ಊಟವಿಲ್ಲದ್ದಕ್ಕೆ ಬ್ಯಾಂಕ್‌ ಸಭೆ ಬಹಿಷ್ಕಾರ


Team Udayavani, Dec 25, 2020, 3:18 PM IST

ಊಟವಿಲ್ಲದ್ದಕ್ಕೆ ಬ್ಯಾಂಕ್‌ ಸಭೆ ಬಹಿಷ್ಕಾರ

ಎಚ್‌.ಡಿ.ಕೋಟೆ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ಪಿಕಾರ್ಡ್‌ ಬ್ಯಾಂಕ್‌) ವಾರ್ಷಿಕ ಮಹಾಸಭೆ ಅವ್ಯವಸ್ಥೆಗಳ ಆಗರವಾಗಿತ್ತು.ಗೊಂದಲದ ಗೂಡಾಗಿದ್ದ ಈ ಸಭೆಯಲ್ಲಿ ಉಪಾಹಾರ ವ್ಯವಸ್ಥೆ ಮಾಡದ ಕಾರಣ ರೈತರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರ ನಡೆದರು. ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಎಂ.ಡಿ. ಮಂಚಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಪಿಕಾರ್ಡ್‌ ಬ್ಯಾಂಕ್‌ ವಾರ್ಷಿಕ ಸಭೆಯಲ್ಲಿ ಆಡಳಿತ ಮಂಡಳಿ ಹಾಗೂ ಸದಸ್ಯರನಡುವೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು.

ರೈತ ಮುಖಂಡರಾದ ಹೂ.ಕೆ.ಮಹೇಂದ್ರ, ಎಚ್‌.ಸಿ.ನರಸಿಂಹಮೂರ್ತಿ ಮಾತನಾಡಿ,ಬ್ಯಾಂಕ್‌ನಲ್ಲಿ 11 ಸಾವಿರಕ್ಕೂ ಅಧಿಕಸದಸ್ಯರಿದ್ದು, ಸದಸ್ಯರಿಗೆ ವಾರ್ಷಿಕ ಸಭೆಯಆಹ್ವಾನ ಪತ್ರಿಕೆ ನೀಡಿಲ್ಲ ಎಂದು ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದ ಎಂ.ಡಿ.ಮಂಚಯ್ಯ,ನಿಯಮ ಪ್ರಕಾರ ಸದಸ್ಯತ್ವ ಇರುವ 5047ಮಂದಿಗೆ ಆಹ್ವಾನ ಪತ್ರ ಕಳುಹಿಸಲಾಗಿದೆ ಎಂದು ಅಂಚೆ ಇಲಾಖೆಯ ಸ್ವೀಕೃತಿ ದಾಖಲೆಗಳನ್ನು ಪ್ರದರ್ಶಿಸಿದರು. ಅಂಬೇಡ್ಕರ್‌ ಭವನದಲ್ಲಿ 200- 250 ಮಂದಿ ಮಾತ್ರ ಕುಳಿತುಕೊಳ್ಳಲು ಅವಕಾಶ ಇದೆ. ಆದರೆ, 5,047 ಮಂದಿಗೆ ಆಹ್ವಾನ ನೀಡಿದ್ದರೆ ಇಷ್ಟು ಚಿಕ್ಕ ಭವನದಲ್ಲಿ ವಾರ್ಷಿಕಸಭೆ ನಡೆಸಲು ಹೇಗೆ ಸಾಧ್ಯ ಎಂದು ಸದಸ್ಯರು ಪ್ರಶ್ನಿಸಿದರು.

