ಬೆಳೆ ಸಮೀಕ್ಷೆ ನಿರ್ಲಕ್ಷಿಸಿದ ಅಧಿಕಾರಿಗಳ ಚಳಿ ಬಿಡಿಸಿದ ಸಚಿವ


Team Udayavani, Sep 9, 2020, 11:59 AM IST

ಬೆಳೆ ಸಮೀಕ್ಷೆ ನಿರ್ಲಕ್ಷಿಸಿದ ಅಧಿಕಾರಿಗಳ ಚಳಿ ಬಿಡಿಸಿದ ಸಚಿವ

ಮೈಸೂರು: ಬೆಳೆ ಸಮೀಕ್ಷೆ ಕಾರ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ತೋರದೆ ನಿರ್ಲಕ್ಷ್ಯ ವಹಿಸಿದ ಐವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಶಿಸ್ತುಕ್ರಮಕ್ಕೆ ಸೂಚಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಮೈಸೂರು ವಿಭಾಗ ಮಟ್ಟದ (8 ಜಿಲ್ಲೆ ಒಳಗೊಂಡಂತೆ) ಪ್ರಗತಿ ಪರಿಶೀಲನಾ ಮತ್ತು ಬೆಳೆ ಸಮೀಕ್ಷೆ ಪ್ರಗತಿ ಕುರಿತು ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಕೃಷಿ ಇಲಾಖೆಯ ಪ್ರಗತಿಪರಿಶೀಲನೆ ಸಭೆ ನಡೆದಿದ್ದು, ಬೆಳೆ ಹಾನಿ, ಬಿತ್ತನೆ ಕಾರ್ಯ, ರಸಗೊಬ್ಬರ ಪೂರೈಕೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರವಾಹದಿಂದಾಗಿ ಬೆಳೆ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಸರ್ವೆ ನಡೆಸುವ ಕಾರ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸದೆ ನಿರ್ಲಕ್ಷ್ಯವಿಳಂಬಕ್ಕೆಕಾರಣವಾಗಿರುವ ಮೂರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರರು, ಇಬ್ಬರು ಸಹಾಯಕ ನಿರ್ದೇಶಕರನ್ನು ಅಮಾನತುಪಡಿಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.

ಶಿಸ್ತುಕ್ರಮ: ಪ್ರವಾಹ ಅಥವಾ ಬರ ಉಂಟಾದಾಗ ಕೃಷಿ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ವರದಿ ಕೊಡುತ್ತಿದ್ದರು. ಆದರೆ, ಈಗ ಸರ್ಕಾರವೇ ನಿಮ್ಮಜಮೀನು-ನಿಮ್ಮ ಸಮೀಕ್ಷೆ ಎನ್ನುವಂತೆ ರೈತರೇ ಬೆಳೆ ಹಾನಿಗೀಡಾದ ಬಗ್ಗೆ ಫೋಟೋ ತೆಗೆದು ಅಪ್‌ಲೋಡ್‌ ಮಾಡುವಂತೆ ಅವಕಾಶ ಕೊಡಲಾಗಿತ್ತು. ಅದರಂತೆ, ಅಧಿಕಾರಿಗಳು ಕ್ಷೇತ್ರದಲ್ಲಿದ್ದುಕೊಂಡು ರೈತರಿಗೆ ಅಗತ್ಯ ಮಾಹಿತಿ ಕೊಟ್ಟು ಸರ್ವೆ ಕಾರ್ಯ ಮಾಡಿಸಬೇಕಾಗಿತ್ತಾದರೂ ನಿರೀಕ್ಷೆಯಂತೆ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ತಮಜರುಗಿಸಲಾಗುವುದು ಎಂದು ಹೇಳಿದರು.

