Udayavni Special

ಆಸ್ಪತ್ರೆ ಕೊಠಡಿಯಲ್ಲಿ ಹಾಡಿ ವ್ಯಕ್ತಿಯ ಅರಣ್ಯರೋದನ

ಕಾಡಾನೆ ದಾಳಿಗೊಳಗಾದವನ ಶಸ್ತ್ರ ಚಿಕಿತ್ಸೆಗೆ ಹಣಕ್ಕೆ ಬೇಡಿಕೆ! ಹಣ ಪಾವತಿಸಿಲ್ಲವೆಂದು ಶಸ್ತ್ರ ಚಿಕಿತ್ಸೆ ಕೊಠಡಿಯಿಂದ ವಾರ್ಡ್‌ಗೆ ತಂದ ಸಿಬ್ಬಂದಿ 

Team Udayavani, Feb 3, 2021, 8:41 PM IST

K.R.Hospital

ಮೈಸೂರು: ಕಾಡಾನೆ ದಾಳಿಗೆ ತುತ್ತಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿರುವ ಗಿರಿಜನ ವ್ಯಕ್ತಿಯ ಸ್ಥಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಂಭೀರವಾಗಿದ್ದು, ಆತನ ಅರಣ್ಯರೋದನ ಆಸ್ಪತ್ರೆ ಕೊಠಡಿಗೆ ಸೀಮಿತವಾಗಿದೆ. ಕಳೆದ ಡಿ.20 ರಂದು ವಿರಾಜಪೇಟೆ ತಾಲೂಕಿನ ಚೆನ್ನಯ್ಯಕೋಟೆ ಗ್ರಾಪಂ ವ್ಯಾಪ್ತಿಯ ಚನ್ನಂಗಿ ಗ್ರಾಮದ ಕೆಸುವಿನ ಕೆರೆ ಹಾಡಿಯ 55 ವರ್ಷದ ರಾಮ ಎಂಬವರು ಸಮೀಪದ ರೇಷ್ಮೆ ಹಾಡಿ ಬಳಿ ತೆರಳಿದ್ದಾಗ, ಕಾಡಾನೆ ದಾಳಿಗೆ ತುತ್ತಾಗಿ ಎಡಗಾಲು ತುಂಡಾಗಿತ್ತು.

ಈ ವೇಳೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಾದ ಅವರು, 20 ಸಾವಿರಕ್ಕೂ ಹೆಚ್ಚು ಹಣ ನೀಡಿ, ಮೊದಲ ಹಂತದ ಶಸ್ತ್ರ ಚಿಕಿತ್ಸೆ ಪಡೆದಿದ್ದರು. ಆದರೆ, ನಿತ್ಯದ ಖರ್ಚಿಗೆ ಹಣ ಸಿಗದ ಹಿನ್ನೆಲೆ ವಾಪಸ್‌ ತಮ್ಮ ಹಾಡಿಗೆ ಮರಳಿದ್ದರು. ಮತ್ತೆ ಕಾಲಿನ ನೋವು ಹೆಚ್ಚಾದ ನಂತರ ಕಳೆದ 6 ದಿನಗಳ ಹಿಂದೆ ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಆಸ್ಪತ್ರೆ ವೈದ್ಯರು 2ನೇ ಹಂತದ ಶಸ್ತ್ರ ಚಿಕಿತ್ಸೆ ಹಣ ಪಾವತಿಸುವಂತೆ ಬೇಡಿಕೆ ಇಟ್ಟ ಹಿನ್ನೆಲೆ ಹಣ ಪಾವತಿಸಲಾಗದೆ ನೋವಿನಲ್ಲೇ ನರಳುತ್ತಿದ್ದಾರೆ.

ಹಣ ನೀಡದ್ದಕ್ಕೆ ವಾಪಸ್‌ ವಾರ್ಡಿಗೆ: ಸೋಮವಾರ ವಾರ್ಡ್‌ನಿಂದ ಶಸ್ತ್ರ ಚಿಕಿತ್ಸೆ ಘಟಕಕ್ಕೆ ಕರೆದೊಯ್ದು, 7 ಸಾವಿರ ಹಣ  ಪಾವತಿಸುವಂತೆ ಹೇಳಿದ್ದಾರೆ. ಆದರೆ, ಹಣ ಪಾವತಿಸಲು ವಿಳಂಬ ವಾದ ಹಿನ್ನೆಲೆ ಮತ್ತೆ ವಾರ್ಡ್‌ಗೆ ಕಳುಹಿಸುವ ಮೂಲಕ ಅಮಾನುಷವಾಗಿ ನಡೆದುಕೊಂಡಿದ್ದಾರೆ. ನಿತ್ಯ ನೋವಿನಿಂದ ಪರಿತಪಿಸುತ್ತಿದ್ದರೂ, ಯಾವುದೇ ಇಂಜೆಕ್ಷನ್‌, ಔಷಧ ನೀಡದೆ ನಿರ್ಲಕ್ಷಿಸಿದ್ದಾರೆ ಎಂದು ಗಾಯಾಳುವಿನ ಮಗ ಅಣ್ಣಪ್ಪ ನೋವಿನಿಂದ ಹೇಳುತ್ತಾರೆ.

