Udayavni Special

ಕಟ್ಟಡ ತ್ಯಾಜ್ಯ ಸಂಗ್ರಹಣೆಗೆ ಖಾಸಗಿ ಸಂಸ್ಥೆ ಜತೆ ಒಪ್ಪಂದ ಅಕ್ರಮ

Team Udayavani, Jan 5, 2021, 4:17 PM IST

ಕಟ್ಟಡ ತ್ಯಾಜ್ಯ ಸಂಗ್ರಹಣೆಗೆ ಖಾಸಗಿ ಸಂಸ್ಥೆ ಜತೆ ಒಪ್ಪಂದ ಅಕ್ರಮ

ಮೈಸೂರು: ಕಟ್ಟಡ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಾಗಿ ಸುಸ್ಥಿರ ಟ್ರಸ್ಟ್‌ಗೆ ಅವಕಾಶ ನೀಡಿರುವ ಪಾಲಿಕೆ ಕ್ರಮ ಸರಿಯಲ್ಲ. ಇಲ್ಲಿ ಯಾವ ನಿಯಮವೂ ಪಾಲನೆಯಾಗಿಲ್ಲ. ಗ್ಲೋಬಲ್‌ ಟೆಂಡರ್‌ಕರೆಯಿರಿ, ಇಲ್ಲವೇ ನ್ಯಾಯಾಲಯ ಮೊರೆ ಹೋಗುತ್ತೇವೆ ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡಗಳ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಸುಸ್ಥಿರ ಟ್ರಸ್ಟ್‌ಗೆ ಅವಕಾಶ ನೀಡುವಾಗ ನಗರಪಾಲಿಕೆ ನಿಯಮಾವಳಿಗಳು, ಸರ್ಕಾರದ ಮಾನದಂಡಗಳುಪಾಲನೆಯಾಗಿಲ್ಲ. ಸಂಸದ ಪ್ರತಾಪ್‌ ಸಿಂಹ ಒತ್ತಾಯದ ಮೇಲೆ ಸುಸ್ಥಿರ ಟ್ರಸ್ಟ್‌ಗೆ ನೀಡಲಾಗಿದೆ ಎಂದು ಆರೋಪಿಸಿದರು.

ಸುಸ್ಥಿರ ಟ್ರಸ್ಟ್‌ ಈ ರೀತಿ ಪ್ರಾಜೆಕ್ಟ್ ಎಲ್ಲಿ ಮಾಡಿದ್ದಾರೆ ಎನ್ನುವುದನ್ನು ಮೊದಲು ತಿಳಿಸಿ? 10 ಎಕರೆ ಭೂಮಿಯನ್ನು ಉಚಿತವಾಗಿ ಕೊಡುತ್ತಾರೆ. ಸುಸ್ಥಿರ ಟ್ರಸ್ಟ್‌ಗೆ ನೀಡಲು ಪ್ರತಾಪಸಿಂಹ ದೊಡ್ಡ ಮಟ್ಟದ ಆಂದೋ ಲನ ಮಾಡುತ್ತಾರೆ. ಈ ಯೋಜನೆ ಟ್ರಸ್ಟ್‌ಗೆ ಅರ್ಹತೆ ಇದೆಯಾ ಎಂದು ಪ್ರಶ್ನಿಸಿದರು.

ಸಾಲದ ಕೂಪಕ್ಕೆ ತಳ್ಳಿದ ಬಿಜೆಪಿ: ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿ ಇಡೀ ದೇಶವನ್ನು ಸಾಲದ ಕೂಪಕ್ಕೆ ತಳ್ಳುವ ಕೆಲಸ ಮಾಡುತ್ತಿವೆ. ಜೂನ್‌ 2014ರವರೆಗೆ ನಮ್ಮ ದೇಶದ ಸಾಲ 54 ಲಕ್ಷ ಕೋಟಿ ರೂ. ಇತ್ತು. ಈಗ 2020ರ ಡಿಸೆಂಬರ್‌ ವೇಳೆಗೆ 107 ಲಕ್ಷ ಕೋಟಿ ರೂ. ಆಗಿದೆ. ಮೋದಿ ಸರ್ಕಾರ ಬಂದ ಮೇಲೆ 53 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಸಿದ್ದರಾಮಯ್ಯ 5 ವರ್ಷಕ್ಕೆ 90 ಸಾವಿರಕೋಟಿ ರೂ. ಸಾಲ ಮಾಡಿದ್ದರು. ಬಿಎಸ್‌ ಯಡಿಯೂರಪ್ಪ 1.2 ಲಕ್ಷ ಕೋಟಿ ರೂ.ಸಾಲವನ್ನ ಒಂದೂವರೆ ವರ್ಷದಲ್ಲೇ ಮಾಡಿದ್ದಾರೆ. ಸಿದ್ದರಾಮಯ್ಯ 90 ಸಾವಿರ ಕೋಟಿ ಮಾಡಿದ್ದನ್ನೇ ಬಿಜೆಪಿಯವರು ಊರ ತುಂಬಾ ಹೇಳಿಕೊಂಡು ಬಂದಿದ್ದರು ಎಂದು ಅವರು ಕಿಡಿಕಾರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌.  ಮೂರ್ತಿ, ಕಾರ್ಯದರ್ಶಿ ಶಿವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