ಪ್ರಗತಿ ಕುಂಠಿತ: ಚಾಮಜನಗರ ಜಿಲ್ಲೆಯಲ್ಲಿ ಶೇ.19ರಷ್ಟು, ಮಂಡ್ಯ ಜಿಲ್ಲೆಯಲ್ಲಿ ಶೇ.18.73 ಹಾಸನ ಜಿಲ್ಲೆಯಲ್ಲಿ ಶೇ.35.94ರಷ್ಟು ಪ್ಲಾಟ್‌ಗಳ ಸಮೀಕ್ಷೆ ನಡೆಸಿ ಪ್ರಗತಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆ ಜಂಟಿ ಕೃಷಿ ನಿರ್ದೇಶಕರು, ಕಡೂರು, ಅರಸೀಕೆರೆ ತಾಲೂಕಿನ ಸಹಾಯಕ ನಿರ್ದೇಶಕರನ್ನು ಅಮಾನತ್ತಿನಲ್ಲಿರಿಸಿ ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಾಡಿಕೆಯಂತೆ 721 ಮಿ.ಮೀ ಮಳೆಯಾಗಬೇಕಿತ್ತಾದರೂ 774 ಮಿ.ಮೀ.ಯಾಗಿ ನಿರೀಕ್ಷೆಗಿಂತ 8ರಷ್ಟು ಜಾಸ್ತಿಯಾಗಿದೆ. 73 ಲಕ್ಷ ಹೆಕ್ಟೇರ್‌ ನಲ್ಲಿ 74.2 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 3.85 ಲಕ್ಷ ಬಿತ್ತನೆ ಬೀಜ ವಿತರಿಸಿದ್ದರೆ, 39 ಲಕ್ಷ ಬಿತ್ತನೆ ಬೀಜ ದಾಸ್ತಾನು ಇದೆ. 22.10 ಮೆಟ್ರಿಕ್‌ ಟನ್‌ ರಸಗೊಬ್ಬರವಿತರಿಸಿದ್ದರೆ, 9.51 ಮೆಟ್ರಿಕ್‌ ಟನ್‌ ದಾಸ್ತಾನು ಇದೆ ಎಂದರು.

ಬೆಳೆ ಪರಿಹಾರ: ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ 52.49 ಲಕ್ಷ ರೈತರಿಗೆ 481.5 ಕೋಟಿ ರೂ., ಸಿಎಂ ಕಿಸಾನ್‌ ಬಿಮಾ ಯೋಜನೆಯಡಿ 50.52 ಲಕ್ಷ ರೈತರಿಗೆ ಬೆಳೆ ಪರಿಹಾರ ಕೊಡಲಾಗಿದೆ. ಪ್ರವಾಹದಿಂದಾಗಿ ಬೆಳೆ ಹಾನಗೀಡಾಗಿದ್ದು, ಕೃಷಿ ಇಲಾಖೆಯಿಂದ 500 ಕೋಟಿ ರೂ.ನಷ್ಟು ನಷ್ಟವಾಗಿರುವ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಪ್ರೋತ್ಸಾಹಧನ: ಸೆಪ್ಟೆಂಬರ್‌ 23ವರೆಗೆ ಬೆಳೆ ನಷ್ಟದ ಸಮೀಕ್ಷೆ ಕಾರ್ಯ ಮುಗಿಸಬೇಕು. ಒಂದು ವೇಳೆ ರೈತನಿಗೆ ಸಮೀಕ್ಷೆ ಮಾಡಲು ಸಾಧ್ಯವಾಗದಿದ್ದರೆ ಅಂತಹವರು ಬೇರೊಬ್ಬರಿಗೆ ಸಹಿ ಮಾಡಿ ಸಮೀಕ್ಷೆ ಕಾರ್ಯ ನಡೆಸಿ ಅಪ್‌ಲೋಡ್‌ ಮಾಡಬಹುದು. ಒಂದೊಂದು ಫೋಟೋ ಅಪ್‌ಲೋಡ್‌ ಮಾಡಿದರೆ ಅವರಿಗೆ ಫೋಟೋಗೆ ಹತ್ತು ರೂ.ನಂತೆ ಪ್ರೋತ್ಸಾಹಧನ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

74 ಲಕ್ಷ ರೈತರಿಂದ ಬೆಳೆ ಸಮೀಕ್ಷೆ: 18 ದಿನಗಳಲ್ಲಿ 74 ಲಕ್ಷ ರೈತರು ತಮ್ಮ ಜಮೀನಿನ ಬೆಳೆ ಹಾನಿಗೀಡಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ಫೋಟೊ ಅಪ್‌ಲೋಡ್‌ಮಾಡಿದ್ದಾರೆ. ತಾಂತ್ರಿಕ ಸಮಸ್ಯೆ ಇದ್ದರೂ ರೈತರು ತಮ್ಮ ಬೆಳೆ ಸಮೀಕ್ಷೆ ನಡೆಸಿರುವುದು ಸಂತೋಷವಾಗಿದೆಎಂದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್‌ ಇತರರಿದ್ದರು

