
ಬಾಲಕ, ವೃದ್ಧೆಯನ್ನು ಬಲಿ ಪಡೆದ ನರಭಕ್ಷಕ ಚಿರತೆ ಸೆರೆ
Team Udayavani, Jan 26, 2023, 10:21 AM IST

ಮೈಸೂರು: ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿಯಲ್ಲಿ ಇತ್ತೀಚೆಗೆ ಬಾಲಕ ಮತ್ತು ವೃದ್ಧೆಯನ್ನು ಬಲಿ ಪಡೆದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಬಲಿ ಪಡೆದ ಪ್ರದೇಶಗಳಲ್ಲಿ ಸುಮಾರು 19 ಬೋನ್ ಗಳನ್ನು ಇರಿಸಲಾಗಿತ್ತು. ಜತೆಗೆ ಇಪತ್ತಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮೆರಾ ಬಳಸಿ ಚಿರತೆ ಅಡಗು ತಾಣ ಪತ್ತೆ ಹಚ್ವಿದ್ದ ಇಲಾಖೆ, ಆ ಸ್ಥಳದಲ್ಲಿ ತುಮಕೂರಿನಿಂದ ತರಿಸಿದ್ದ ದೊಡ್ಡ ಬೋನ್ ಅಳವಡಿಸಲಾಗಿತ್ತು. ಬುಧವಾರ ರಾತ್ರಿ ಬೋನ್ ನಲ್ಲಿ ಹೊರಳಹಳ್ಳಿ ಬಳಿ ಚಿರತೆ ಸೆರೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜ.20 ರಂದು ಕನ್ನಾಯಕನಹಳ್ಳಿಯಲ್ಲಿ ವೃದ್ಧೆಯನ್ನು ಬಲಿ ಪಡೆದಿದ್ದ ಚಿರತೆ ಮರುದಿನ ಸಂಜೆ ಹೊರಳಹಳ್ಳಿ ಬಳಿ ಬಾಲಕನ ಮೇಲೆ ದಾಳಿ ಮಾಡಿ ಕೊಂದಿದ್ದಲ್ಲದೇ, ಅರ್ಧ ದೇಹವನ್ನು ತಿಂದಿತ್ತು. ಘಟನೆಯನ್ನು ಗಂಭಿರವಾಗಿ ಪರಿಗಣಿಸಿದ್ದ ಸರ್ಕಾರ ಚಿರತೆ ಕಂಡಲ್ಲಿ ಗುಂಡಿಕ್ಕಿ ಸಾಯಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ 22 ಪ್ರಯಾಣಿಕರಿದ್ದ ಬಸ್

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

ಇಹಲೋಕ ತ್ಯಜಿಸಿದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