20 ಪಂಚಾಯ್ತಿಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯಲಿ: ಸವಾಲು :  ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮೈಸೂರಿನ ಯಾವುದೇ ಕ್ಷೇತ್ರದಲ್ಲಾಗಲೀ 20ಪಂಚಾಯತಿಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದುತೋರಿಸಲಿ ಎಂದು ಸವಾಲು ಹಾಕಿದ ಲಕ್ಷ್ಮಣ್‌, ಜಿಲ್ಲೆಯ ಎಲ್ಲಾ ಕಡೆ ನಾವೇ ಗೆದ್ದಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೊಂಡುಓಡಾಡುತ್ತಿದ್ದಾರೆ. ಹುಣಸೂರಿನ 41ಪಂಚಾಯಿತಿ ಪೈಕಿ ಸ್ವತಂತ್ರವಾಗಿ 35ಕ್ಕೂ ಹೆಚ್ಚುಪಂಚಾಯತಿಯಲ್ಲಿ ಕಾಂಗ್ರೆಸ್‌ ಚುಕ್ಕಾಣಿ ಹಿಡಿಯಲಿದೆ. ಆದರೆ ಬಿಜೆಪಿಯವರುಹಳ್ಳಿಯಿಂದ ದಿಲ್ಲಿವರೆಗೂ ನಾವೇ ಅಂತಾ ಹೇಳುತ್ತಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನೀತಿ ಆಯೋಗ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಮತ್ತೆ ಅಗ್ರ ಸ್ಥಾನ: ಶೆಟ್ಟರ್‌ ಹರ್ಷ

ನೀತಿ ಆಯೋಗ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ: ಶೆಟ್ಟರ್‌ ಹರ್ಷ

ನಮ್ಮ ಹೋರಾಟ ಕ್ರಾಂತಿ ರೂಪ ಪಡೆಯುತ್ತೆ : ಕಾಶಪ್ಪನವರ್

ನಮ್ಮ ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದರೆ ಕ್ರಾಂತಿ ರೂಪ ಪಡೆಯಲಿದೆ : ಕಾಶಪ್ಪನವರ್

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ, ಧ್ರುವನಾರಾಯಣ ನೇಮಕ

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ, ಧ್ರುವನಾರಾಯಣ ನೇಮಕ

covesheild

ಅಸ್ಸಾಂ ನಲ್ಲಿ ಹೆಪ್ಪುಗಟ್ಟಿದ ಕೊವಿಶೀಲ್ಡ್ ಲಸಿಕೆ

ಕಾಂಗ್ರೆಸ್ ಪ್ರತಿಭಟನೆಗೆ ಪೊಲೀಸರ ತಡೆ: ಡಿಕೆಶಿ, ಸಿದ್ದರಾಮಯ್ಯ ಪೊಲೀಸ್ ವಶಕ್ಕೆ

ಕಾಂಗ್ರೆಸ್ ಪ್ರತಿಭಟನೆಗೆ ಪೊಲೀಸರ ತಡೆ: ಡಿಕೆಶಿ, ಸಿದ್ದರಾಮಯ್ಯ ಪೊಲೀಸ್ ವಶಕ್ಕೆ

ಕರಾವಳಿಯಲ್ಲಿ ಮುಂದುವರಿದ ಹೀನ ಕೃತ್ಯ: ಕಾಣಿಕೆ ಡಬ್ಬಿಗಳೇ ಟಾರ್ಗೆಟ್!