ರಸಗೊಬ್ಬರ ಅಕ್ರಮ ದಾಸ್ತಾನು ಮಾಡಿದರೆ ಕ್ರಮ : ರಾಜ್ಯಾದ್ಯಂತ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆ ಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ್ದು, ಇದುವರೆಗೆ 117ಅಂಗಡಿಗಳ ಮೇಲೆ ದಾಳಿ ನಡೆಸಿ ಪರವಾನಗಿ ರದ್ದುಪಡಿಸ ಲಾಗಿದೆ. ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಎಚ್ಚರಿಕೆ ನೀಡಿದರು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಯೂರಿಯಾ ವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದವರಅಂಗಡಿ ಮಾಲೀಕರ ಮೇಲೆ ದಾಳಿ ನಡೆಸಿದಾಗ ನೇರವಾಗಿ ಸಿಕ್ಕಿಬಿದ್ದು ಪೊಲೀಸರಿಗೆ ದೂರು ಕೊಡಲಾಗಿತ್ತಾದರೂ, ಪೊಲೀಸರು ಜಾಮೀನಿನ  ಮೇಲೆ ಬಿಟ್ಟು ಕಳುಹಿಸಿದ್ದಾರೆ. ರೈತರ ವಿಚಾರದಲ್ಲಿ ಈ ರೀತಿ ಮಾಡಬಾರದೆಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಅವರೊಡನೆ ಮಾತುಕತೆ ನಡೆಸುವೆ ಎಂದು ಹೇಳಿದರು.

Ad

ಟಾಪ್ ನ್ಯೂಸ್

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

Subhanshu’s contribution to India’s space future: A new chapter in space exploration

ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಶುಭಾಂಶು ಕೊಡುಗೆ: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ

Rain; ದ.ಕ. ,ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಜು.16 ರಂದು “ಆರೆಂಜ್‌ ಅಲರ್ಟ್‌’

Rain; ದ.ಕ. ,ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಜು.16 ರಂದು “ಆರೆಂಜ್‌ ಅಲರ್ಟ್‌’

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-hunsur

Hunsur: ಕೋಳಿ ಫಾರಂ ರೈಟರ್ ನಾಪತ್ತೆ; ದೂರು ದಾಖಲು

Ramalinga-reddy

ಹೊಸ ಬಸ್‌ಗಳಲ್ಲಿ ಧ್ವನಿ ಸ್ಪಂದನ ಉಪಕರಣ ಅಳವಡಿಕೆ: ಸಚಿವ ರಾಮಲಿಂಗಾ ರೆಡ್ಡಿ

Mysur-Dasara-Aane

ಮೈಸೂರು ದಸರೆಗೆ ಈ ಬಾರಿ ಶ್ರೀಕಂಠದತ್ತ ಒಡೆಯರ್‌ ಮೆರುಗು!

Hunsur: ಹುಲಿ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ, ಕೂಂಬಿಂಗ್‌ ಕಾರ್ಯಾಚರಣೆ ಚುರುಕು

Hunsur: ಹುಲಿ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ, ಕೂಂಬಿಂಗ್‌ ಕಾರ್ಯಾಚರಣೆ

Hunsur: ಸ್ಕೂಟರ್‌ ಹಳ್ಳಕ್ಕೆ ಬಿದ್ದು ಬಸ್ ಕಂಡಕ್ಟರ್ ಸಾವು

Hunsur: ಸ್ಕೂಟರ್‌ ಹಳ್ಳಕ್ಕೆ ಬಿದ್ದು ಬಸ್ ಕಂಡಕ್ಟರ್ ಸಾವು

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

12-holehonnur

Holehonnuru: ಹಾವು ಕಚ್ಚಿ ಯುವಕ ಸಾ*ವು

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

11-hunsur

Hunsur: ಕೋಳಿ ಫಾರಂ ರೈಟರ್ ನಾಪತ್ತೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.