Udayavni Special

ಜಿಲ್ಲೆಯ ಜನತೆಯ ಋಣ ತೀರಿಸಲು ಬಂದಿರುವೆ

Team Udayavani, Mar 2, 2019, 7:16 AM IST

jil-janate.jpg

ಕೆ.ಆರ್‌.ಪೇಟೆ: ಜಿಲ್ಲೆಯ ಜನತೆಯ ಋಣ ತೀರಿಸಲೇ ನಾನು ಇಲ್ಲಿಗೆ ಬಂದಿರುವೆ ಎಂದು ಸುಮಲತಾ ಅಂಬರೀಶ್‌ ಹೇಳಿದರು. ಪಟ್ಟಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂಬರೀಶ್‌ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಲು ಮಂಡ್ಯ ಜಿಲ್ಲೆಯ ಜನತೆಯ ಆಶೀರ್ವಾದವೇ ಕಾರಣ.

ನಿಮ್ಮ ಋಣ ತೀರಿಸಲು ನಾನು ಬಂದಿರುವೆ. 45 ವರ್ಷಗಳಿಂದ ನಮ್ಮ ಕೈಹಿಡಿದರುವ ಮಂಡ್ಯದ ಜನತೆ ಮುಂದಿನ ದಿನಗಳಲ್ಲಿಯೂ ನಮ್ಮ ಕುಟುಂಬದ ಕೈಹಿಡಿದು ನಡೆಸುತ್ತಾರೆ ಎಂಬ ಭರವಸೆ ನನಗಿದೆ. ಈಗ ತಮ್ಮ ಋಣ ತೀರಿಸಲು ಒಂದು ಅವಕಾಶಕ್ಕಾಗಿ ನಿಮ್ಮ ಮುಂದೆ ಬಂದಿದ್ದೇನೆ ಎಂದು ಹೇಳಿದರು.

ನಿಮ್ಮ ಪ್ರೀತಿಗೆ ಚಿರಋಣಿ: ನಾನು ಅಂಬರೀಶ್‌ರನ್ನು ಕಳೆದುಕೊಂಡು ದುಃಖದಲ್ಲಿದ್ದಾಗ ಮಂಡ್ಯದ ಜನತೆ ಬಂದು ನನಗೆ ಸಾಂತ್ವನ ಹೇಳುವ ಜೊತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಕೊನೆಯವರೆಗೂ ಅಂಬರೀಶ್‌ ಅಭಿಮಾನಿಗಳಾಗಿ  ನಮ್ಮೊಂದಿಗೆ ನೀವಿರಬೇಕು. ಮಂಡ್ಯ ಜನತೆ ಅಂಬರೀಶ್‌ ಮೇಲಿಟ್ಟಿದ್ದ ಪ್ರೀತಿಗೆ ಕಟ್ಟುಬಿದ್ದು ನಾನಿಂದು ನಿಮ್ಮ ಮುಂದೆ ನಿಂತಿರುವೆ.

ನನಗೆ ಯಾವ ಅಧಿಕಾರದ ಆಸೆ ಇಲ್ಲ. 45 ವರ್ಷಗಳ ಕಾಲ ಜನರು ನಮಗೆ ನೀಡಿರುವ ಪ್ರೀತಿಗೆ ಸಣ್ಣ ಸೇವೆ ಮಾಡಬೇಕು ಎಂದು ಪ್ರಯತ್ನಿಸುತ್ತಿರುವೆ. ತಾವುಗಳು ಅನುಮತಿ ಹಾಗೂ ಅವಕಾಶ ನೀಡಿದರೆ ನಾನು  ನನ್ನ ಕೊನೆಯುಸಿರು ಇರುವವರೆಗೂ ತಮ್ಮ ಸೇವೆ ಮಾಡಲು ಸಿದ್ದಳಿದ್ದೇನೆ ಎಂದು ಸುಮಲತಾ ತಿಳಿಸಿದರು. 

ಹೃದಯವಂತ ಅಂಬರೀಶ್‌: ಹಿರಿಯ ಚಿತ್ರನಟ ದೊಡ್ಡಣ್ಣ ಮಾತನಾಡಿ, ಹೃದಯವಂತ ಕೊಡುಗೈ ದಾನಿ ದಿವಂಗತ ಅಂಬರೀಶ್‌ ಕೊಡುಗೆ ಅಪಾರವಾದುದು. ಅವರು ಮಂಡ್ಯದ ಮಗನಾಗಿದ್ದು, ಸುಮಲತಾರನ್ನು ಲೋಕಸಭಾ ಚುನಾವಣೆಯಲ್ಲಿ ಆಶೀರ್ವದಿಸುವ ಮೂಲಕ ರೆಬೆಲ್‌ ಸ್ಟಾರ್‌ಗೆ  ನಿಮ್ಮ ಪ್ರೀತಿ ಏನೆಂದು ತೋರಿಸಬೇಕು ಎಂದು ಮನವಿ ಮಾಡಿದರು. 