ಕರಾವಳಿಯಲ್ಲಿ ಮುಂದುವರಿದ ಹೀನ ಕೃತ್ಯ: ಕಾಣಿಕೆ ಡಬ್ಬಿಗಳೇ ಟಾರ್ಗೆಟ್!

corona virus Increased

ದೇಶದಲ್ಲಿ ಮತ್ತೆ ಕೋವಿಡ್ ಸೋಂಕು ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Let the farmers price their own crop

ರೈತರು ತಮ್ಮ ಬೆಳೆಗೆ ತಾವೇ ಬೆಲೆ ನಿಗದಿ ಮಾಡಲಿ

ಕುರುಬ ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ: ಸಿದ್ದರಾಮಯ್ಯಗೆ ವಿಶ್ವನಾಥ್ ಎಚ್ಚರಿಕೆ

ಕುರುಬ ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ: ಸಿದ್ದರಾಮಯ್ಯಗೆ ವಿಶ್ವನಾಥ್ ಎಚ್ಚರಿಕೆ

ಜಲಾಶಯದಲ್ಲಿ ಮೀನಿನ ಬಲೆಗೆ ಸಿಲುಕಿ ನರಳಾಡುತ್ತಿದ್ದ ಕಾಡಾನೆ ರಕ್ಷಣೆ

ಜಲಾಶಯದಲ್ಲಿ ಮೀನಿನ ಬಲೆಗೆ ಸಿಲುಕಿ ನರಳಾಡುತ್ತಿದ್ದ ಕಾಡಾನೆ ರಕ್ಷಣೆ

ಕೆರೆಗೆ ಇಳಿದ ಶುಂಠಿ ತುಂಬಿದ್ದ ಲಾರಿ: ಪ್ರಾಣಾಪಾಯದಿಂದ ಪಾರಾದ ಚಾಲಕ, ಸಹಾಯಕ

ಕೆರೆಗೆ ಇಳಿದ ಶುಂಠಿ ತುಂಬಿದ್ದ ಲಾರಿ: ಪ್ರಾಣಾಪಾಯದಿಂದ ಪಾರಾದ ಚಾಲಕ, ಸಹಾಯಕ

ಹುಣಸೂರು : ಸಂಪಿಗೆ ಬಿದ್ದು  ಒಂದೂವರೆ ವರ್ಷದ ಕಂದಮ್ಮ ಸಾವು

ಹುಣಸೂರು : ಸಂಪಿಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ಸಾವು

MUST WATCH

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

udayavani youtube

ಅರ್ನಾಬ್- ಗುಪ್ತಾ ವಾಟ್ಸ್ ಆ್ಯಪ್ ಚಾಟ್ ಲೀಕ್!! ಹೊಸಾ ಕಥೆ, ತುಂಬಾ ವ್ಯಥೆ…

udayavani youtube

ಮಂಗಳೂರು ಗೋಲಿಬಾರ್ ಗೆ ಪ್ರತೀಕಾರ: ಪೊಲೀಸ್ ಸಿಬ್ಬಂದಿ ಕೊಲೆ ಯತ್ನದ ಹಿಂದೆ ‘ಮಾಯಾ ಗ್ಯಾಂಗ್’

udayavani youtube

ಪಾರ್ಕಿಂಗ್ ಪರದಾಟ ಅಭಿಯಾನ; ಸುದಿನ ಸಂವಾದ

ಹೊಸ ಸೇರ್ಪಡೆ

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

ನೀತಿ ಆಯೋಗ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಮತ್ತೆ ಅಗ್ರ ಸ್ಥಾನ: ಶೆಟ್ಟರ್‌ ಹರ್ಷ

ನೀತಿ ಆಯೋಗ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ: ಶೆಟ್ಟರ್‌ ಹರ್ಷ

ನಮ್ಮ ಹೋರಾಟ ಕ್ರಾಂತಿ ರೂಪ ಪಡೆಯುತ್ತೆ : ಕಾಶಪ್ಪನವರ್

ನಮ್ಮ ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದರೆ ಕ್ರಾಂತಿ ರೂಪ ಪಡೆಯಲಿದೆ : ಕಾಶಪ್ಪನವರ್

ಪಂಚವಾರ್ಷಿಕ ಯೋಜನೆಯಾಯ್ತು ಈಜುಕೊಳ : ಕುಂಟುತ್ತಲೇ ಸಾಗಿರುವ ಕಾಮಗಾರಿ

ಪಂಚವಾರ್ಷಿಕ ಯೋಜನೆಯಾಯ್ತು ಈಜುಕೊಳ : ಕುಂಟುತ್ತಲೇ ಸಾಗಿರುವ ಕಾಮಗಾರಿ

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ, ಧ್ರುವನಾರಾಯಣ ನೇಮಕ

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ, ಧ್ರುವನಾರಾಯಣ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.