ಶುಂಠಿ: ಲಾಭದ ನಿರೀಕ್ಷೆಯಲ್ಲಿ ರೈತ

1850 ಹೆಕ್ಟೇರ್‌ನಲ್ಲಿ ಶುಂಠಿ ಬಿತ್ತನೆ • ಈಗ, ಪ್ರತಿ ಕ್ವಿಂಟಾಲ್ಗೆ 5ರಿಂದ 6 ಸಾವಿರ ರೂ.

Team Udayavani, Jul 29, 2019, 10:02 AM IST

mysuru-tdy3

ಶುಂಠಿ ಮಾರಾಟ ಮಾಡಲು ಸಂಸ್ಕರಣೆ ಮಾಡಿ ಚೀಲದಲ್ಲಿ ತುಂಬಿಸಿ ಇಟ್ಟಿರುವುದು.

ಪಿರಿಯಾಪಟ್ಟಣ: ಅದೃಷ್ಟದ ಬೆಳೆ ಎಂದು ಕರೆಯಲ್ಪಡುವ ಶುಂಠಿ ಬೆಳೆ, ಈ ಬಾರಿ ತಾಲೂಕಿನಾದ್ಯಂತ ಹಿಂದೆಂದಿಗಿತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು ರೈತರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.

ಕಳೆದ ವರ್ಷ ಕೇರಳ, ನೆರೆಯ ಕೊಡಗು ಹಾಗೂ ರಾಜ್ಯದ ಗಡಿ ಭಾಗಗಳಲ್ಲಿ ಅತಿವೃಷ್ಟಿ ಯಿಂದಾಗಿ ರೈತರು ಬಿತ್ತಿದ ಶುಂಠಿ ಬೆಳೆ ಕೈಸೇರದೆ ರೈತರನ್ನು ಆತಂಕಕ್ಕೀಡು ಮಾಡಿತ್ತು. ಆದರೆ, ಈ ಬಾರಿ ಅವಧಿಗೂ ಮುಂಚೆ ಮುಂಗಾರು ಪ್ರಾರಂಭವಾಗಿ ತಾಲೂಕಿನಾ ದ್ಯಂತ ಈ ಬಾರಿ ಸುಮಾರು 1850 ಹೆಕ್ಟೇರ್‌ನಲ್ಲಿ ಶುಂಠಿ ಬಿತ್ತನೆ ಮಾಡಲಾಗಿದೆ.

ಬೆಳೆ ಹೆಚ್ಚಳದತ್ತ: ತಾಲೂಕಿನಲ್ಲಿ ಏಪ್ರಿಲ್ನಿಂದಲೇ ಉತ್ತಮ ಮಳೆ ಪ್ರಾರಂಭವಾಗಿದ್ದು, ರೈತರನ್ನು ಕೊಂಚ ಆತಂಕದಿಂದ ಪಾರು ಮಾಡಿದೆ. ಇನ್ನು ನೀರಾವರಿ ವ್ಯವಸ್ಥೆ ಹೊಂದಿರುವ ರೈತರು ಜನವರಿಯಿಂದಲೇ ಬಿತ್ತನೆ ಕೆಲಸ ಆರಂಭಿಸಿ ಈಗ ಆ ಬೆಳೆ ಕಟಾವಿಗೆ ಬಂದಿದೆ. ಸದ್ಯದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ (60 ಕೆ.ಜಿ ಮೂಟೆಗೆ) ಶುಂಠಿಗೆ 5 ಸಾವಿರದಿಂದ 6 ಸಾವಿರದ (ಹಳೆಯ ಶುಂಠಿಗೆ 10ರಿಂದ 12 ಸಾವಿರ) ವರೆಗೂ ದಾಪು ಗಾಲಿಟ್ಟಿದೆ. ಕೆಲವೇ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಶುಂಠಿ ಸಂಬಾರು ಪದಾರ್ಥಗಳಿಗೆ ಮಾತ್ರ ಸೀಮೀತವಾಗದೆ, ಸುಗಂಧ ವರ್ಧಕ ದ್ರವ್ಯಗಳ ತಯಾರಿಕೆ, ಔಷಧಿ, ಮಾತ್ರೆಗಳ ತಯಾರಿಕೆ ಹಾಗೂ ಇನ್ನಿತರ ಉದ್ದೇಶಗಳಿಗೆ ಬಳಸುತ್ತಿರು ವುದರಿಂದ ಬಹು ಬೇಡಿಕೆ ಬೆಳೆಯಾಗಿ ಮಾರ್ಪಟ್ಟಿದೆ. ಶುಂಠಿ ಉಪಯೋಗ ತಿಳಿದಿರುವ ಕೆಲವು ರೈತರು ತಮ್ಮ ಭೂಮಿಯಲ್ಲೇ ಇನ್ನು ಹೆಚ್ಚು ಕಾಲ ಶೇಖರಿಸಿಡಲು ಬಯಸಿದರೂ ರೋಗಭಾದೆ ಕಾರಣಕ್ಕೆ ಮಾರಾಟಕ್ಕೆ ಮುಂದಾಗುತ್ತಿದ್ದಾರೆ.

