
ಗುಂಡ್ಲುಪೇಟೆ-ಮಠಗಳಿಂದ ಸಮಾಜಕ್ಕೆ ಸಾಕಷ್ಟು ಅನುಕೂಲ ; ಒಡೆಯರ್ ಹೇಳಿಕೆ
9ನೇ ಚಾಮರಾಜ ಒಡೆಯರ್ ಹೆಸರನ್ನು ಚಾಮರಾಜನಗರಕ್ಕೆ ಇಡಲಾಗಿದೆ
Team Udayavani, May 26, 2023, 3:45 PM IST

ಗುಂಡ್ಲುಪೇಟೆ: ಮಠಗಳಿಂದ ಸಮಾಜಕ್ಕೆ ಸಾಕಷ್ಟು ಅನುಕೂಲ ಆಗುತ್ತಿದೆ. ಇದನ್ನು ಮಠಾಧೀಶರು ಮುಂದುವರಿಸಿಕೊಂಡು ಹೋಗಬೇಕೆಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ತಾಲೂಕಿನ ಪಡುಗೂರು ಅಡವಿ ಮಠದ ಆವರಣದಲ್ಲಿ ಪಡುಗೂರು ಗ್ರಾಮಸ್ಥರು ಮತ್ತು ಮಠದ ಭಕ್ತರ ವತಿಯಿಂದ ನಡೆದ ಪಡುಗೂರು ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಪಡುಗೂರು ಶ್ರೀಗಳು ತಾಲೂಕಿನಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ನೀಡುತ್ತಿದ್ದು, ಇವರು ಇನ್ನಷ್ಟು ಸಾಧನೆ ಮಾಡಲಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರಲಿ ಎಂದು ಹಾರೈಸಿದರು.
ಆಗಾಗ ಬಂಡೀಪುರಕ್ಕೆ ಬರುತ್ತೇನೆ: ಗುಂಡ್ಲುಪೇಟೆ ತಾಲೂಕು ನನಗೆ ಹೃದಯಕ್ಕೆ ಹತ್ತಿರವಿರುವಂತದ್ದು, ವನ್ಯ ಪ್ರಾಣಿಗಳು ಮತ್ತು ಪರಿಸರದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಕಾರಣಕ್ಕೆ ನಾನು ಆಗಾಗ ಬಂಡೀಪುರಕ್ಕೆ ಬರುತ್ತೇನೆ. ಹಿಮವದ್ ಗೋಪಾಲ
ಸ್ವಾಮಿ ನಮ್ಮ ಕುಲದೇವರು. 9ನೇ ಚಾಮರಾಜ ಒಡೆಯರ್ ಹೆಸರನ್ನು ಚಾಮರಾಜನಗರಕ್ಕೆ ಇಡಲಾಗಿದೆ ಎಂದು ತಿಳಿಸಿದರು.
ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಮಾದರಿ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ಅಡವಿ ಮಠ ಈ ಭಾಗದ ಪ್ರಾಚೀನ ಮಠಗಳಲ್ಲಿ ಒಂದು. ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಮಠಕ್ಕೆ ವ್ಯವಸ್ಥಿತ ಚೌಕಟ್ಟು ತಂದು ಕೊಟ್ಟರು. ನಮ್ಮ ಹಿರಿಯ ಶ್ರೀ ರಾಜೇಂದ್ರಸ್ವಾಮೀಜಿ ಮತ್ತು ಶಿವಕುಮಾರ ಸ್ವಾಮೀಜಿಯಂತೆ ಶಿವಲಿಂಗೇಂದ್ರ ಸ್ವಾಮೀಜಿ
ಮತ್ತು ನನ್ನ ನಡುವಿನ ಬಾಂಧವ್ಯ ಇದೆ. ಸಾಮಾಜಿಕ ಕಾರ್ಯಗಳು, ಶೈಕ್ಷಣಿಕ ಸೇವೆ, ಆಧ್ಯಾತ್ಮಿಕ ಜೀವನದ ಜೊತೆಗೆ ಮಠದ ಆಡಳಿತ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಪಡುಗೂರು ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಗಣೇಶ್‌ಪ್ರಸಾದ್‌ಗೆ ಶ್ರೀಗಳ ಸಲಹೆ: ಮಾಜಿ ಸಚಿವ ದಿ. ಎಚ್.ಎಸ್.ಮಹದೇವಪ್ರಸಾದ್ ಕಾಳಜಿ ಜೊತೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ದೃಢ ನಿರ್ಧಾರದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಿಲ್ಲೆಯಲ್ಲಿ ಜಾರಿಯಾಯಿತು. ಆದ್ದರಿಂದ ಈ ಭಾಗದ ಬಹುದಿನದ ಬೇಡಿಕೆಯಂತೆ ನಲ್ಲೂರು ಅಮಾನಿಕೆರೆಯನ್ನು ತುಂಬಿಸುವ ಕೆಲಸ ಮಾಡಿ
ಎಂದು ನೂತನ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ಶ್ರೀಗಳು ಸಲಹೆ ನೀಡಿದರು. ಸಿದ್ಧಗಂಗಾ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್, ಹರವೆ ಸರ್ಪಭೂಷಣ ಸ್ವಾಮೀಜಿ, ಕುಂದೂರು ಮಠದ ಶರತ್ ಚಂದ್ರ ಮಹಾ ಸ್ವಾಮೀಜಿ, ಮರೆಯಾಲ ಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ, ಮುಡಿಗುಂಡ ಶ್ರೀ ಶ್ರೀಕಂಠ ಸ್ವಾಮೀಜಿ,
ಚಿಕ್ಕತಪ್ಪೂರು ಚನ್ನವೀರ ಸ್ವಾಮೀಜಿ, ಅರಕಲವಾಡಿ ಶ್ರೀ ಬಸವಣ್ಣ ಸ್ವಾಮೀಜಿ, ಚಾಮರಾಜನಗರ ಶ್ರೀ ಚನ್ನಬಸವ ಸ್ವಾಮೀಜಿ ಸೇರಿದಂತೆ ಮಠದ ಭಕ್ತ ವೃಂದ ಇತರರು ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Illicit ಸಂಬಂಧ; ವಿವಾಹಿತೆಗೆ ಬ್ಲಾಕ್ ಮೇಲ್: ಸುಬ್ರಹ್ಮಣ್ಯ ಗ್ರಾ.ಪಂ.ಮಾಜಿ ಸದಸ್ಯ ಅರೆಸ್ಟ್

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

Karwar; ರಾ.ಹೆ.66 ರ ಟನಲ್ ನಲ್ಲಿ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ದಿನವಿಡೀ ಪ್ರತಿಭಟನೆ

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?