ಜೆಡಿಎಸ್‌ ಭದ್ರ ಕೋಟೆಗೆ ಲಗ್ಗೆ ಇಡಲು ಕೈ ಯತ್ನ

ಹಳೆ ಮೈಸೂರಿನಲ್ಲಿ ಬಿಜೆಪಿ ಸಂಘಟನೆ ಇನ್ನೂ ಶೈಶವಾವಸ್ಥೆಯಲ್ಲಿ

Team Udayavani, Jan 28, 2023, 6:40 AM IST

ಜೆಡಿಎಸ್‌ ಭದ್ರ ಕೋಟೆಗೆ ಲಗ್ಗೆ ಇಡಲು ಕೈ ಯತ್ನ

ಮೈಸೂರು: ಟಾರ್ಗೆಟ್‌ 150 ಎಂದು ಸಾರಿ ಸಾರಿ ಹೇಳಿದ್ದು ಬಿಜೆಪಿ. ಹಳೇ ಮೈಸೂರು ಭಾಗದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುತ್ತೇವೆ ಎಂದು ಪ್ರಾರಂಭದಲ್ಲಿ ಜೆಡಿಎಸ್‌ ಭದ್ರಕೋಟೆಯೊಳಗೆ ಹೆಜ್ಜೆ ಇಟ್ಟಿದ್ದು ಆ ಪಕ್ಷವೇ. ಆದರೆ ಇಂತಹ ಮಾತನ್ನು ಆಡದೇ ಜೆಡಿಎಸ್‌ ಕೋಟೆಯಲ್ಲಿ ಬಿರುಕುಗಳನ್ನು ಮೂಡಿಸುತ್ತಿರುವುದು ಮಾತ್ರ ಕಾಂಗ್ರೆಸ್‌!

ಭಾರತೀಯ ಜನತಾಪಕ್ಷವು ಹಳೇ ಮೈಸೂರು ಪ್ರಾಂತದಲ್ಲಿ ಹೆಚ್ಚು ಸ್ಥಾನ ಗಳಿಸದಿದ್ದರೆ ವಿಧಾನಸಭೆಯಲ್ಲಿ ಬಹುಮತ ಗಳಿಸುವುದು ಕಷ್ಟ ಎಂಬುದನ್ನು ಚುನಾವಣೆಗಳ ಅನಂತರ ತಡವಾಗಿ ಅರಿವಾಯಿತು. ಅದಕ್ಕಾಗಿ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ತನ್ನ ಗಮನ ಕೇಂದ್ರೀಕರಿಸು ವುದಾಗಿ ಪ್ರಾರಂಭದಲ್ಲಿ ಸಭೆಗಳನ್ನು ನಡೆಸಿತು. ರಾಜ್ಯ ಮಟ್ಟದ ನಾಯಕರೂ ಇಲ್ಲಿ ಸಭೆಗಳನ್ನು ನಡೆಸಿ ತಳಮಟ್ಟದಲ್ಲಿ ಹೂಡಬೇಕಾದ ತಂತ್ರಗಳನ್ನು ಹೆಣೆದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮಂಡ್ಯಕ್ಕೆ ಆಹ್ವಾನಿಸಿ ಸಮಾವೇಶವನ್ನು ನಡೆಸಿದರು. ಆದರೆ ಹಳೆ ಮೈಸೂರು ಭಾಗದಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ, ನಾಯಕತ್ವವನ್ನು ರೂಪಿಸುವ ಕಾರ್ಯ ಬಿಜೆಪಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನಡೆದಿಲ್ಲ. ಎರಡು ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದರೂ ಇನ್ನು ಅನೇಕ ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ ಎಂಬುದನ್ನು ಆ ಪಕ್ಷದ ಹಿರಿಯ ನಾಯಕರೇ ಒಪ್ಪಿಕೊಳ್ಳುತ್ತಾರೆ. ಹೀಗಾಗಿಯೇ ಹಳೆ ಮೈಸೂರು ಪ್ರಾಂತದ ಸುಮಾರು 60 ಕ್ಷೇತ್ರಗಳಲ್ಲಿ ಕಳೆದ ಬಾರಿಯೂ ಗಮನ ಸೆಳೆಯುವಂತಹ ಸಾಮರ್ಥ್ಯ ಪ್ರದರ್ಶಿಸಲಿಲ್ಲ. ಈ ಬಾರಿಯೂ ಅಂತಹ ಶಕ್ತಿ ಪ್ರದರ್ಶನದ ಯಾವುದೇ ಸೂಚನೆಗಳೂ ಕಂಡು ಬರುತ್ತಿಲ್ಲ.

