ಮೈಸೂರು ವಿವಿ: ಪುನೀತ್ ರಾಜಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ
Team Udayavani, Mar 22, 2022, 12:01 PM IST
ಮೈಸೂರು: ಮೈಸೂರು ವಿಶ್ವವಿದ್ಯಾಲಯದ 102 ನೇ ಘಟಿಕೋತ್ಸವ ಸಮಾರಂಭದಲ್ಲಿ ಇತ್ತೀಚೆಗೆ ಅಗಲಿದ ನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಪುನೀತ್ ಪತ್ನಿ ಅಶ್ವಿನಿ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.
ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್ ನಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಸಿಂಗ್ ಗೆಹ್ಲೋಟ್, ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್, ರಾಷ್ಟ್ರೀಯ ಮೌಲ್ಯಅಂಕ ಮತ್ತು ಮಾನ್ಯತಾ ನಿರ್ದೇಶಕ ಡಾ. ಎಸ್.ಸಿ ಶರ್ಮ, ಪದ್ಮವಿಭೂಷಣ ಡಾ. ವಾಸುದೇವ್ ಕೆ. ಆತ್ರೇ, ಜನಪದ ಕಲಾವಿದ ಮಳವಳ್ಳಿ ಮಹಾದೇವಸ್ವಾಮಿ ಮತ್ತಿತರರು ಭಾಗಿಯಾಗಿದ್ದರು.
ಇದನ್ನೂ ಓದಿ:ಮೇಕೆದಾಟು ಕುರಿತ ತಮಿಳುನಾಡು ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ: ಕುಮಾರಸ್ವಾಮಿ
ರಾಜಕುಮಾರ್ ಕುಟುಂಬದಿಂದ ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ, ನಟ ವಿನಯ್ ರಾಜ್ ಕುಮಾರ್, ರಾಜ್ ಕುಮಾರ್ ಮಗಳು ಲಕ್ಷ್ಮಿ ಗೋವಿಂದು ಹಾಗೂ ಮೊಮ್ಮಕ್ಕಳು ಭಾಗಿಯಾಗಿದ್ದರು.