Mysuru ; ನರಭಕ್ಷಕ ವ್ಯಾಘ್ರ ದಾಳಿಗೆ ಮತ್ತೊಬ್ಬ ಮಹಿಳೆ ಬಲಿ
Team Udayavani, Nov 24, 2023, 5:32 PM IST
ಮೈಸೂರು : ನರಭಕ್ಷಕ ವ್ಯಾಘ್ರ ದಾಳಿಗೆ ಮತ್ತೊಬ್ಬ ದನಗಾಹಿ ಮಹಿಳೆ ಬಲಿಯಾಗಿರುವ ಆತಂಕಕಾರಿ ಘಟನೆ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ರತ್ನಮ್ಮ (50) ಹುಲಿ ದಾಳಿಗೆ ಬಲಿಯಾದ ರೈತ ಮಹಿಳೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮದ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ಮಾಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸಕಾಲದಲ್ಲಿ ಸ್ಥಳಕ್ಕಾಗಮಿಸದ ಹಿನ್ನಲೆಯಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಮೃತ ದೇಹದೊಂದಿಗೆ ಅರಣ್ಯ ಇಲಾಖೆ ಕಚೇರಿ ಬಳಿ ಪ್ರತಿಭಟಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.