ಗಜಪಯಣಕ್ಕೆ ವೀರನಹೊಸಳ್ಳಿಯಲ್ಲಿ ನಾಳೆ ಚಾಲನೆ

ಕಾಡಿನಿಂದ ಮೈಸೂರಿಗೆ ಬರಲಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಪೂಜೆ ; ಅರಮನೆ ಆವರಣದಲ್ಲಿ ಶೆಡ್‌ ನಿರ್ಮಾಣ

Team Udayavani, Sep 12, 2021, 4:48 PM IST

ಗಜಪಯಣಕ್ಕೆ ವೀರನಹೊಸಳ್ಳಿಯಲ್ಲಿ ನಾಳೆ ಚಾಲನೆ

ಮೈಸೂರು: ದಸರಾ ಮಹೋತ್ಸವಕ್ಕೆ ಮುನ್ನುಡಿ ಎಂಬಂತೆ ಆರಂಭವಾಗುವ ಗಜ ಪಯಣ ಸೆ.13ರಂದು (ನಾಳೆ) ನಡೆಯಲಿದ್ದು, ಅಂದು
ಬೆಳಗ್ಗೆ 9.30ಕ್ಕೆ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್‌ ಬಳಿ ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸುವ
ಮೂಲಕ ಚಾಲನೆ ನೀಡಲಾಗುತ್ತದೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ 25ದಿನಗಳ ಬಾಕಿ ಇದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಗರಕ್ಕೆ ಆಗಮಿಸು ತ್ತಿರುವ ಗಜಪಡೆಗೆ ನಾಳೆ ವೀರನಹೊಸಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರುವ ಮೂಲಕ ಕರೆತರಲಾಗುತ್ತಿದ್ದು, ಅರಣ್ಯ ಇಲಾಖೆ ಸಕಲ ಸಿದ್ಧತೆಗಳನ್ನು ನಡೆಸಿದೆ.ಈ ಬಾರಿಯ ನವರಾತ್ರಿ ಆರಂಭಕ್ಕೆ 25 ದಿನಗಳು ಮಾತ್ರ ಬಾಕಿ ಇದ್ದು, ಜಂಬೂಸವಾರಿಗೆ 34 ದಿನವಿದೆ. ದಸರಾ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ, ತಾಲೀಮು ನಡೆಸುವುದು mಅನಿವಾರ್ಯವಾಗಿರುವುದರಿಂದ, ಸೆ.13ರಂದೇ ಎಲ್ಲಾ ಆನೆಗಳನ್ನು ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರತಿ ವರ್ಷ ಜಂಬೂಸವಾರಿಗೆ 50 ರಿಂದ 60 ದಿನ ಮುನ್ನವೇ ವಿವಿಧ ಶಿಬಿರಗಳಿಂದ ಎರಡು ತಂಡದಂತೆ ಆನೆಗಳನ್ನುಕರೆತರುವ ವಾಡಿಕೆ ಇತ್ತು.
ಆದರೆ ಕಳೆದೊಂದು ವರ್ಷದಿಂದ ಕೊರೊನಾ ಸೊಂಕುಕಬಂಧಬಾಹುಚಾಚಿರುವಹಿನ್ನೆಲೆಕಳೆದ ವರ್ಷದಂತೆಈ ಬಾರಿಯೂಅರಮನೆಆವರಣಕ್ಕೆ
ಸೀಮಿತವಾದಂತೆ ಸರಳವಾಗಿ ನವರಾತ್ರಿ ಉತ್ಸವ ಹಾಗೂ ಜಂಬೂ ಸವಾರಿ ನಡೆಸಲು ತೀರ್ಮಾನಿಸಿರುವುದರಿಂದ 8 ಆನೆಗಳನ್ನಷ್ಟೇ ದಸರಾ ಉತ್ಸವಕ್ಕೂ ಕೆಲವೇ ದಿನ ಇರುವಾಗ ಕರೆಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ:ಈ ಕುಟುಂಬದ 29ನೇ ಜಾನುವಾರೂ ನಿಗೂಢ ಸಾವು

ಗಜ ಪಯಣದ ನಂತರ ಅದೇ ದಿನ ಮೈಸೂರಿನ ಅರಣ್ಯ ಭವನಕ್ಕೆ ಬರುವ ಆನೆಗಳು ಸೆ.13, 14 ಹಾಗೂ¤ 15ರಂದು 3 ದಿನಗಳ ಕಾಲ ಅರಣ್ಯ ಭವನದಲ್ಲಿ ಉಳಿದುಕೊಳ್ಳಲಿವೆ. ಬಳಿಕ ಮಾರನೆಯ ದಿನ (ಸೆ.16) ಅರಣ್ಯ ಭವನದಿಂದ ಕಾಲ್ನಡಿಗೆಯಲ್ಲಿ ಎಂಟೂ ಆನೆಗಳು ಬೆಳಗ್ಗೆ 8.30ರ ಹೊತ್ತಿಗೆ ಅರಮನೆ ಸೇರಲಿವೆ. ನಂತರ ಸಂಪ್ರದಾಯದಂತೆ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಲಾಗುತ್ತದೆ.

