ಪಂಚಲಿಂಗ ದರ್ಶನ: ಸ್ಥಳೀಯರಿಗಷ್ಟೇ ಪ್ರವೇಶ
Team Udayavani, Dec 9, 2020, 5:11 PM IST
ಮೈಸೂರು: ತಲಕಾಡು ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಧ್ಯಾಹ್ನ 3ರ ನಂತರ ಎಲ್ಲರಿಗೂ ಪ್ರವೇಶ ನಿರ್ಬಂಧ ವಿಧಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.
ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಂಚಲಿಂಗ ದರ್ಶನಕ್ಕೆ ತಲ ಕಾಡು, ಬಿ.ಶೆಟ್ಟಹಳ್ಳಿ, ಹೊಳೆಸಾಲು ಗ್ರಾಪಂನ ಸ್ಥಳೀಯ ರೇ35 ಸಾವಿರ ಜನ ಇರುವುದರಿಂದ ಹೊರಗಿನವರಿಗೆಪ್ರವೇಶ ಇರುವುದಿಲ್ಲ. ಈ ಸ್ಥಳೀಯರಿಗೂ ಮಧ್ಯಾಹ್ನ 3 ಗಂಟೆಯೊಳಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಂಜೆ ಆಗುತ್ತದೆ: ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನಕ್ಕೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವುದು ಕಷ್ಟ. ಆದ್ದರಿಂದ ಪಂಚಲಿಂಗದರ್ಶನಕ್ಕೆ2 ಪಾಳಿಯಲ್ಲಿ ಮಾತ್ರ ಸಿಬ್ಬಂದಿಯನ್ನುನಿಯೋಜಿಸಲಾಗುವುದು. ಮಧ್ಯಾಹ್ನ 3 ಗಂಟೆಯೊಳಗೆ ಬಂದವರಿಗೆ ಪ್ರವೇಶಾವಕಾಶ ನೀಡಿದರೆ ಅವರು ದರ್ಶನ ಮುಗಿಸಿ ಹೊರಬರುವ ವೇಳೆಗೆ ಸಂಜೆ ಆಗಿರುತ್ತದೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಹೇಳಿದರು. ಭದ್ರತಾ ದೃಷ್ಟಿಯಿಂದ 9 ಕಡೆ ಚೆಕ್‌ಪೋಸ್ಟ್, ಅಗತ್ಯ ಇರುವ ಕಡೆ ಬ್ಯಾರಿಕೇಡಿಂಗ್ ಮಾಡಲಾಗಿದೆ. ಭಕ್ತಾದಿಗಳು ನದಿಗೆ ಇಳಿಯಬಾರದು ಎಂದರು.
ಕೋವಿಡ್ ಪರೀಕ್ಷೆಗೆ ವ್ಯವಸ್ಥೆ: ಆರೋಗ್ಯ ಇಲಾಖೆಯಿಂದ ವೈದ್ಯರನ್ನು ಒಳಗೊಂಡ 10 ತಂಡ ನಿಯೋಜಿಸಿದೆ. ಎಲ್ಲಾ 5 ದೇವಸ್ಥಾನಗಳ ಬಳಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.5 ಆ್ಯಂಬುಲೆನ್ಸ್‌ಗಳು ಇರುತ್ತವೆ ಎಂದು ಜಿಲ್ಲಾ ಆರೋಗ್ಯ – ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್ ತಿಳಿಸಿದರು.ಅಗ್ನಿಶಾಮಕ ಇಲಾಖೆಯಿಂದ 2 ಅಗ್ನಿ ಶಾಮಕ ವಾಹನ, ನದಿಯಲ್ಲಿ ದೋಣಿಗಳು, ಒಬಿಎಂ, ಮುಂತಾದ ವ್ಯವಸ್ಥೆ ಮಾಡಲಾಗಿದೆ ಎಂದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ಎನ್.ಸಿ. ವೆಂಕಟರಾಜು, ತಿ.ನರಸೀಪುರ ತಹಶೀಲ್ದಾರ್ ನಾಗೇಶ್ ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ಮುಂಬೈ : ಬಾಯ್ಫ್ರೆಂಡ್ ಜತೆ ಪತ್ನಿ ಪರಾರಿ: ಪತಿ ದೂರು
ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ
ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ
ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ
ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