ಜಿಟಿ ದೇವೇಗೌಡ ಇನ್ನೂ ಜೆಡಿಎಸ್ ನಲ್ಲೇ ಇದ್ದಾರೆ : ಹೆಚ್.ಡಿ.ದೇವೇಗೌಡ
Team Udayavani, Sep 9, 2021, 7:20 PM IST
ಮೈಸೂರು : ಶಾಸಕ ಜಿಟಿ ದೇವೇಗೌಡ ಇನ್ನೂ ಜೆಡಿಎಸ್ ನಲ್ಲೇ ಇದ್ದಾರೆ. ಅವರನ್ನ ಉಳಿಸಿಕೊಳ್ಳುವುದು ಮುಂದಿನ ವಿಚಾರ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಹೇಳಿದರು.
ಇಂದು ( ಸೆ.9) ನಗರದಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಸದ್ಯಕ್ಕೆ ಜಿಟಿ ದೇವೇಗೌಡ ಅವರು ಇನ್ನೂ ಜೆಡಿಎಸ್ ನಲ್ಲೇ ಇದ್ದಾರೆ. ಅವರು ಸಿದ್ದರಾಮಯ್ಯ, ಯಡಿಯೂರಪ್ಪ ಮನೆಗೂ ಹೋಗಿದ್ದಾರೆ. ಕ್ಷೇತ್ರದ ವಿಚಾರವಾಗಿ ಚರ್ಚಿಸಲು ಹೋಗಿದ್ದಾರೆ. ಅದಕ್ಕೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಎರಡು ವರ್ಷ ಆದಮೇಲೆ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ. ಕೆ ಎಸ್ ರಂಗಪ್ಪರೊಂದಿಗೆ ಪುಸ್ತಕ ಬಿಡುಗಡೆ ವಿಚಾರವಾಗಿ ಚರ್ಚೆ ಮಾಡಲು ಬಂದಿದ್ದೇನೆ. ಯಾರಿಂದ ಪುಸ್ತಕ ಬಿಡುಗಡೆ ಮಾಡಿಸಬೇಕು ಎಂಬುವುದರ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಮೈಸೂರು ಭೇಟಿಗೆ ಯಾವುದೇ ವಿಶೇಷತೆ ಇಲ್ಲ. ವೈಯಕ್ತಿಕ ಕಾರಣಕ್ಕಾಗಿ ಬಂದಿದ್ದೇನೆ ಅಷ್ಟೇ. ಬೇರೆ ಯಾವ ರಾಜಕೀಯ ವಿಚಾರ ಮಾತನಾಡುವುದಕ್ಕೂ ನಾನು ಬಂದಿಲ್ಲ ಎಂದರು.