ಒತ್ತುವರಿ ಜಮೀನು ತೆರುವಿಗೆ ಹೋದ ತಹಶೀಲ್ದಾರ್ ವಿರುದ್ದವೇ ತಿರುಗಿಬಿದ್ದ ರೈತ…
ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ಸಾದ ಅಧಿಕಾರಿಗಳು
Team Udayavani, Nov 19, 2022, 2:09 PM IST
ಹುಣಸೂರು: ಒತ್ತುವರಿ ಆಗಿದ್ದ ಸರ್ಕಾರಿ ಜಮೀನು ತೆರುವಿಗೆ ಹೋದ ತಹಶೀಲ್ದಾರ್ ವಿರುದ್ದ ರೈತ ತಿರುಗಿಬಿದ್ದ ಘಟನೆ ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದಲ್ಲಿ ನಡೆದಿದೆ. ಜೆಸಿಬಿ ಯಂತ್ರದ ಮುಂದೆ ಕುಳಿತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ರೈತನ ಪಟ್ಟಿಗೆ ಮಣಿದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಬಂದಿದ್ದಾರೆ.
ರತ್ನಪುರಿ ಗ್ರಾಮದ ಸರ್ವೆ ನಂ 1369ರ 1.33 ಗುಂಟೆ ಜಮೀನು ಸರ್ಕಾರಿ ಜಮೀನಾಗಿದೆ.ಸದರಿ ಜಮೀನನ್ನ ದೇಶಕ್ಕೆ ಸೇವೆ ಸಲ್ಲಿಸಿದ ಯೋಧರಿಗೆ ನೀಡುವ ಉದ್ದೇಶದಿಂದ ಮೀಸಲಿಡಲು ಮುಂದಾದ ಅಧಿಕಾರಿಗಳಿಗೆ ಒತ್ತುವರಿ ಬೆಳಕಿಗೆ ಬಂದಿದೆ.
ಒತ್ತುವರಿಯನ್ನ ತೆರವು ಮಾಡಿಸಲು ಮಾಡಿಸಲು ತಹಸೀಲ್ದಾರ್ ಅಶೋಕ್ ರವರು,ಸರ್ವೆಯರ್ ನಾಗೇಶ್,ರವೀಶ್, ವಿ.ಎ.ಗುರುಪ್ರಸಾದ್ ಆರ್.ಐ.ನಂದೀಶ್ ರವರು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಸಮೇತ ತೆರಳಿದಾಗ ರಾಮದಾಸಯ್ಯ ಎಂಬ ವ್ಯಕ್ತಿ ಅಡ್ಡಿಪಡಿಸಿದ್ದಾನೆ.
ಜೆಸಿಬಿ ಯಂತ್ರದ ಸಮೇತ ಹಾಜರಾದ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾನೆ. ನೋಟೀಸ್ ನೀಡದೆ ತೆರವು ಮಾಡಿಸುತ್ತಿರುವುದಾಗಿ ವಾಗ್ವಾದ ನಡೆಸಿದ್ದಾನೆ. ಸದರಿ ಜಾಗವನ್ನ ಒತ್ತುವರಿ ಮಾಡಿಕೊಂಡಿರುವುದಾಗಿ ತಹಸೀಲ್ದಾರ್ ನೋಟೀಸ್ ಜಾರಿ ಮಾಡಿದ್ದಾರೆ. ಒಟ್ಟಾರೆ ರೈತನ ಮೊಂಡುತನಕ್ಕೆ ಬೆದರಿದ ಅಧಿಕಾರಿಗಳು ಬರಿಗೈಲಿ ಹಿಂದಿರುಗಿದ್ದಾರೆ.
ಇದನ್ನೂ ಓದಿ :ಬ್ರಿಟಿಷ್ ಕಾಲದ ಸೇತುವೆಯನ್ನು ಕೆಡವಲು 27 ಗಂಟೆಗಳ ರೈಲುಗಳ ಮೆಗಾ ಬ್ಲಾಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು
ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?
ಸಬ್‌ರಿಜಿಸ್ಟ್ರಾರ್ ಕಚೇರಿಗಳು ಇನ್ನು ಸ್ಮಾರ್ಟ್
ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