ಇದನ್ನೂ ಓದಿ :ಕರ ವಸೂಲಿಗಾರ ಹಾಗೂ ಗುಮಾಸ್ತರಿಗೆ ಭಡ್ತಿ ನೀಡಲು ಕ್ರಮ: ಕೆ.ಎಸ್‌. ಈಶ್ವರಪ್ಪ

ಉಚಿತ ಚಿಕಿತ್ಸೆ ಇದ್ದರೂ ಸಿಗುತ್ತಿಲ್ಲ: ಗಿರಿಜನರಿಗೆ ಹಾಗೂ ಬಿಪಿಎಲ್‌ ಕಾರ್ಡ್‌ ಇರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂಬ ನಿಯಮವಿದ್ದರೂ ಮೊದಲ ಹಂತದ ಶಸ್ತ್ರ ಚಿಕಿತ್ಸೆಗೆ 30 ಸಾವಿರಕ್ಕೂ ಹೆಚ್ಚು ಹಣವನ್ನು ಆಸ್ಪತ್ರೆ ಅಧಿಕಾರಿಗಳು ಪಡೆದಿದ್ದಾರೆ. ಅಲ್ಲದೇ, ಉಚಿತ ಚಿಕಿತ್ಸೆ ನೀಡುವಂತೆ ಗಾಯಾಳುವಿನ ಸಂಬಂಧಿಕರು, ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಪತ್ರ ನೀಡಿದ್ದರೂ ಆಸ್ಪತ್ರೆ ಆಡಳಿತ ಮಂಡಳಿ ಗಣನೆಗೆ ತೆಗೆದುಕೊಳ್ಳದೆ ಹಣ ಸುಲಿಗೆಗೆ ಇಳಿದಿದೆ ಎಂದು ಸಂಬಂಧಿಕರು ದೂರುತ್ತಿದ್ದಾರೆ.

ಟಾಪ್ ನ್ಯೂಸ್

ಗೋ ಸೇವೆ ಮಾಡಿ, ದನದ ಕೊಟ್ಟಿಗೆಯಲ್ಲೇ ಪರೀಕ್ಷೆ ತಯಾರಿ ; ನ್ಯಾಯಾಧೀಶೆಯ ಪಟ್ಟಕೇರಿದ ಕಥೆ

ಗೋ ಸೇವೆ ಮಾಡಿ, ದನದ ಕೊಟ್ಟಿಗೆಯಲ್ಲೇ ಪರೀಕ್ಷೆ ತಯಾರಿ ; ನ್ಯಾಯಾಧೀಶೆಯ ಪಟ್ಟಕೇರಿದ ಕಥೆ

ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಐಟಿ ದಾಳಿ

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಲಂಚ ಸ್ವೀಕಾರ : ಕೊಪ್ಪಳ BEO ಉಮಾದೇವಿ ಸೊನ್ನದ್, SDA ಅರುಂಧತಿ ಎಸಿಬಿ ಬಲೆಗೆ

ಲಂಚ ಸ್ವೀಕಾರ : ಕೊಪ್ಪಳ BEO ಉಮಾದೇವಿ ಸೊನ್ನದ್, SDA ಅರುಂಧತಿ ಎಸಿಬಿ ಬಲೆಗೆ

ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಂಜಾಬ್ ನಲ್ಲಿ ಕೋವಿಡ್ ಪ್ರಕರಣಗಳ ಏರಿಕೆ..!

ಕೊವ್ಯಾಕ್ಸಿನ್‌ ಲಸಿಕೆ ಶೇ 81ರಷ್ಟು ಪರಿಣಾಮಕಾರಿ : ಭಾರತ್ ಬಯೋಟೆಕ್

sslc-examination-there-will-be-small-changes-in-question-paper-pattern

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷಾ ಮಾದರಿಯಲ್ಲಿ ಕೊಂಚ ಬದಲಾವಣೆ : ಅನ್ಬು ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Darshanapura

ಬಡವರ ಬಂಧು ಶರಣಬಸಪ್ಪಗೌಡ ದರ್ಶನಾಪುರ

Monkey

ಮಕ್ಕಳು ಸೇರಿ 10 ಮಂದಿ ಕಚ್ಚಿದ್ದ ಮಂಗ ಸೆರೆ  

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಲಂಚ ಸ್ವೀಕಾರ : ಕೊಪ್ಪಳ BEO ಉಮಾದೇವಿ ಸೊನ್ನದ್, SDA ಅರುಂಧತಿ ಎಸಿಬಿ ಬಲೆಗೆ

ಲಂಚ ಸ್ವೀಕಾರ : ಕೊಪ್ಪಳ BEO ಉಮಾದೇವಿ ಸೊನ್ನದ್, SDA ಅರುಂಧತಿ ಎಸಿಬಿ ಬಲೆಗೆ

DCM Govind Karajola

ಛತ್ರಪತಿ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥ : ಕಾರಜೋಳ

MUST WATCH

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 03-March-2021 News Bulletin | Udayavani

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

ಹೊಸ ಸೇರ್ಪಡೆ

ಗೋ ಸೇವೆ ಮಾಡಿ, ದನದ ಕೊಟ್ಟಿಗೆಯಲ್ಲೇ ಪರೀಕ್ಷೆ ತಯಾರಿ ; ನ್ಯಾಯಾಧೀಶೆಯ ಪಟ್ಟಕೇರಿದ ಕಥೆ

ಗೋ ಸೇವೆ ಮಾಡಿ, ದನದ ಕೊಟ್ಟಿಗೆಯಲ್ಲೇ ಪರೀಕ್ಷೆ ತಯಾರಿ ; ನ್ಯಾಯಾಧೀಶೆಯ ಪಟ್ಟಕೇರಿದ ಕಥೆ

ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಐಟಿ ದಾಳಿ

Darshanapura

ಬಡವರ ಬಂಧು ಶರಣಬಸಪ್ಪಗೌಡ ದರ್ಶನಾಪುರ

Monkey

ಮಕ್ಕಳು ಸೇರಿ 10 ಮಂದಿ ಕಚ್ಚಿದ್ದ ಮಂಗ ಸೆರೆ  

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.