ಈ ವೇಳೆ ಖ್ಯಾತ ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌, ಹಿರಿಯ ಮುಖಂಡ ಎಂ.ಡಿ.ಕೃಷ್ಣಮೂರ್ತಿ, ಜಿಪಂ ಸದಸ್ಯ ದೇವರಾಜ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯರಾದ ಕಿಕ್ಕೇರಿ ಸುರೇಶ್‌, ರವೀಂದ್ರಬಾಬು, ಮನ್‌ಮುಲ್‌ ನಿರ್ದೇಶಕರಾದ ಡಾಲುರವಿ,

ಅಂಬರೀಶ್‌, ತಾಪಂ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್‌, ಜಿಪಂ ಮಾಜಿ ಸದಸ್ಯ ನಾಗೇಂದ್ರ, ಪುರಸಭಾ ಸದಸ್ಯರಾದ ಎಚ್‌.ಕೆ.ಅಶೋಕ್‌, ಕೆ.ಬಿ.ನಂದೀಶ್‌ಕುಮಾರ್‌, ಶೇಲ್ಲು ಮಹಮದ್‌ ಸೇರಿದಂತೆ ನೂರಾರು ಅಭಿಮಾನಿಗಳು ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಟಾಪ್ ನ್ಯೂಸ್

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

nothing ear 1

ಆಡಿಯೋ ಪ್ರಿಯರು ಕಾತುರದಿಂದ ಕಾಯುತ್ತಿದ್ದ ನಥಿಂಗ್‍ ಇಯರ್ (1) ಬಿಡುಗಡೆ: ಇದರ ವಿಶೇಷವೇನು?

ನಾಳೆ ದೆಹಲಿಗೆ ತೆರಳಿ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ

ನಾಳೆ ದೆಹಲಿಗೆ ತೆರಳಿ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ

Untitled-1

ಡ್ರೋನ್‌ ತಡೆ ತಂತ್ರಜ್ಞಾನ ಅನ್ವೇಷಣೆಗೆ ಕರಾವಳಿಗನ ಸಾರಥ್ಯ

ಟೋಕಿಯೊ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು

ಟೋಕಿಯೊ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು

ಬಿಎಸ್‌ವೈ ನೆರಳಾಗಬೇಡಿ:  ಬೊಮ್ಮಾಯಿಗೆ ದಿಲ್ಲಿ ವೀಕ್ಷಕರ ಕಿವಿಮಾತು

ಬಿಎಸ್‌ವೈ ನೆರಳಾಗಬೇಡಿ:  ಬೊಮ್ಮಾಯಿಗೆ ದಿಲ್ಲಿ ವೀಕ್ಷಕರ ಕಿವಿಮಾತು

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!‌

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ddhhg

ಮಳವಳ್ಳಿ : ದೇವರ ಪ್ರಸಾದ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಹಾಲಿನ ನೊರೆಯಂತೆ ಭೋರ್ಗರೆಯುತ್ತಿರುವ ಗಗನಚುಕ್ಕಿ ಜಲಪಾತ

ಹಾಲಿನ ನೊರೆಯಂತೆ ಭೋರ್ಗರೆಯುತ್ತಿರುವ ಗಗನಚುಕ್ಕಿ ಜಲಪಾತ

madya news

ಅಡೆತಡೆ ಇದ್ದರೂ ಸಾಧಿಸುವ ಛಲ

madya news

ಮನೆಗಳು ಬಿರುಕು: ಶಾಸಕರಿಂದ ಪರಿಹಾರ ಭರವಸೆ

ನಾಳೆ (ಜು.26) ಕೆಆರ್‌ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ

ನಾಳೆ (ಜು.26) ಕೆಆರ್‌ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ

MUST WATCH

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

udayavani youtube

ಶುಭಾಶಯಗಳು ಮಾಮ : ಬಸವರಾಜ್ ಬೊಮ್ಮಾಯಿಗೆ ಕಿಚ್ಚ ಸುದೀಪ್ ಹಾರೈಕೆ

udayavani youtube

ಹಳ್ಳಿಯ ಹೋಟೆಲ್ ಉದ್ಯಮದಲ್ಲಿ ತೃಪ್ತಿ ಕಂಡುಕೊಂಡ IT ಉದ್ಯೋಗಿಗಳು!

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

ಹೊಸ ಸೇರ್ಪಡೆ

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

nothing ear 1

ಆಡಿಯೋ ಪ್ರಿಯರು ಕಾತುರದಿಂದ ಕಾಯುತ್ತಿದ್ದ ನಥಿಂಗ್‍ ಇಯರ್ (1) ಬಿಡುಗಡೆ: ಇದರ ವಿಶೇಷವೇನು?

ನಾಳೆ ದೆಹಲಿಗೆ ತೆರಳಿ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ

ನಾಳೆ ದೆಹಲಿಗೆ ತೆರಳಿ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ

Untitled-1

ಡ್ರೋನ್‌ ತಡೆ ತಂತ್ರಜ್ಞಾನ ಅನ್ವೇಷಣೆಗೆ ಕರಾವಳಿಗನ ಸಾರಥ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.