ರಾಜ್ಯದಲ್ಲಿ ಜೆಡಿಎಸ್‌ಗೆ ನೆಲೆ ಇರುವುದೇ ಹಳೆ ಮೈಸೂರು ಭಾಗದಲ್ಲಿ. ಇಲ್ಲಿ ಜೆಡಿಎಸ್‌ ಕೋಟೆಯನ್ನು ಭೇದಿಸಿದಾಗ ಮಾತ್ರ ತಾನು ಅಧಿಕಾರ ಸೂತ್ರ ಹಿಡಿಯಲು ಸಾಧ್ಯ ಎಂಬುದನ್ನು ಕಾಂಗ್ರೆಸ್‌ ಚೆನ್ನಾಗಿ ಅರಿತಿದೆ. ಅಷ್ಟಕ್ಕೂ ಕಾಂಗ್ರೆಸ್‌ಗೆ ಹಳೆ ಮೈಸೂರು ಪ್ರದೇಶದಲ್ಲಿ ನೆಲೆ ಇದೆ, ತಳಮಟ್ಟದಲ್ಲಿ ಸ್ಥಳೀಯ ನಾಯಕತ್ವವೂ ಬಲವಾಗಿದೆ. ಕಾಂಗ್ರೆಸ್‌ಗೆ ಸಾಂಪ್ರದಾಯಿಕವಾಗಿ ಮತದಾರರೂ ಇದ್ದಾರೆ. ಹೀಗಾಗಿಯೇ ಹಳೆ ಮೈಸೂರು ಭಾಗದಲ್ಲಿ ನಡೆ ಯು ತ್ತಿರುವ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯಲ್ಲಿ ಆ ಪಕ್ಷದ ಹಿರಿಯ ನಾಯಕರು ಜೆಡಿಎಸ್‌ ಹಾಗೂ ಆ ಪಕ್ಷದ ನೇತಾ ರರನ್ನು ಗುರಿಯಾಗಿಸಿಕೊಂಡೇ ವಾಗ್ಧಾಳಿ ನಡೆಸಿದ್ದಾರೆ. ಕಾಂಗ್ರೆಸ್‌ಗೆ ಇಲ್ಲಿ ಬಿಜೆಪಿ ಎರಡನೇ ಎದುರಾಳಿ.