ಆನೆ ಶೆಡ್‌ ನಿರ್ಮಾಣ: ಆರಮನೆ ಪ್ರವೇಶಿಸುವ ಆನೆಗಳು ಮತ್ತು ಅವುಗಳ ಮಾವುತ ಹಾಗೂ ಕಾವಾಡಿಗಳಿಗೆ ಉಳಿದುಕೊಳ್ಳಲು ಅನುಕೂಲ ವಾಂವಂತೆ ಅರಮನೆ ಅಂಗಳದಲ್ಲಿ ಅಂಬಾರಿ ಆನೆ ಸೇರಿದಂತೆ 3 ಆನೆಗಳಿಗೆ ಶೆಡ್‌ ಮತ್ತು ಮಾವುತ, ಕಾವಾಡಿಗಳಿಗೆ 20ಕ್ಕೂ ಹೆಚ್ಚು ಶೆಡ್‌ ನಿರ್ಮಾಣ ಮಾಡಲಾಗುತ್ತಿದೆ.

ಕೋವಿಡ್‌ ಹಿನ್ನೆಲೆ ಈ ಬಾರಿಯೂ ಮಾವುತ ಮತ್ತು ಕಾವಾಡಿಗಳಷ್ಟೇ ಬಲಿದ್ದು, ಅವರ ಕುಟುಂಬ ಸದಸ್ಯರು ಬರುತ್ತಿಲ್ಲ. ಇವರಿಗೆ ಅಡುಗೆ ಮಾಡಿ ಕೊಡಲು ಸಹಾಯಕರು, ಸ್ವತ್ಛತಾ ಸಿಬ್ಬಂದಿ ಸೇರಿ 20 ಮಂದಿ ಮಾತ್ರ ಬರಲಿದ್ದಾರೆ ಎಂದು ಡಿಸಿಎಫ್ ಡಾ.ಕರಿಕಾಳನ್‌ ತಿಳಿಸಿದ್ದಾರೆ. ವೀರನ ಹೊಸಳ್ಳಿಯತ್ತ ಆನೆಗಳ ಪಯಣ: ನಾಳೆ ವೀರನಹೊಸಳ್ಳಿ ಗೆಟ್‌ ಬಳಿ ನಡೆಯುವ ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು 4 ಆನೆ ಶಿಬಿರಗಳಿಂದ 8 ಆನೆಗಳು ಶನಿವಾರ ವೀರನಹೊಸಳ್ಳಿಯತ್ತ ಪ್ರಯಾಣ ಬೆಳೆಸಿವೆ. ಎಲ್ಲಾ ಆನೆಗಳಿಗೂ ಆಯಾಯ ಶಿಬಿರಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮಾವುತ ಮತ್ತು ಕಾವಾಡಿಗರೊಂದಿಗೆ ಆನೆಗಳನ್ನು ಬೀಳ್ಕೊಟ್ಟರು.

ಜಂಬೂಸವಾರಿಯ ಆನೆಗಳಿವು
ಈ ಬಾರಿಯ ದಸರಾಕ್ಕೆ 5 ಗಂಡಾನೆ, 3 ಹೆಣ್ಣಾನೆ ಸೇರಿದಂತೆ ಒಟ್ಟು 8 ಆನೆಗಳನ್ನುಕರೆ ತರಲಾಗುತ್ತಿದ್ದು, ಮತ್ತಿಗೋಡು ಆನೆ ಶಿಬಿರದಅಭಿಮನ್ಯು (56), ಗೋಪಾಲಸ್ವಾಮಿ (38), ದುಬಾರೆಕ್ಯಾಂಪ್‌ನಿಂದಕಾವೇರಿ(44), ವಿಕ್ರಮ(58), ಧನಂಜಯ(43), ರಾಂಪುರ ಕ್ಯಾಂಪ್‌ ನಲ್ಲಿರುವ ಲಕ್ಷಿ ¾à(20), ಚೈತ್ರ(48) ಹಾಗೂ ದೊಡ್ಡಹರವೆ ಆನೆ ಶಿಬಿರದ ಅಶ್ವತ್ಥಾಮ(34) ಆನೆಯನ್ನುಕರೆತರಲಾಗುತ್ತಿದೆ.

ಎಲ್ಲಾ ಆನೆಗಳು ಭಾನುವಾರದ ಹೊತ್ತಿಗೆ ವೀರನಹೊಸಳ್ಳಿ ಸೇರಲಿದ್ದು, ಸೋಮವಾರ ಗಜಪಯಣಕ್ಕೆ ಸ್ವಾಗತಕಾರ್ಯಕ್ರಮ ನಡೆಯಲಿದೆ. 8 ಆನೆಗಳೊಂದಿಗೆ ಮಾವುತ ಮತ್ತುಕಾವಾಡಿಗಳಷ್ಟೇ ಬರುವುದಕ್ಕೆ ಅವಕಾಶ ನೀಡಲಾಗಿದೆ. ಸೆ.16ರಂದು ಆನೆಗಳು ಅರಮನೆ ಪ್ರವೇಶಿಸಲಿದ್ದು, ಮಾವುತ ಮತ್ತು ಕಾವಾಡಿ ಸೇರಿದಂತೆ ಆನೆಗಳು ತಂಗಲು ಶೆಡ್‌ ನಿರ್ಮಾಣ ಮಾಡಲಾಗುತ್ತಿದೆ.
 -ಡಾ.ವಿ. ಕರಿಕಾಳನ್‌, ಡಿಸಿಎಫ್

– ಸತೀಶ್‌ ದೇಪುರ

ಟಾಪ್ ನ್ಯೂಸ್

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.