
ಪಿರಿಯಾಪಟ್ಟಣ: ಬೆಂಕಿ ಶಾಖ; ಉಸಿರುಗಟ್ಟಿ ರಾಸು,ಕೋಳಿಗಳು ಸಾವು
Team Udayavani, Aug 10, 2022, 6:48 PM IST

ಪಿರಿಯಾಪಟ್ಟಣ: ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮದಲ್ಲಿ 5 ಹಸುಗಳು ಮತ್ತು ಕೋಳಿಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮದ ರಾಜೇಗೌಡ ರವರ ಮಗ ಪ್ರಕಾಶ್ ಎಂಬುವವರ ತಂಬಾಕು ಹದ ಮಾಡುವ ಬ್ಯಾರನ್ ಗೆ ಹೊಂದಿಕೊಂಡಂತಿದ್ದ ಕೊಟ್ಟಿಗೆಯಲ್ಲಿ ಕೊಟ್ಟು ಹಾಕಲಾಗಿದ್ದು, ರಾತ್ರಿ ವೇಳೆ ಐದು ರಾಸುಗಳು ಮತ್ತು ಹಲವಾರು ಕೋಳಿಗಳು ತಂಬಾಕು ಬ್ಯಾರನ್ ನಲ್ಲಿ ತಂಬಾಕಿನ ಎಲೆಗಳನ್ನು ಹದ ಮಾಡಲು ಪೈಪ್ ಗಳ ಮೂಲಕ ಹಾಕಲಾದ ಬೆಂಕಿ ಶಾಖ ಹೆಚ್ಚಾಗಿ ಶಾಖ ಹೊರಗೆ ಹೋಗಲಾರದೆ ಕೊಟ್ಟಿಗೆಯ ತುಂಬೆಲ್ಲ ತುಂಬಿಕೊಂಡಿದ್ದು ಹಸು ಮತ್ತು ಕೋಳಿಗಳಿಗೆ ಉಸಿರಾಟ ಆಡಲಾಗದೆ ಆಕ್ಸಿಜನ್ ದೊರೆಯದೆ ಸ್ಥಳದಲ್ಲೇ ಸಾವನ್ನಪ್ಪಿವೆ.
ತಂಬಾಕು ಬ್ಯಾರೆನ್ ನ ಒಳಗಿದ್ದ ಪೈಪ್ ಒಡೆದು ಶಾಖ ಹೊರ ಬಂದ ಕಾರಣ ಈ ಘಟನೆ ಜರುಗಿದೆ ಎಂದು ಅಂದಾಜಿಸಲಾಗಿದೆ. ರಾತ್ರಿ ಕಟ್ಟಿ ಹಾಕಲಾಗಿದ್ದ ಪ್ರಾಣಿಗಳು ಬೆಳಗಾಗುವುದರಷ್ಟ್ರಲ್ಲಿ ಸಾವನಪ್ಪಿವೆ. ಇದರಿಂದ ಪ್ರಕಾಶ್ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhye: ಮನೆಮನೆಗೆ ಅಯೋದ್ಯೆ ತೀರ್ಥಕ್ಷೇತ್ರದ ಮಂತ್ರಾಕ್ಷತೆ ತಲುಪಿಸಲು ಕ್ರಮ

Hunsur: ಟಿಎಪಿಸಿಎಂಎಸ್ ಅಧ್ಯಕ್ಷ ಶ್ರೀಗೌಡ ನಿಧನ

Diary ಬರೆದು ಟಾರ್ಗೆಟ್ ಮಾಡುವವರನ್ನು ದೂರವಿಟ್ಟರೆ ರಾಜ್ಯ ಬಿಜೆಪಿ ಉದ್ದಾರ: ಡಿವಿಎಸ್

Mysore; ಮಗನಿಗಾಗಿ ಮೈಸೂರಿಗೆ ಬಂದ ಕೋಚ್ ರಾಹುಲ್ ದ್ರಾವಿಡ್

Mysore; ಕೇಸ್ ವಾಪಾಸ್ ಪಡೆದಿದ್ದು ಸಿದ್ದರಾಮಯ್ಯ ರಾಜಕೀಯದ ಕರಾಳ ಅಧ್ಯಾಯ: ಸಿ.ಟಿ ರವಿ