ಹುನ್ನಾರ: ಇದೆಲ್ಲಾ ಪೂರ್ವಯೋಜಿತ ಹುನ್ನಾರ. ಬಹುಸಂಖ್ಯೆ ರೈತರಿಗೆ ಆಹ್ವಾನವೇಬಂದಿಲ್ಲ, ಆಡಳಿತ ಮಂಡಳಿ ಪರವಾಗಿರುವಸದಸ್ಯರಿಗಷ್ಟೇ ಆಹ್ವಾನ ನೀಡಲಾಗಿದೆ.ಸದಸ್ಯರನ್ನು 3 ಸಭೆಗೆ ಗೈರು ಮಾಡಿ ಸದಸ್ಯತ್ವ ರದ್ದು ಪಡಿಸಿ, ತಮಗೆ ಬೇಕಾದ ಸದಸ್ಯರನ್ನು ಉಳಿಸಿಕೊಳ್ಳುವ ಸಂಚು ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ: ಈ ವೇಳೆ ಆಡಳಿತ ಮಂಡಳಿ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯ ಎಚ್‌.ಸಿ. ನರಸಿಂಹಮೂರ್ತಿ ವೇದಿಕೆಯ ನೆಲದಲ್ಲಿಯೇಕಳಿತು ಪ್ರತಿಭಟನೆಗಿಳಿಯುತ್ತಿದ್ದಂತೆಯೇಇನ್ನುಳಿದ ಸದಸ್ಯರಾದ ರೇಚಣ್ಣ, ಪ್ರಕಾಶ,ಮಲಾರ ಮಹದೇವು, ಬಾಲರಾಜು, ನಾಗರಾಜು ಮತ್ತಿತರರು ಬೆಂಬಲ ವ್ಯಕ್ತಪಡಿಸಿ ಧರಣಿ ಕುಳಿತರು.

ಆಹ್ವಾನಿತ ರೈತರಿಗೆ ಆಸನಗಳ ವ್ಯವಸ್ಥೆ ಕಲ್ಪಿಸಿಲ್ಲ, ಪತ್ರಕರ್ತರನ್ನು ಆಹ್ವಾನಿಸಿಲ್ಲ, ಲೆಕ್ಕಪತ್ರಸರಿಯಾಗಿಲ್ಲ, ಸಾಲ ಮನ್ನಾ ವಿಚಾರವಾಗಿಸಮರ್ಪಕವಾಗಿ ಮಾಹಿತಿ ನೀಡಿಲ್ಲ ಎಂದು ಕಿಡಿಕಾರಿದರು.

ಆಕ್ರೋಶ: ಮಧ್ಯಾಹ್ನವಾಗುತ್ತಿದ್ದಂತೆಯೇ ಸಭೆಗೆಗ್ರಾಮೀಣ ಭಾಗದಿಂದ ರೈತರು ಆಗಮಿಸಿದ್ದರು. ವಾರ್ಷಿಕ ಸಭೆಯಲ್ಲಿ ಉಪಾಹಾರ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಉದ್ರಿಕ್ತರಾದ ರೈತರು ಆಡಳಿತಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರೈತರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗದ ಇದೊಂದು ವಾರ್ಷಿಕ ಸಭೆಯೇ?,ಕನಿಷ್ಠ ಸೌಜನ್ಯವೂ ಇಲ್ಲ ಎಂದು ದೂರಿದಸದಸ್ಯರು, ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಈ ಸಂದರ್ಭದಲ್ಲಿ ಆಡಳಿತಮಂಡಳಿ ಸಮಾಧಾನ ಪಡಿಸಲು ಯತ್ನಿಸಿದರೂಯಾವುದೇ ಉಪಯೋಗ ಆಗಲಿಲ್ಲ. ಒಟ್ಟರೆ ಪಿಕಾರ್ಡ್‌ ಬ್ಯಾಂಕ್‌ ವಾರ್ಷಿಕ ಸಭೆ ಗೊಂದಲ, ಅವ್ಯವಸ್ಥೆಗಳ ಆಗರವಾಗಿತ್ತು.

ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎನ್‌.ಮಲ್ಲಿಕಾರ್ಜುನ, ಶಂಕರ ಲಿಂಗೇಗೌಡ, ಪುಟ್ಟರಾಜು, ಗುರುಮೂರ್ತಿ, ಶುಭಮಂಗಳಾ, ನಾಗರಾಜು, ನಾಗರಾಜು,ಬಸವರಾಜು, ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಾರ್ಷಿಕ ಸಭೆ ಅಪಾರ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು.ಮಧ್ಯಾಹ್ನದ ವೇಳೆಯಲ್ಲಿ ರೈತರ ಸ್ಥಿತಿಗಮನಿಸಿದಾಗ ಉಪಾಹಾರದವ್ಯವಸ್ಥೆ ಮಾಡಬೇಕಿತ್ತು ಅನಿಸಿತು. ಕೋವಿಡ್ ಹಿನ್ನೆಲೆಯಲ್ಲಿ ಉಪಾಹಾರ ಕಲ್ಪಿಸಿಲ್ಲ. ನಮ್ಮಿಂದ ತಪ್ಪಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ. ಎಂ.ಡಿ.ಮಂಚಯ್ಯ, ಬ್ಯಾಂಕ್‌ ಅಧ್ಯಕ್ಷ

