ಪಿಂಡ ಪ್ರದಾನಕ್ಕೆ ಟೋಕನ್‌ ವ್ಯವಸ್ಥೆ


Team Udayavani, Sep 16, 2020, 3:49 PM IST

ಪಿಂಡ ಪ್ರದಾನಕ್ಕೆ ಟೋಕನ್‌ ವ್ಯವಸ್ಥೆ

ಶ್ರೀರಂಗಪಟ್ಟಣ: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಪಿಂಡ ಪ್ರದಾನದ ಶ್ರಾದ್ಧ ಕಾರ್ಯಮಾಡಲು ರಾಜ್ಯದ ವಿವಿಧೆಡೆಗಳಿಂದ ಸಾರ್ವಜನಿಕರು ನದಿ ತೀರಗಳಿಗೆ ಆಗಮಿಸುವುದರಿಂದ ತಾಲೂಕು ಆಡಳಿತ ಕೆಲವು ಮುಂಜಾಗ್ರತೆಕ್ರಮಗಳನ್ನುಕೈಗೊಂಡಿದೆ.

ಶ್ರೀರಂಗಪಟ್ಟಣದ ಕಾವೇರಿ ನದಿ ತೀರದ ಸಂಗಮ, ಪಶ್ಚಿಮ ವಾಹಿನಿ, ಸ್ನಾನಘಟ್ಟ ಹಾಗೂಗೋಸಾಯಿ ಘಾಟ್‌ ಸೇರಿದಂತೆ ವಿವಿಧ ಕಡೆ ಪಿಂಡ ಪ್ರದಾನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಜನಸಂದಣಿ ಹಾಗೂ ಗಲಾಟೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ಪೊಲೀಸ್‌ ಭದ್ರತೆ ನೀಡಲು ಮುಂದಾಗಿದೆ.

ಭದ್ರತೆಗಾಗಿ ತಂಡಗಳ ರಚನೆ: ಪೊಲೀಸ್‌,ಕಂದಾಯ ಹಾಗೂ ಪುರಸಭೆಅಧಿಕಾರಿಗಳ ತಂv ‌ರಚಿಸಲಾಗಿದೆ,ನದಿ ತೀರ‌ದಲ್ಲಿ ಎಲ್ಲೆಲ್ಲಿ ಪೊಜೆ, ಪಿಂಡಪ್ರದಾನ, ಶ್ರಾದ್ಧ ಕಾರ್ಯಗಳು ನಡೆಯುವ ಸ್ಥಳಗಳಲ್ಲಿ ಯಾವುದೇ ಗಲಾಟೆ, ಗದ್ದಲಗಳು ನಡೆಯದಂತೆ ನಿಗಾ ವಹಿಸಲು ಹಾಗೂ ಸ್ವಚ್ಛತೆ ನಿಯಮ ಗಳನ್ನು ಪಾಲಿಸುವಂತೆ ಕಟ್ಟೆಚ್ಚರ  ‌ಹಿಸಲಾಗಿದೆ.

ಟೋಕನ್‌ ವ್ಯವಸ್ಥೆ: ಬರುವ ಸಾರ್ವಜನಿಕರಿಂದ ಸ್ಥಳಗಳಲ್ಲಿ ಜನಸಂದಣಿ, ಜಗಳ, ನೂಕು ನುಗ್ಗಲು ಉಂಟಾಗದಂತೆ ತಡೆಗಟ್ಟಲು ಟೋಕನ್‌ ವ್ಯವಸ್ಥೆಮಾಡಲಾಗಿದೆ. ನದಿ ತೀರದಲ್ಲಿ ಎಲ್ಲೆಲ್ಲಿ ನಡೆಯುತ್ತದೆಯೋ, ಆ ಭಾಗದಲ್ಲಿ2ಕಡೆ ಟೋಕನ್‌ ಸಿಗಲಿದ್ದು,ಅದನ್ನು ಪಡೆದು ಕೊಂಡು ಸಾರ್ವ ಜನಿಕರು ಕಾರ್ಯ ಗಳನ್ನು ನಡೆಸ ಬೇಕು.

