
ಹುಣಸೂರು ಎರಡು ಚೆಕ್‌ಪೋಸ್ಟ್ ಗಳಲ್ಲಿ 15.26 ಲಕ್ಷ ರೂ. ವಶ
Team Udayavani, Apr 2, 2023, 12:24 PM IST

ಹುಣಸೂರು: ಹುಣಸೂರು ತಾಲೂಕಿನ ಎರಡು ಚೆಕ್‌ಪೋಸ್ಟ್ಗಳಲ್ಲಿ ಒಟ್ಟು 15.26 ಲಕ್ಷರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ರುಚಿ ಬಿಂದಾಲ್ ತಿಳಿಸಿದ್ದಾರೆ.
ಹುಣಸೂರು-ಮಡಿಕೇರಿ ಹೆದ್ದಾರಿಯ ಚಿಲ್ಕುಂದ ಚೆಕ್ ಪೋಸ್ಟ್ನಲ್ಲಿ ಮಾ.೩೧ರ ಮದ್ಯ ರಾತ್ರಿ ಕೇರಳ ಮೂಲದವರಿಂದ ೮.೯೧ಲಕ್ಷರೂ, ಏ.1 ರ ಮದ್ಯಾಹ್ನ ಇದೇ ಚೆಕ್‌ಪೋಸ್ಟ್ನಲ್ಲಿ ಮೈಸೂರಿನ ಬೋಗಾದಿ ರಸ್ತೆಯ ಕೃಷ್ಣ ಪೌಲ್ಟಿçಗೆ ಸೇರಿದ 5.68 ಲಕ್ಷರೂ ಹಾಗೂ ಮಾ.೩೦ರಂದು ಹುಣಸೂರು-ವಿರರಾಜಪೇಟೆ ರಸ್ತೆಯ ಮುತ್ತುರಾಯನಹೊಸಳ್ಳಿ ಚೆಕ್‌ಪೋಸ್ಟ್ನಲ್ಲಿ 67ಸಾವಿರ ರೂ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 15.26 ಲಕ್ಷರೂ.ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ತಿಳಿಸಿದರು.
ಈ ಸಂಬಂಧ ತನಿಖೆ ನಡೆಸುವಂತೆ ಚುನಾವಣಾ ಪರಿಶೀಲನಾ ಸಮಿತಿಗೆ ವಹಿಸಲಾಗಿದೆ
ಮಧ್ಯರಾತ್ರಿ ಭೇಟಿ ನೀಡಿದ ಎ.ಸಿ.; ಚುನಾವಣಾಧಿಕಾರಿ ರುಚಿ ಬಿಂದಾಲ್‌ರವರು ಶುಕ್ರವಾರ ಮಧ್ಯರಾತ್ರಿ ಚಿಲ್ಕುಂದದ ಚೆಕ್ ಪೋಸ್ಟ್ ಗೆ ಅನಿರೀಕ್ಷಿತ ಭೇಟಿ ನೀಡಿ ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಪರಿಶೀಲಿಸಿ, ನಿದ್ರೆ ಮಂಪರಿನಲ್ಲಿದ್ದ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿದರಲ್ಲದೆ, ಕೆಲ ಸಲಹೆ ನೀಡಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Piriyapatna ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೆ.ವೆಂಕಟೇಶ್

Kabini ಹಿನ್ನೀರಲ್ಲಿ 3.5 ಟನ್ ತ್ಯಾಜ್ಯ ಸಂಗ್ರಹಿಸಿದ ಅರಣ್ಯ ಸಿಬಂದಿ, ಸ್ವಯಂಸೇವಕರು

ಶಿಕ್ಷಣ, ಆರೋಗ್ಯಕ್ಕೆ ರಾಜ್ಯ ಸರ್ಕಾರ ಒತ್ತು ನೀಡಲಿ: ಎಂಎಲ್ಸಿ ವಿಶ್ವನಾಥ್

ಹನಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಹುಲಿ ಹೆಜ್ಜೆ; ಗ್ರಾಮಸ್ಥರಲ್ಲಿ ಆತಂಕ

HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
