
ಧರ್ಮ ಮನೆಯಲ್ಲಿ ಆಚರಣೆಯಾಗಬೇಕು, ಅದನ್ನು ರಾಜಕಾರಣಕ್ಕೆ ತರಬಾರದು: ಧ್ರುವನಾರಾಯಣ್
Team Udayavani, Sep 18, 2021, 1:17 PM IST

ಮೈಸೂರು: ಧರ್ಮವನ್ನು ರಾಜಕಾರಣಕ್ಕೆ ತರಬಾರದು. ಅದು ನಮ್ಮ ಮನೆಯಲ್ಲಿ ಆಚರಣೆಯಾಗಬೇಕು. ಆದರೆ ಬಿಜೆಪಿಯವರು ಸದಾ ಇದನ್ನು ರಾಜಕೀಯವಾಗಿ ಬಳಸುತ್ತಾರೆ. ದೇಗಲು ತೆರವು ಮಾಡಿರುವುದು ಸರಿಯಲ್ಲ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬಹುದಾಗಿತ್ತು. ಆ ರೀತಿ ಪ್ರಯತ್ನ ಇಲ್ಲಿ ನಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಾಪ್ ಸಿಂಹರದ್ದು ಬಾಲಿಷ ಹೇಳಿಕೆ. ಹಿಂದೂ ಧರ್ಮವನ್ನು ನಾವು ಗುತ್ತಿಗೆ ಪಡೆದಿದ್ದೇವೆ ಎನ್ನುವ ಹಿನ್ನೆಲೆಯಲ್ಲಿ ಲಘುವಾಗಿ ಮಾತನಾಡಿದ್ದಾರೆ. ದೇವಾಲಯದ ಆದೇಶ ಕೊಟ್ಟಿರುವುದು ಸರ್ಕರದ ಸಿಎಸ್. ಅವರು ಏನೇ ಆದೇಶ ಹೊರಡಿಸಿದರು ಅದು ರಾಜ್ಯ ಸರ್ಕಾರದ ನಿಲುವು ಎಂದರು.
ಇದನ್ನೂ ಓದಿ:ಹಿಂದೂ ವಿರೋಧಿ ಸಿದ್ದರಾಮಯ್ಯ ದೇವಸ್ಥಾನದ ಬದಲು ಮಸೀದಿ ಬಗ್ಗೆ ಮಾತಾಡುತ್ತಾರೆ: ಅರುಣ್ ಸಿಂಗ್
ಸಿದ್ದರಾಮಯ್ಯ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ. ಹಿಂದೂ ಧರ್ಮ ನಿಮ್ಮ ಸ್ವತ್ತಲ್ಲ. ಧರ್ಮಾಧಾರಿತ ರಾಜಕಾರಣ ಮಾಡುವುದನ್ನು ಬಿಡಿ ಎಂದು ಆರ್. ಧ್ರುವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಮಾಡುವುದರಲ್ಲಿ ಬಿಜೆಪಿ ವಿಫಲವಾಗಿದೆ. ಸಿದ್ದರಾಮಯ್ಯರಿದ್ದಾಗ ಈ ರೀತಿ ಆದೇಶ ಮಾಡಿಲ್ಲ. ಸಿದ್ದರಾಮಯ್ಯ ಯಾವುದೇ ದೇಗುಲ ಒಡೆಸಿಲ್ಲ. ಧರ್ಮವನ್ನೇ ನಮ್ಮದು ಎನ್ನುವವರು ದೇವಸ್ಥಾನ ಒಡೆಸಿದ್ದಾರೆ. ಬಿಜೆಪಿಯವರಿಗೆ ಅನುಭವದ ಕೊರತೆಯಿದೆ. ಸರ್ಕಾರದ್ದೇ ಲೋಪ ಇದೆ ಸರ್ಕಾರ ಆದೇಶ ಕೊಟ್ಟಿದೆ. ಹೀಗಾಗಿ ತಹಶೀಲ್ದಾರ್ ಮೇಲೆ ಕ್ರಮ ಸರಿಯಲ್ಲ ಎಂದು ಆರ್ ಧ್ರುವನಾರಾಯಣ್ ಹೇಳಿದರು.
ಟಾಪ್ ನ್ಯೂಸ್