ಈ ಬಾರಿ ಅಧಿಕ ಲಾಭದ ನಿರೀಕ್ಷೆ: ಕಳೆದ 8 ವರ್ಷದಿಂದ ಶುಂಠಿ ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಈ ಬಾರಿ ಅದನ್ನು ಬಡ್ಡಿ ಸಮೇತ ವಸೂಲಿ ಮಾಡಲು ಉಸ್ತುಕನಾಗಿ ದ್ದಾನೆ. ಈಗಾಗಲೇ ಕಳೆದ ವರ್ಷದ ಹಳೆ ಶುಂಠಿಗೆ ಕ್ವಿಂಟಾಲ್ ಗೆ 10 ಸಾವಿರ ಹಾಗೂ ಈ ಬಾರಿಯ ಹೊಸ ಶುಂಠಿಗೆ 6 ಸಾವಿರ ನಿಗದಿಯಾಗಿದ್ದು, ಇದು ದಿನ ಕಳೆದಂತೆ ರೈತರಲ್ಲಿ ಇನ್ನು ಹೆಚ್ಚಿನ ಬೆಲೆ ಸಿಗುವ ವಿಶ್ವಾಸ ಮೂಡಿಸಿದೆ.

ಶುಂಠಿಬೆಳೆಗೆ ದೇಶದ ರಾಜಧಾನಿ ದೆಹಲಿ ಸೇರಿ ಉತ್ತರಪ್ರದೇಶ, ಗುಜರಾತ್‌, ಮಧ್ಯ ಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಹಾಗೂ ದುಬೈ, ಇರಾನ್‌ ಮತ್ತು ಇರಾಕ್‌ ದೇಶಗಳಲ್ಲೂ ಅಪಾರ ಬೇಡಿಕೆಯಿದೆ. ಈ ಪ್ರದೇಶಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪೂರೈಕೆ ಮಾಡಲು ಶುಂಠಿ ಸಿಗುತ್ತಿಲ್ಲ.

ಶುಂಠಿ ಬೆಳೆಗೆ ಅಧಿಕ ರೋಗ ಭಾದೆ: ಶುಂಠಿಬೆಳೆಗೆ ಹೆಚ್ಚಿನ ಕೀಟನಾಶಕ ಹಾಗೂ ಕ್ರಿಮಿನಾಶಕಗಳ ಅಗತ್ಯವಿದೆ. ಈಗಾಗಲೇ ತಾಲೂಕಿನಾದ್ಯಂತ ಹಲವು ಭಾಗದಲ್ಲಿ ಶುಂಠಿ ರೋಗಭಾದೆಗೆ ಸಿಲುಕಿ ಕೊಳೆತುಹೋಗಿದೆ. ಆದರೂ ಶುಂಠಿ ಬೆಳೆ ಈ ಬಾರಿ ಅತ್ಯಧಿಕ ಉತ್ಪಾದನೆ ಮತ್ತು ಗುಣಮಟ್ಟದಿಂದ ಕೂಡಿದ್ದು, ರೈತರನ್ನು ಉತ್ಸುಕರನ್ನಾಗಿ ಮಾಡಿದ್ದು ಉತ್ತಮ ದರದ ನಿರೀಕ್ಷೆಯಲ್ಲಿದ್ದಾರೆ.

ಶುಂಠಿಗೆ ಹೆಚ್ಚು ಬೇಡಿಕೆ ಇರುವುದನ್ನು ತಿಳಿದ ಕೆಲ ವ್ಯಾಪಾರಸ್ಥರು, ಬೆಲೆ ಹೆಚ್ಚಾಗು ವುದಿಲ್ಲ, ಕೂಡಲೇ ಮಾರಾಟ ಮಾಡಿ ಎಂದು ರೈತರನ್ನು ವ್ಯವಸ್ಥಿತವಾಗಿ ನಂಬಿಸಿ ಶುಂಠಿ ಖರೀದಿ ನಡೆಯುತ್ತಿದೆ. ಆದರೂ, ರೈತರು ಶುಂಠಿಗೆ ಈ ವರ್ಷ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.

ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ..

ಶುಂಠಿ ಬೆಳೆಗೆ ಸರ್ಕಾರದ ಬೆಂಬಲ ಬೆಲೆಯಾಗಲಿ, ನಿಗದಿತ ಮಾರುಕಟ್ಟೆ ವ್ಯವಸ್ಥೆಯಾಗಲಿ ಇಲ್ಲ. ಆದರೂ ನೆರೆ ರಾಜ್ಯಗಳಾದ ಕೇರಳ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ಸ್ಥಳೀಯ ಮಾರಾಟಗಾರರು ಇಲ್ಲಿಗೆ ಬಂದು ತಾತ್ಕಾಲಿಕ ಮಳಿಗೆಗಳನ್ನು ತೆರೆದು ಶುಂಠಿ ಖರೀದಿ ಮಾಡಿ ನೆರೆ ರಾಜ್ಯಗಳಿಗೆ ಸರಬರಾಜು ಮಾಡುತ್ತಾರೆ. ಯಾರಾದರೊಬ್ಬ ರೈತ ಶುಂಠಿಯನ್ನು ಬೆಳೆದಿದ್ದಾನೆ ಎಂದು ತಿಳಿದ ಕೂಡಲೇ ಸ್ಥಳೀಯ ದಲ್ಲಾಳಿಗಳು ಅಥವಾ ಮಧ್ಯವರ್ತಿಗಳು ಬೆಳೆಗಾರರನ್ನು ಸಂಪರ್ಕಿಸಿ ವ್ಯಾಪಾರ ಮಾಡಿ ಬೇರೆಯವರಿಗೆ ಅಧಿಕ ಬೆಲೆಗೆ ಕಮಿಷನ್‌ ಆಧಾರದ ಮೇಲೆ ಮಾರಾಟ ಮಾಡುವುದು ಕಂಡುಬರುತ್ತಿದೆ.
● ಪಿ.ಎನ್‌.ದೇವೇಗೌಡ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.