ಸ್ನೇಹಿತರೊಂದಿಗೆ ಕುಳಿತಿದ್ದಾಗಲೇ ಹೃದಯಾಘಾತದಿಂದ ಜೆಡಿಎಸ್ ಮುಖಂಡ ನಿಧನ; ವಿಡಿಯೋ ವೈರಲ್
Team Udayavani, Oct 31, 2022, 12:21 PM IST
ಮೈಸೂರು: ಇಲ್ಲಿನ ಜೆಡಿಎಸ್ ಮುಖಂಡರೊಬ್ಬರು ಸ್ನೇಹಿತರೊಂದಿಗೆ ಕ್ಲಬ್ ನಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ,
ಮೈಸೂರಿನ ಕಾಮಟಗೇರಿ ನಿವಾಸಿ ಅಶ್ವಥ್ (55) ನಿಧನ ಹೊಂದಿದವರು. ಘಟನೆಯ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಗೋಮಾಂಸ ಬಳಕೆ ವದಂತಿ: ಕ್ಯಾಡ್ಬರಿ ವಿರುದ್ಧ ಶುರುವಾಯಿತು ಬಾಯ್ಕಾಟ್ ಟ್ರೆಂಡ್
ಈ ಘಟನೆ ರವಿವಾರ ನಡೆದಿದ್ದು, ಅಶ್ವಥ್ ಅವರು ಸ್ನೇಹಿತರೊಂದಿಗೆ ಕ್ಲಬ್ ನಲ್ಲಿ ಕುಳಿತಿದ್ದರು. ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.