ಟಾಪ್ ನ್ಯೂಸ್

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ಪಣಜಿ: ಜೂನ್ 1ರಿಂದ ಮೀನುಗಾರಿಕೆಗೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

ಪಣಜಿ: ಜೂನ್ 1ರಿಂದ ಮೀನುಗಾರಿಕೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

police crime

UP ಇಬ್ಬರು ಸ್ಮಗ್ಲರ್ ಗಳ ಬಂಧನ; 2.5 ಕೋಟಿ ರೂ. ಡ್ರಗ್ಸ್ ವಶ

IPL 2023 Final: Dhoni won the toss against GT

GTvsCSK ಮೀಸಲು ದಿನದ ಐಪಿಎಲ್ ಫೈನಲ್: ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ

arrest-25

Kerala ಜೈಲಿನಲ್ಲಿ ಮಟನ್ ಕರಿಗಾಗಿ ಅಪರಾಧಿಯಿಂದ ಜೈಲರ್‌ಗಳಿಗೆ ಥಳಿತ!

ಅಳಿವಿನಂಚಿನಲ್ಲಿರುವ ಗೀಜಗನ ಹಕ್ಕಿ ಗೂಡುಗಳು… 

ಅಳಿವಿನಂಚಿನಲ್ಲಿರುವ ಗೀಜಗದ ಹಕ್ಕಿ ಗೂಡುಗಳು… ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ

ganja

ಆಂಧ್ರದಿಂದ ಮಂಗಳೂರಿಗೆ 23 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T Narasipura: ಖಾಸಗಿ ಬಸ್- ಇನ್ನೋವಾ ನಡುವೆ ಭೀಕರ ಅಪಘಾತ; ಮಕ್ಕಳು ಸೇರಿದಂತೆ 10 ಜನರುಸಾವು

T Narasipura: ಖಾಸಗಿ ಬಸ್- ಇನ್ನೋವಾ ನಡುವೆ ಭೀಕರ ಅಪಘಾತ; ಮಕ್ಕಳು ಸೇರಿದಂತೆ 10 ಜನರುಸಾವು

ಹೆಚ್ಚಿನ ದರ ನಿಗದಿ: ಸಸಿ ಖರೀದಿಗೆ ರೈತ ಹಿಂದೇಟು

ಹೆಚ್ಚಿನ ದರ ನಿಗದಿ: ಸಸಿ ಖರೀದಿಗೆ ರೈತ ಹಿಂದೇಟು

ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ ಕಬಿನಿ ಒಡಲು

ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ ಕಬಿನಿ ಒಡಲು

1-wdsa

Hunsur ಸಾಲ ಬಾಧೆಯಿಂದ ನೇಣಿಗೆ ಶರಣಾದ ವೃದ್ಧ ರೈತ

ಆದಿವಾಸಿಗಳ ವಿಶಿಷ್ಟ ವೇಷ ಧರಿಸುವ ಕುಂಡೆ ಹಬ್ಬ

ಆದಿವಾಸಿಗಳ ವಿಶಿಷ್ಟ ವೇಷ ಧರಿಸುವ ಕುಂಡೆ ಹಬ್ಬ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

Minchu

Shivamogga: ಸಿಡಿಲು ಬಡಿದು ಮಹಿಳೆ ಮೃತ್ಯು

1-sadsd

Koratagere ಟೋಲ್ ತೆರವಿಗೆ ಗಡುವು ನೀಡಿದ ಸಚಿವ ಕೆ.ಎನ್.ರಾಜಣ್ಣ

ಪಣಜಿ: ಜೂನ್ 1ರಿಂದ ಮೀನುಗಾರಿಕೆಗೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

ಪಣಜಿ: ಜೂನ್ 1ರಿಂದ ಮೀನುಗಾರಿಕೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

police crime

UP ಇಬ್ಬರು ಸ್ಮಗ್ಲರ್ ಗಳ ಬಂಧನ; 2.5 ಕೋಟಿ ರೂ. ಡ್ರಗ್ಸ್ ವಶ