ಮೈಸೂರಿನ ಪ್ರಜಾಧ್ವನಿ ರ್‍ಯಾಲಿಯಲ್ಲಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ ಮೇಲೆ ಮುಗಿಬಿದ್ದಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಶಾಸಕರು, ಮಾಜಿ ಶಾಸಕರ ಪಟ್ಟಿಯನ್ನೇ ಶಿವಕುಮಾರ್‌ ಮುಂದಿಟ್ಟಿದ್ದಾರೆ. ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಲು ಇವರೆಲ್ಲ ದಡ್ಡರಾ? ಕಾಂಗ್ರೆಸ್‌ ಬೆಂಬಲಿಸಿ ತಮಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಒಂದು ಅವಕಾಶ ಕಲ್ಪಿಸಿ ಎಂದು ಒಕ್ಕಲಿಗ ಪ್ರಾಬಲ್ಯದ ಮೈಸೂರು ಜಿಲ್ಲೆಯಲ್ಲಿ ಮತದಾರರಿಗೆ ಶಿವಕುಮಾರ್‌ ಮನವಿ ಮಾಡಿದ್ದು ಗಮನ ಸೆಳೆಯಿತು. ತಮ್ಮ ಜತೆ ಸಿದ್ದರಾಮಯ್ಯ ಅವರ ಹೆಸರನ್ನೂ ಪ್ರಸ್ತಾವಿಸಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಅವಕಾಶ ಕೇಳಿದ್ದು ಶಿವಕುಮಾರ್‌ ಅವರ ಜಾಣ ನಡೆಯನ್ನು ಪ್ರದರ್ಶಿಸಿತು. ಶಿವಕುಮಾರ್‌ ಶುಕ್ರವಾರ ಮಂಡ್ಯದಲ್ಲಿ ಮಾತಾಡುತ್ತಾ ಪರೋಕ್ಷವಾಗಿ ಮುಖ್ಯಮಂತ್ರಿ ಸ್ಥಾನದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್‌ ಪ್ರಾಬಲ್ಯವನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಚೆನ್ನಾಗಿ ಅರಿತಿವೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ವ್ಯತ್ಯಾಸವಿಷ್ಟೇ. ಅತಂತ್ರ ವಿಧಾನಸಭೆ ರಚನೆಯಾದ ಅನಂತರ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರಕಾರ ರಚಿಸಲು ಓಡೋಡಿ ಬರುತ್ತದೆ. ಆದರೆ ಬಿಜೆಪಿಯು ಕಾಂಗ್ರೆಸ್‌ ಅಧಿಕಾರಕ್ಕೆ ಏರಬಾರದೆಂದು ತಾನು ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮಣಿಸಲು ಜೆಡಿಎಸ್‌ಗೆ ತನ್ನ ಸಾಂಪ್ರದಾಯಿಕ ಮತಗಳು ವರ್ಗವಾಗುವಂತೆ ತಂತ್ರಗಳನ್ನು ಹೆಣೆಯುತ್ತದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಇದರಲ್ಲಿ ಯಶಸ್ವಿಯೂ ಆಯಿತು. ಕಾಂಗ್ರೆಸ್‌ ನೆಲಕಚ್ಚಿತು. ಆದರೆ ಅತಂತ್ರ ವಿಧಾನಸಭೆ ರಚನೆಯಾದಾಗ ಬಿಜೆಪಿ ನಿರೀಕ್ಷೆ ಹುಸಿಯಾಯಿತು. ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಿತ್ತು. ಅನಂತರ ಬಿಜೆಪಿ ಆಪರೇಶನ್‌ ಕಮಲದ ಮೂಲಕ ಸರಕಾರ ರಚಿಸಿದ್ದು ಅನಂತರದ ಇತಿಹಾಸ.

ಜೆಡಿಎಸ್‌ ಅನ್ನು ಎದುರಿಸಲು ಕಾಂಗ್ರೆಸಿಗೆ ಇಲ್ಲಿ ತಳಮಟ್ಟದಲ್ಲಿ ಸಂಘಟನೆಯ ಶಕ್ತಿ, ಒಕ್ಕಲಿಗ ನಾಯಕತ್ವ ಇದೆ. ಆದರೆ ಬಿಜೆಪಿಗೆ ಅಂತಹ ಸಂಘಟನೆಯ ಬಲ ಇಲ್ಲ. ಸ್ಥಳೀಯ ಒಕ್ಕಲಿಗ ನಾಯಕತ್ವವೂ ಇಲ್ಲ. ಆದರೆ ಈ ಬಾರಿ ತಾನೇ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಪ್ರಾರಂಭದಲ್ಲಿ ಮುಂದಾದರೂ ಈಗ ತಳಮಟ್ಟದಲ್ಲಿ ತನ್ನ ಇತಿಮಿತಿಗಳ ಅರಿವು ಆ ಪಕ್ಷದ ನಾಯಕರಿಗೆ ಆಗಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಮಣಿಸಲು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೂಡುವ ತಂತ್ರಗಾರಿಕೆಯೂ ಚುನಾವಣೆ ಮೇಲೆ ಪ್ರಭಾವ ಬೀರುವುದು ಖಚಿತ.

