ಯಶವಂತಪುರ ಕ್ಷೇತ್ರದ ಮಹಿಳೆಯರಿಂದ ಚಾಮುಂಡೇಶ್ವರಿ ಪರಾಯಣ
Team Udayavani, Apr 7, 2022, 11:21 AM IST
ಮೈಸೂರು: ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶ್ರೀ ಚಾಮುಂಡೇಶ್ವರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್‌ನ ಶ್ರೀದೇವಿ ಬಳಗದ ಮಹಿಳೆಯರು ಮೈಸೂರಿನ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಶ್ರೀದೇವಿ ಪರಾಯಣ ಮಾಡಿದರು.
ಕಳೆದ ಮೂರು ತಿಂಗಳಿಂದ ನಮ್ಮ ತಂಡ ಸೌಂದರ್ಯ ಲಹರಿ ಸಂಗೀತಾಭ್ಯಾಸ ಮಾಡಿದೆ. ಅಂತಿಮವಾಗಿ ತಾಯಿ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪರಾಯಣ ಮಾಡಲು ನಮ್ಮ ಶಾಸಕರು ಹಾಗೂ ಸಹಕಾರ ಸಚಿವರು ಅವಕಾಶ ಮಾಡಿಸಿಕೊಟ್ಟರು ಎಂದು ಮಹಿಳೆಯರು ಖುಷಿಪಟ್ಟರು.
ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್, ಶ್ರೀಚಾಮುಂಡೇಶ್ಚರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್‌ನ ಯಶಸ್ವಿನಿ ಮತ್ತು ತಂಡದವರು ಉಪಸ್ಥಿತರಿದ್ದರು.