ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಅಪಘಾತ : ಇಬ್ಬರು ಸಾವು, ಓರ್ವ ಗಂಭೀರ
Team Udayavani, May 20, 2022, 5:09 PM IST
ನಂಜನಗೂಡು : ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಬಳಿಯ ಹುಣಸನಾಳು ಗ್ರಾಮದಲ್ಲಿ ನಡೆದಿದೆ.
ತ್ರಿಬಲ್ ರೈಡಿಂಗ್ ನಲ್ಲಿದ್ದ ಮೂವರು ಯುವಕರ ಪೈಕಿ ಕೂಡ್ಲಾಪುರ ಗ್ರಾಮದ ಸಚಿನ್ ಹಾಗೂ ಹುಣಸನಾಳು ಗ್ರಾಮದ ದೊರೆಸ್ವಾಮಿ ಸಾವನ್ನಪ್ಪಿದ್ದ ದುರ್ದೈವಿ. ಮತ್ತೊಬ್ಬ ಸವಾರ ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ರಘು ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ವಿವರ : ಗುರುವಾರ ಸಂಜೆ ಮೂವರು ಯುವಕರು ಕೆಲಸ ಮುಗಿಸಿ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮೂಲಕ ಸ್ವಾ ಗ್ರಾಮಕ್ಕೆ ವಾಪಸಾಗುತ್ತಿದ್ದ ವೇಳೆ ಹುಣಸನಾಳು ಬಳಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು ಇದನ್ನು ಗಮನಿಸಿದ ಯುವಕರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯೂ ಟರ್ನ್ ತೆಗೆದುಕೊಂಡಿದ್ದಾರೆ ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕೆ.ಎಸ್.ಆರ್.ಟಿ.ಸಿ.ಬಸ್ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಮೂವರು ಯುವಕರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು, ಕೂಡಲೇ ಸ್ಥಳೀಯರ ನೆರವಿನೊಂದಿದೆ ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು (ಶುಕ್ರವಾರ) ಇಬ್ಬರು ಯುವಕರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.
ಈ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 1,534 ಅಂಕ ಜಿಗಿತ; ನಿಫ್ಟಿಯೂ ಏರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಎಂಎ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ
ಸಾಗರ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ದಿಢೀರ್ ಅಸ್ವಸ್ಥ
ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ
ಕಾರವಾರ: ಜಿಲ್ಲೆಯಲ್ಲಿ 15.21 ಲಕ್ಷ ರೂ. ಬೆಲೆಯ 75 ಕೆಜಿ ಗಾಂಜಾ ನಾಶ
ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ : ವಾಹನ ಸವಾರಿಗೆ ತೊಂದರೆ
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ಐಎಂಎ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ
ಪಂಚಾಂಗ ನೋಡಿ ರಾಕೆಟ್ ಉಡಾವಣೆ : ಟೀಕೆಗೆ ಗುರಿಯಾದ ಖ್ಯಾತ ನಟ ಮಾಧವನ್ !
3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ
ಸಾಗರ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ದಿಢೀರ್ ಅಸ್ವಸ್ಥ
ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