ಬಿಜೆಪಿಯವರು ಕೂಲಿ ಕಾರ್ಮಿಕರ ವಿರೋಧಿಗಳು: 2 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಸಿದ್ದು

Team Udayavani, Feb 19, 2021, 7:37 PM IST

siddaramiha

ಭೇರ್ಯ: ಎರಡು ವರ್ಷದಲ್ಲಿ ನನ್ನದೇ ಸರ್ಕಾರ ಬರುತ್ತದೆ. ಅಂದು ಬಡವರಿಗೆ ಅನ್ನಭಾಗ್ಯ ಯೋಜನೆ ಮೂಲಕ 10 ಕೆಜಿ. ಅಕ್ಕಿಯನ್ನು ಉಚಿತವಾಗಿ ಕೋಡುತ್ತೇನೆ,  ನನ್ನ ಮೇಲೆ ವಿಶ್ವಾಸವಿಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು ಜಿಲ್ಲೆ, ಕೆ.ಆರ್. ನಗರ ತಾಲೂಕು, ಗಂಧನಹಳ್ಳಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.

ನಾನು  ಅನ್ನಭಾಗ್ಯ ಯೋಜನೆ‌  ಮೂಲಕ ಬಡವರಿಗೆ 7 ಕೆಜಿ.ಅಕ್ಕಿ ಜಾರಿ ಮಾಡಿದ್ದನ್ನು  ಈಗಿನ ಬಿಜೆಪಿ ಸರ್ಕಾರ 5 ಕೆಜಿ ಕಡಿತ ಮಾಡಿದ್ದು, ಮುಂದಿನ‌ ದಿನಗಳಲ್ಲಿ 3 ಕೆಜಿ ಮಾಡುವ ಹುನ್ನಾರ ನಡೆಯತ್ತಿದೆ. ಇದನ್ನು ಖಂಡಿಸುತ್ತೇನೆ ಎಂದ ಅವರು ಹಾಗೆ ಏನಾದರೂ ಮಾಡಿದರೆ ರಾಜ್ಯದ ಜನತೆಯೊಂದಿಗೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟ ಬಿಜೆಪಿ ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ಕೊಡಲು ಹಿಂದೇಟು ಹಾಕುತ್ತಿದೆ, ಈಗಿರುವ ಆಹಾರ ಮಂತ್ರಿ ಟಿ.ವಿ., ಪ್ರೀಡ್ಜ್, ಬೈಕ್ ಇದ್ದರೆ ಬಿಪಿಎಲ್ ಕಾರ್ಡ್ ರದ್ದು ಮಾಡುತ್ಥೆನೆ ಎಂದಿದ್ದಾರೆ, ಆ ಮಂತ್ರಿಗೆ ತಲೆ‌ಕೆಟ್ಟಿದೆ.  ಇವರು ಬಡವರ ಹಾಗೂ ಕೂಲಿ ಕಾರ್ಮಿಕರ ವಿರೋಧಿಗಳು ಎಂದು ಯಡಿಯೂರಪ್ಪ ಸರ್ಕಾರ ವಿರುದ್ದ  ವಾಗ್ದಾಳಿ ನಡೆಸಿದರು.

ನಾನಾಗಲಿ ಅಥವಾ ಯಡಿಯೂರಪ್ಪ ಆಗಲಿ ನಮ್ಮ ಮನೆಗಳಿಂದ ಅಕ್ಕಿ‌ಕೊಡಲ್ಲ, ಸರ್ಕಾರದ ಹಣದಿಂದ ಕೊಡುತ್ತೇವೆ.  ಯಾಕ್ರೀ ಅಕ್ಕಿ ಕಡಿಮೆ ಮಾಡಿದ್ದಿರಿ ಎಂದರೆ ಕೋವಿಡ್  ಎನ್ನುತ್ತಾರೆ. ಆದರೆ ಕರ್ನಾಟಕ ರಾಜ್ಯದ ಬಜೆಟ್ 2.37 ಲಕ್ಷ ಕೋಟಿ, ಬಡವರ ಅಕ್ಕಿಗೆ ಖರ್ಚಾಗುವುದು ಬರಿ 5600 ಕೋಟಿ ಎಂದ ಸಿದ್ದರಾಮಯ್ಯನವರು ಕೇವಲ ಇನ್ನೂ ಎರಡು ವರ್ಷ ಕಾಯಿರಿ ಮತ್ತೆ ನಮ್ಮ ಸರ್ಕಾರ ಬರುತ್ತದೆ ನಾನೇ ಕೋಡುತ್ತೇನೆ ಎಂದು ಹೇಳಿದರು.

