19

10.25 ಲಕ್ಷ ರೂ.ದಾಖಲೆ ಬೆಲೆಗೆ ಎತ್ತು ಮಾರಾಟ

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

Cricket World Cup Qualifier: ಜಿಂಬಾಬ್ವೆ ಬಲಿಷ್ಠ ತಂಡ ಪ್ರಕಟ

Cricket World Cup Qualifier: ಜಿಂಬಾಬ್ವೆ ಬಲಿಷ್ಠ ತಂಡ ಪ್ರಕಟ

ISSF Junior World Cup: ಧನುಷ್‌ ಶ್ರೀಕಾಂತ್‌ಗೆ ಚಿನ್ನ

ISSF Junior World Cup: ಧನುಷ್‌ ಶ್ರೀಕಾಂತ್‌ಗೆ ಚಿನ್ನ

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