ನಿಗದಿತ ಮಂದಿಗೆ ಅವಕಾಶ: ಪಿಂಡ ಪ್ರದಾನ ಮಾಡಲು ಬರುವ ಸಾರ್ವಜನಿಕರಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಚಿಕ್ಕಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿದೆ. ಒಂದುಕುಟುಂಬದಿಂದ ಕೆಲವೇ ಮಂದಿಗೆ ಮಾತ್ರ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗಿದೆ.

ನಿಯಮ ಪಾಲಿಸುವಂತೆ ಸೂಚನೆ: ನದಿ ತೀರದ ಯಾವ ಭಾಗಗಳಲ್ಲಿ ಪೂಜೆ ಮಾಡಿ ಕೊಡುವ ವೈಧಿಕರು, ಪಂಡಿತರು, ಪೂಜಾರಿಗಳನ್ನು ಕರೆಸಿ ಸಭೆ  ನ‌ಡೆಸಿ ನಿರ್ದೇಶನ ‌ ನೀಡಲು ಕ್ರಮ ಕೈಗೊಳ್ಳಲಾಗಿದೆ. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಮತ್ತೆ ನಾಳೆ ಇನ್ನೊಂದು ಸಭೆ ಕ‌ರೆಯಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಸ್ವಚ್ಛತೆಗೆ ಆದ್ಯತೆ: ನದಿಗಳಲ್ಲಿ ಪಿಂಡ ಪ್ರದಾನ ಮಾಡಲು ಬರುವ ಸಾರ್ವಜನಿಕರು ಯಾವುದೇ ರೀತಿಯ ಬಟ್ಟೆ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ನದಿಗೆ ಬಿಡದಂತೆ ಸೂಚಿಸಲಾಗಿದೆ. ಅಲ್ಲದೆ, ಪುರಸಭೆ ಸಿಬ್ಬಂದಿಗಳು ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಅನುಪಯುಕ್ತ ಬಟ್ಟೆ, ತ್ಯಾಜ್ಯಗಳನ್ನು ಒಂದು ಹಾಕುವಂತೆಪುರಸಭೆಯಿಂದ ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟೈಸರ್‌, ಮಾಸ್ಕ್ ಕಡ್ಡಾಯ: ಕೊರೊನಾ ಇರುವುದರಿಂದ ಬರುವ ಸಾರ್ವಜನಿಕರುಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್‌ ಬಳಸಬೇಕು. ಅಲ್ಲದೆ, ಸಾಮಾಜಿಕ ಅಂತರಕಾಯ್ದುಕೊಂಡು ಕಾರ್ಯಗಳನ್ನು ಮಾಡಬೇಕು. ಗುಂಪು ಸೇರಬಾರದು ಎಂಬ ನಿಯಮಗಳನ್ನು ಹಾಕಲಾಗಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ತಾಲ್ಲೂಕು ಆಡಳಿತಕ್ರಮಕೈಗೊಂಡಿದೆ.

ಪೂಜೆಗಾಗಿ ನಡೆದಿತ್ತು ಮಾರಾಮಾರಿ :  ಕಳೆದ ವರ್ಷ ಕಾವೇರಿ ಸಂಗಮದಲ್ಲಿ ಪಿಂಡ ಪ್ರದಾನ ಪೂಜೆಗಾಗಿ ಸಾರ್ವಜನಿಕರನ್ನು ತಮ್ಮತ್ತ ಕರೆದುಕೊಂಡು ಹೋಗುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಕುಡುಗೋಲು, ಮಚ್ಚುಗಳಿಂದ ಪರಸ್ಪರ ಹಲ್ಲೆಗೆ ಯತ್ನಿಸಿದ ಘಟನೆಗಳು ನಡೆದಿದ್ದವು. ಈ ವಿಚಾರದಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಈ ಬಾರಿ ಯಾವುದೇ ಗಲಾಟೆ, ಗದ್ದಲಗಳು, ಜನಸಂದಣಿ ಸೇರದಂತೆ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಅಕ್ರಮ ಕುಟೀರ ನಿರ್ಮಾಣ :  ಕಳೆದ ಬಾರಿ ನದಿ ತೀರದಲ್ಲಿ ಅಕ್ರಮವಾಗಿ ಕುಟೀರಗಳನ್ನು ನಿರ್ಮಿಸಿಕೊಂಡು ಪಿಂಡ ಪ್ರದಾನ ಹಾಗೂ ವಾಮಚಾರ ಮಾಡುವ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳುಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಆಡಳಿತ ತೆರವುಗೊಳಿಸಿತ್ತು. ಇದರಿಂದ ಅಲ್ಲಿನ ಸಾರ್ವಜನಿಕರು ತಾಲೂಕು ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನಂತರ ಮತ್ತೆಕುಟೀರಗಳು ತಲೆ ಎತ್ತಿವೆ.