ಮೈಸೂರು ಗ್ರಾಮಾಂತರ, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನೇರ ಪೈಪೋಟಿಯಲ್ಲಿ ಬಿಜೆಪಿಯ ಪಾತ್ರ ಮುಖ್ಯವಾಗಿದೆ.

-ಕೂಡ್ಲಿ ಗುರುರಾಜ

ಟಾಪ್ ನ್ಯೂಸ್

tdy-19

ಉಳ್ಳಾಲ: ಹೆಜ್ಜೇನು ದಾಳಿಗೆ ಬಾವಿಯಲ್ಲಿ ಅಡಗಿ ಕುಳಿತ 79 ರ ವೃದ್ಧ

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ

Arjun Tendulkar To Debut For Mumbai Indians In IPL 2023?

ಈ ಬಾರಿಯ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

1-asd-adas-d

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

r madhav jos

ಜೋಸ್‌ ಆಲುಕ್ಕಾಸ್‌ನ ಪ್ಯಾನ್‌ ಇಂಡಿಯಾ ಬ್ರಾಂಡ್‌ ಅಂಬಾಸಿಡರ್‌ ಆಗಿ ಆರ್‌. ಮಾಧವನ್‌ ಆಯ್ಕೆ

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…

tdy-17

ಅಧಿವೇಶನ ನಡೆಯುತ್ತಿರುವಾಗ ಮೊಬೈಲ್‌ ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಗಾನ, ಕೋಲ ನಡೆಸಬಹುದೇ..? ಚುನಾವಣಾ ನೀತಿ ಸಂಹಿತೆ ಬಗ್ಗೆ ದ.ಕನ್ನಡ ಡಿಸಿ ಮಾಹಿತಿ

ಯಕ್ಷಗಾನ, ಕೋಲ ನಡೆಸಬಹುದೇ..? ಚುನಾವಣಾ ನೀತಿ ಸಂಹಿತೆ ಬಗ್ಗೆ ದ.ಕನ್ನಡ ಡಿಸಿ ಮಾಹಿತಿ

1-wqewqe

ನೀತಿ ಸಂಹಿತೆ ಉಲ್ಲಂಘನೆ : ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಕೇಸ್

tdy-10

ಚನ್ನಪಟ್ಟಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾರು?

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

d k

ವಿಧಾನ-ಕದನ 2023: ಇಲ್ಲಿ ವ್ಯಕ್ತಿ ನಿಷ್ಠೆಗಿಂತ ಪಕ್ಷನಿಷ್ಠೆಯೇ ಅಂತಿಮ!

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

tdy-19

ಉಳ್ಳಾಲ: ಹೆಜ್ಜೇನು ದಾಳಿಗೆ ಬಾವಿಯಲ್ಲಿ ಅಡಗಿ ಕುಳಿತ 79 ರ ವೃದ್ಧ

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ

Arjun Tendulkar To Debut For Mumbai Indians In IPL 2023?

ಈ ಬಾರಿಯ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

1-asd-adas-d

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

r madhav jos

ಜೋಸ್‌ ಆಲುಕ್ಕಾಸ್‌ನ ಪ್ಯಾನ್‌ ಇಂಡಿಯಾ ಬ್ರಾಂಡ್‌ ಅಂಬಾಸಿಡರ್‌ ಆಗಿ ಆರ್‌. ಮಾಧವನ್‌ ಆಯ್ಕೆ