ಅಭಿವೃದ್ದಿ ವಿಚಾರ ಇಲ್ಲದವರು ಸಿ.ಡಿ. ಬಗ್ಗೆ ಮಾತನಾಡುತ್ತಾರೆ: ಪ್ರತಾಪ್ ಸಿಂಹ
Team Udayavani, Feb 4, 2023, 4:54 PM IST
ಮೈಸೂರು: ಕರ್ನಾಟಕದ ರಾಜಕಾರಣವು ಸಿ.ಡಿ. ವಿಚಾರ, ಆಡಿಯೋ, ವೈಯಕ್ತಿಕ ವಿಚಾರ ಬಿಟ್ಟು ಮುಂದೆ ಸಾಗಿದೆ. ಜನರ ಮುಂದೆ ತೆರೆದಿರಲು ಅಭಿವೃದ್ಧಿ ವಿಚಾರ ಇಲ್ಲದೆ ಇಂತಹ ವಿಚಾರದಲ್ಲೇ ಇದ್ದಾರೆ. ಯಾರ ಹತ್ತಿರ ಅಭಿವೃದ್ಧಿ ವಿಚಾರ ಇಲ್ಲವೂ ಅಂತಹವರು ಇಂತಹ ಸಿಡಿ ವಿಚಾರ ಮಾತನಾಡಿಕೊಂಡು ಇರುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಮೊಬೈಲ್ ತೆಗೆದರೂ ಏನಾದರೊಂದು ಸಿಕ್ಕಿರುತ್ತದೆ. ಓಪನ್ ಮಾಡಿ ಅಂದರೆ ಎಷ್ಟು ಜನಕ್ಕೆ ಧೈರ್ಯ ಇದೆ ಹೇಳಿ? ಇಂತಹ ವಿಚಾರಗಳಿಗೆ ಜನ ಸೊಪ್ಪು ಹಾಕಲ್ಲ ಎನ್ನುವುದು ಎಲ್ಲಾ ಚುನಾವಣೆಯಲ್ಲಿ ಗೊತ್ತಾಗಿದೆ. ಹಾಗಾಗಿ ಇಂತಹ ವಿಚಾರ ಬಿಟ್ಟು ಬೇರೆ ವಿಚಾರ ಮಾತನಾಡಿ. ಆಗ ಜನ ಕೂಡ ಒಪ್ಪಿಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ:ಹಸೆಮಣೆ ಏರಿದಾಕ್ಷಣ ರಕ್ತದಾನ ಮಾಡಿದ ನವಜೋಡಿ; ಲಗ್ನಪತ್ರಿಕೆಯಲ್ಲಿ ಮಾಹಿತಿ
ಇದು ಕೇವಲ ರಾಜಕಾರಣಿಗಳ ಮೊಬೈಲ್‌ನಲ್ಲಿ ಅಲ್ಲ, ಎಲ್ಲರ ಮೊಬೈಲಿನಲ್ಲೂ ಇದೆ. ಇದನ್ನ ಪ್ರಶ್ನೆ ಮಾಡುವವರು ಹಾಗೂ ವಿರೋಧ ಪಕ್ಷದಲ್ಲಿ ಇದ್ದು ಆಡಳಿತ ಪಕ್ಷದವರನ್ನು ಪ್ರಶ್ನಿಸುವವರೂ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಸಿ.ಟಿ.ರವಿ ‘ಮುಂದಿನ ಮುಖ್ಯಮಂತ್ರಿ’ ಆಗಲೆಂದು ಅಭಿಮಾನಿಗಳ ಪಾದಯಾತ್ರೆ
ಯಾವ ಮಠಾಧೀಶರನ್ನೂ ಬೆದರಿಸಿಲ್ಲ,ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಇಲ್ಲ: ಯತ್ನಾಳ್
ನಾನು ಯಾರಿಗೂ ಹೆದರುವುದಿಲ್ಲ: ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿ
ಕುತೂಹಲ ಮೂಡಿಸಿದ ಭೇಟಿ: ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಚರ್ಚಿಸಿದ ಸಾಹುಕಾರ್