ಟಾಪ್ ನ್ಯೂಸ್

CM-@-4

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರಧಾನಿಗಳಿಂದ ಉದ್ಘಾಟನೆ

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

1-ADSAD

ಯುವಕನಾದ ಸಿದ್ದರಾಮಯ್ಯ ..! ; ರಾಹುಲ್ ಜತೆ ರೇಸ್ ….!; ವಿಡಿಯೋ ವೈರಲ್

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

fadnavis

ದಸರಾ ರ‍್ಯಾಲಿಯಲ್ಲಿ ಶಿಂಧೆ ‘ನಿಜವಾದ ಶಿವಸೇನೆ’ ತೋರಿಸಿದ್ದಾರೆ: ಫಡ್ನವಿಸ್

america

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಕೊಲೆ : ಕೊರಿಯಾ ಮೂಲದ ವಿದ್ಯಾರ್ಥಿಯ ಬಂಧನ

1—dsadsadsad

ಪ್ಯಾನ್ ಇಂಡಿಯಾ ಫಿಕ್ಸ್ : ‘ಕಾಂತಾರ’ ಹಿಂದಿ ಟ್ರೈಲರ್ ರೆಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

ಇಂದಿನಿಂದ 13ರವರೆಗೆ ಮಹದೇಶ್ವರ ಜ್ಯೋತಿ ಯಾತ್ರೆ

ಕುಂಭಮೇಳ ಅಚ್ಚುಕಟ್ಟಾಗಿ ನಿರ್ವಹಿಸಿ: ಡೀಸಿ

ಕುಂಭಮೇಳ ಅಚ್ಚುಕಟ್ಟಾಗಿ ನಿರ್ವಹಿಸಿ: ಡೀಸಿ

ಡಬಲ್‌ ಎಂಜಿನ್‌ ಸರ್ಕಾರದಿಂದ ಭ್ರಷ್ಟಾಚಾರ: ರಾಹುಲ್‌ ಗಾಂಧಿ

ಡಬಲ್‌ ಎಂಜಿನ್‌ ಸರ್ಕಾರದಿಂದ ಭ್ರಷ್ಟಾಚಾರ: ರಾಹುಲ್‌ ಗಾಂಧಿ

ರೈತರ ಬದುಕು ಹಸನಾಗಲು ಸಂಘಟಿತ ಹೋರಾಟ ಮುಖ್ಯ

ರೈತರ ಬದುಕು ಹಸನಾಗಲು ಸಂಘಟಿತ ಹೋರಾಟ ಮುಖ್ಯ

ಮಂಡ್ಯ; ಆಡುವಾಗ ಬಿದ್ದು ಮೃತಪಟ್ಟ ಎಂಟು ವರ್ಷದ ಬಾಲಕ

ಮಂಡ್ಯ; ಆಡುವಾಗ ಬಿದ್ದು ಮೃತಪಟ್ಟ ಎಂಟು ವರ್ಷದ ಬಾಲಕ

MUST WATCH

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

ಹೊಸ ಸೇರ್ಪಡೆ

CM-@-4

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರಧಾನಿಗಳಿಂದ ಉದ್ಘಾಟನೆ

1-sadasdad

ವ್ಯಕ್ತಿಯ ಬಳಿ ಸುಲಿಗೆ :ಆರು ತಾಸುಗಳಲ್ಲೇ ಇಬ್ಬರು ಆರೋಪಿಗಳ ಬಂಧನ

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

1-ADSAD

ಯುವಕನಾದ ಸಿದ್ದರಾಮಯ್ಯ ..! ; ರಾಹುಲ್ ಜತೆ ರೇಸ್ ….!; ವಿಡಿಯೋ ವೈರಲ್

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.