ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ


Team Udayavani, Oct 26, 2021, 4:23 PM IST

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

ಎಚ್‌.ಡಿ.ಕೋಟೆ: ಕಳೆದ 3-4ದಿನಗಳ ಹಿಂದೆಯಷ್ಟೇ ಕೊಟ್ಟಿಗೆಯಲ್ಲಿ ಕಟ್ಟಿದ್ದ12ರಾಸುಗಳನ್ನು ಕಳ್ಳರು ಕದ್ದೊಯ್ದರೂ ಇತರೆ ಮಾಲಿಕರು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಿಡಾಡಿ ರಾಸುಗಳು ತಿರುಗುತ್ತಿದ್ದು ನಿತ್ಯ ಸವಾರರಿಗೆ ಕಂಟಕವಾಗಿವೆ.

ಪಟ್ಟಣದ ಸಾರ್ವಜನಿಕ ರಸ್ತೆಗಳು ಅದರಲ್ಲೂ ವಿಶೇಷವಾಗಿ ಪಟ್ಟಣದ ಸರ್ಕಾರಿ ಬಸ್‌ ನಿಲ್ದಾಣ, ಸಂತೆ ಮೈದಾನ, ಹಳೆಯ ಆಸ್ಪತ್ರೆ ಆವರಣ, ಹೌಸಿಂಗ್‌ ಬೋರ್ಡ್‌ ಮೊದಲಾದದ ಕಡೆಎಲ್ಲೆಂದರಲ್ಲಿ ಹಗಲು-ಇರುಳೆನ್ನದೆ ಬಿಡಾಡಿ ರಾಸುಗಳು ಸಂಚರಿಸುತ್ತಿವೆ.

ಕಳೆದ 3-4ದಿನಗಳ ಹಿಂದಷ್ಟೇ ತಾಲೂಕು ಕೇಂದ್ರ ಸ್ಥಾನದಿಂದ ಕೇವಲ 5ಕಿ.ಮೀ.ಅಂತರದಎಚ್‌.ಮಟಕೆರೆ ಗ್ರಾಮದ ಅಯ್ಯಂಗಾರ್‌ ಎಂಬವರ ಮನೆ ಕೊಟ್ಟಿಗೆಯಲ್ಲಿ ಕಟ್ಟಿದ್ದ 12ರಾಸುಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದು ಸಾಗಿಸಿದ್ದರು. ಈ ಕುರಿತು ಎಚ್‌.ಡಿ.ಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇಷ್ಟಾದರೂ ಎಚ್ಚೆತ್ತುಕೊಳ್ಳದ ಮಾಲಿಕರು, ರಾಸುಗಳನ್ನು ನಗರದಲ್ಲಿ ಸಂಚರಿಸಲು ಬಿಟ್ಟಿದ್ದಾರೆ.ಇಡೀ ದಿನ ಅಲೆದಾಡಿ ಹೊಟ್ಟೆ ತುಂಬಿಸಿಕೊಂಡು ಕತ್ತಲಾಗುತ್ತಿದ್ದಂತೆಯೇ ರಸ್ತೆ ಬದಿ ರಾತ್ರಿಕಳೆಯುತ್ತಿವೆ. ಇದರಿಂದ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಇನ್ನು ಬಿಡಾಡಿ ರಾಸುಗಳ ಪೈಕಿ ಹಲವು ಗೂಳಿಗಳೂ ಬೀದಿಗಳಲ್ಲೇ ದಿನ ಕಳೆಯುತ್ತಿದ್ದು ಪಾದಚಾರಿಗಳಲ್ಲಿ ಭಯ ಹುಟ್ಟಿಸಿವೆ.

ಎಚ್ಚೆತ್ತುಕೊಳ್ಳಿ: ಹಲವು ತಿಂಗಳ ಹಿಂದೆ ಬಿಡಾಡಿ ರಾಸುಗಳು ಸಂತೆ ಮೈದಾನದಲ್ಲಿ ಮಲಗಿದ್ದಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ಸ್ಪರ್ಶಕ್ಕೆಸಿಲುಕಿ ಸ್ಥಳದಲ್ಲಿಯೇ 4-5 ರಾಸುಮೃತಪಟ್ಟಿದ್ದವು. ರಾಸು ಕಳುವಾದ ಮೇಲೆ ಮತ್ತು ಏನಾದರೂ ಅವಘಡ ಸಂಭವಿಸಿ ಮೃತಪಟ್ಟಮೇಲೆ ರಾಸುಗಳಿಗೆ ಪರಿಹಾರ ನೀಡುವಂತೆಮತ್ತು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡುವ ಮಾಲಿಕರು ಮೊದಲೇ ಎಚ್ಚೆತ್ತುಕೊಂಡು ಅವರವರ ರಾಸುಗಳ ರಕ್ಷಣೆಗೆ ಮುಂದಾಗದಿರುವುದು ವಿಪರ್ಯಾಸ.

ಮಾಲಿಕರು ರಾಸುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಕಳುವಾದ ಬಳಿಕಅಥವಾ ಅವಘಡ ಸಂಭವಿಸಿದ ನಂತರದೂರು ನೀಡುವ ಮುನ್ನ ಜಾಗ್ರತೆವಹಿಸಬೇಕು. ಜಾನುವಾರುಗಳನ್ನು ರಸ್ತೆಗೆ ಬಿಡದೇ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. – ಬಸವರಾಜು, ಸರ್ಕಲ್‌ ಇನ್ಸ್‌ಪೆಕ್ಟರ್‌

ಪಟ್ಟಣದ ಮುಖ್ಯರಸ್ತೆಗಳಲ್ಲೇ ಬಿಡಾಡಿ ದನಗಳು ಸಂಚರಿಸುತ್ತಿವೆ. ರಾತ್ರಿಯಿಡೀ ರಸ್ತೆಗಳಲ್ಲಿ ಜಾನುವಾರುಗಳು ನಿಲ್ಲುವುದರಿಂದ ಸಂಚರಿಸುವ ಸವಾರರಿಗೆತೊಂದರೆ ಆಗಲಿದೆ. ಕೂಡಲೇ ಮಾಲಿಕರು, ಜಾನುವಾರುಗಳನ್ನು ರಸ್ತೆಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು.– ಪ್ರದೀಪ್‌, ಸ್ಥಳೀಯ

 

-ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.