ಸಂಗೋಳ್ಳಿ ರಾಯಣ್ಣ ಹಾಗೂ ಕನಕದಾಸರು ಇಂದಿನ ಯುವ ಪೀಳಿಗೆಗೆ  ಮಾರ್ಗದರ್ಶಕರು, ಯುವಕರು ಮಹಾನ್ ವ್ಯಕ್ತಿಗಳ ತತ್ವ ಸಿದ್ದಾಂತಗಳನ್ನು ಪಾಲಿಸುವಂತೆ ಕರೆ ನೀಡಿದ ಸಿದ್ದರಾಮಯ್ಯ ನಾನು ಮುಖ್ಯ ಮಂತ್ರಿಯಾಗಿದ್ದಾಗ ಸಂಗೋಳ್ಳಿ ರಾಯಣ್ಣ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿಗಾಗಿ 260 ಕೋಟಿ ಹಣವನ್ನು ಸಹ ಇಟ್ಟಿದ್ದೆ. ನಮ್ಮ ಸರ್ಕಾರ ಹೋದ‌ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿಲ್ಲ, ಮುಂದಿನ ದಿನದಗಳಲ್ಲಿ  ಸಂಗೋಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ನಡೆಯಲಿ. ಇದಕ್ಕಾಗಿ ಬಿಜೆಪಿ  ಸರ್ಕಾರದಲ್ಲಿ ನಮ್ಮ ಕುರುಬ ಸಮಾಜದ ನಾಲ್ವರು ಮಂತ್ರಿಗಳು ಇದ್ದಾರೆ, ಈ ಬಗ್ಗೆ ಮುಖ್ಯ ಮಂತ್ರಿಗಳ ಜತೆಯಲ್ಲಿ ಚರ್ಚಿಸಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿಸಿ ಎಂದು ವೇದಿಕೆಯಲ್ಲಿದ್ದ ತೋಟಗಾರಿಕೆ ಸಚಿವ ಆರ್.ಶಂಕರ್ ಗೆ ಹೇಳಿದರು.

ಗಂಧನಹಳ್ಳಿ: ಇನ್ನೂ ಗಂಧನಹಳ್ಳಿ ಗ್ರಾಮ ನಾನು ಲಾಯರ್ ಆಗಿದ್ದಾಗನಿಂದಲೂ ಪರಿಚಯ. ಹಾಗಾಗಿ ಗಂಧನಹಳ್ಳಿ ಗ್ರಾಮದ ಜನರು ನನ್ನನ್ನು ಕಂಡರೆ ಬಹಳ ಪ್ರೀತಿ. ನನಗೂ ಸಹ ಈ ಗ್ರಾಮದ ಬಗ್ಗೆ ಅಪಾರವಾದ ಪ್ರೀತಿ ವಿಶ್ವಾಸ ಇದೆ,  ಗಂಧನಹಳ್ಳಿ ಗ್ರಾಮದಲ್ಲಿ ಇನ್ನು ಮೂಲಭೂತ ಸೌಕರ್ಯಗಳನ್ನೇ ಮಾಡಿಲ್ಲ,  ಕುಡಿಯುವ ನೀರಿನ ಘಟಕವನ್ನು ಕೇಳಿದ್ದೀರಿ, ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನಾನ ಅನುದಾನದ ಮೂಲಕ ಮಾಡಿಸುತ್ತೇನೆ ಎಂದು ಹೇಳಿದ ಅವರು ನಾನೇ ಗಂಧನಹಳ್ಳಿ ಗ್ರಾಮದ ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಪ್ರೌಢಶಾಲೆ ಕೊಟ್ಟಿದ್ದು, ಇವಾಗ ಹಾಸ್ಟಲ್ ಕೇಳಿದ್ದರಿ ಆದರೆ ಹಾಸ್ಟಲ್ ಬೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನೇ ಕೊಡುತ್ತೇನೆ, ಕಪ್ಪಡಿ ಸೇತುವೆ  ಎಲ್ಲವನ್ನು ಮಾಡುತ್ತೇನೆ. ಇನ್ನು ಎರಡು ವರ್ಷ ಕಾಯಬೇಕೆಂದರು.

ಎರಡು ವರ್ಷದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇನೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿ.ಮಂಚನಹಳ್ಳಿ ಮಹದೇವ್ ಮಗಳು ಐಶ್ವರ್ಯಳಿಗೆ ಟಿಕೇಟ್ ತಪ್ಪಿಸಿ ಡಿ.ರವಿ ಶಂಕರ್ ಗೆ ನೀಡಿದೆ. ಪಾಪ ಅಲ್ಪ ಮತದಲ್ಲಿ ಸೋತ, ಈ ಬಾರಿ ಹಾಗೇ ಹಾಗಬಾರದು.  ಮತ್ತೇ ಡಿ.ರವಿಶಂಕರ್ ಗೆ ಟಿಕೇಟ್ ನೀಡುತ್ತೇನೆ. ಅಧಿಕ‌ ಮತಗಳಿಂದ ಗೆಲ್ಲಿಸುವ ಜವಬ್ದಾರಿ ನಿಮ್ಮದು ಎಂದ ಸಿದ್ದರಾಮಯ್ಯನವರರು. ಮುಂಬರುವ  ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಎಂದು ವೇದಿಕೆಯಲ್ಲಿ ಘೋಷಣೆ ಮಾಡಿದರು.

ನಂತರ ತೋಟಗಾರಿಕೆ ಸಚಿವ ಆರ್.ಶಂಕರ್ ಹಾಗೂ  ಮಾಜಿ ಸಚಿವರಾದ ಸಿ.ಹೆಚ್.ವಿಜಯ್ ಶಂಕರ್, ಹೆಚ್.ಎಂ.ರೇವಣ್ಣ  ಮಾತನಾಡಿದರು. ಗಂಧನಹಳ್ಳಿ ಗ್ರಾಮದ ಯಜಮಾನರುಗಳು ಎಲ್ಲರಿಗೂ ಆತ್ಮೀಯವಾಗಿ ಶಾಲು ಹಾರ ಹಾಕಿ ಅಭಿನಂದಿಸಿದರು.

ಟಾಪ್ ನ್ಯೂಸ್

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.