
ಹುಣಸೂರು: ಹೃದಯಾಘಾತದಿಂದ ಅರಣ್ಯ ಪ್ರೇರಕ ನಿಧನ
Team Udayavani, Mar 24, 2023, 10:36 PM IST

ಹುಣಸೂರು: ಹುಣಸೂರು ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಅರಣ್ಯ ಪ್ರೇರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಚೇಗೌಡ(59) ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದರು.
ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಚೇಗೌಡನಹುಂಡಿಯ ಮಂಚೇಗೌಡ ಕಳೆದ 30 ವರ್ಷಗಳಿಂದ ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಇವರು ಮನೆಯಲ್ಲಿ ಹೃದಯಾಘಾತಕ್ಕೊಳಗಾಗಿ ಹುಣಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆಯೊಯ್ಯಲು ವೈದ್ಯರು ಸೂಚಿಸಿ ಆಂಬ್ಯುಲೆನ್ಸ್ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದರು.
ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಎಸಿಎಫ್‌ಗಳಾದ ಶಿವರಾಂ, ಲಕ್ಷ್ಮೀಕಾಂತ್, ನಾಗರಾಜ್, ಆರ್.ಎಫ್.ಓ.ರುದ್ರೇಶ್ ಸೇರಿದಂತೆ ಸಿಬ್ಬಂದಿಗಳು ಮಂಚೇಗೌಡನ ಹುಂಡಿಯಲ್ಲಿ ನಡೆದ ಅಂತ್ಯಕ್ತಿಯೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
