
ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ
Team Udayavani, Jun 8, 2023, 10:38 PM IST

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥರಾಗಿರುವ, ಕಲಾ ನಿಕಾಯದ ಡೀನ್ ಪ್ರೊ. ಮುಜಾಫರ್ ಅಸ್ಸಾದಿ ಅವರು ಗೋವಾ ವಿಶ್ವವಿದ್ಯಾನಿಲಯದ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ 26 ವರ್ಷಗಳ ನಂತರ ಅವರ ರಾಜೀನಾಮೆ ಅಂಗೀಕಾರವಾಗಿರುವ ಪತ್ರ ಇದೀಗ ಅವರಿಗೆ ಬಂದಿದೆ.
ಪ್ರೊ. ಮುಜಾಫರ್ ಅಸ್ಸಾದಿ 1994 ರಲ್ಲಿ ಮೈಸೂರು ವಿವಿ ಸೇರುವ ಮುನ್ನ 3 ವರ್ಷಗಳ ಕಾಲ ಗೋವಾ ವಿವಿಯಲ್ಲಿದ್ದರು. ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ರೀಡರ್ ಆಗಿ ಸೇರಿದರು. ವಿಶ್ವವಿದ್ಯಾನಿಲಯದ ನಿಯಮಾವಳಿಗಳಲ್ಲಿರುವ ಅವಕಾಶವನ್ನು ಬಳಸಿಕೊಂಡು 3 ವರ್ಷಗಳ ನಂತರ ಅಂದರೆ 1997ರಲ್ಲಿ ಗೋವಾ ವಿವಿಯ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ನಂತರ ಮೈಸೂರು ವಿವಿಯಲ್ಲಿ ತಮ್ಮ ಸೇವೆ ಮುಂದುವರಿಸಿದರು. ಪ್ರೊ. ಮುಜಾಫರ್ ಅಸ್ಸಾದಿ ಅಂದು ಗೋವಾ ವಿ ವಿ ಗೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸಿರುವ ಪತ್ರ ಜೂನ್ 5 ರಂದು ಅವರಿಗೆ ಬಂದಿದೆ.
ಪ್ರೊ. ಮುಜಾಫರ್ ಅಸ್ಸಾದಿ ಅವರೇ ಗುರುವಾರ ಉದಯವಾಣಿಗೆ ಈ ವಿಷಯವನ್ನು ಖಚಿತಪಡಿಸಿದರು.
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಎಷ್ಟು ಲೋಪವಿದೆ ಎಂಬುದನ್ನು ಇದು ತೋರಿಸುತ್ತದೆ. ಇದು ಆಧುನಿಕ ತಬರನ ಕಥೆ ಎಂದು ಪ್ರೊ ಅಸ್ಸಾದಿ ಪ್ರತಿಕ್ರಿಯಿಸಿದರು.
ಪ್ರೊ. ಅಸ್ಸಾದಿ ಅವರು ಈ ವರ್ಷ ನಿವೃತ್ತರಾಗಲಿದ್ದಾರೆ. ಪಿಂಚಣಿ ಇತ್ಯರ್ಥಕ್ಕಾಗಿ ಈ ಹಿಂದೆ ಅವರು ಕಾರ್ಯನಿರ್ವಹಿಸಿದ ಗೋವಾ ವಿ ವಿ ಗೆ ಮೈಸೂರು ವಿವಿ ಇತ್ತೀಚೆಗೆ ಪತ್ರ ಬರೆದ ನಂತರ ಗೋವಾ ವಿವಿ ತನ್ನ ಲೋಪದಿಂದ ಎಚ್ಚೆತ್ತು ಕೊಂಡಿದೆ. 1997ರಲ್ಲಿಯೇ ರಾಜೀನಾಮೆ ಪತ್ರ ಅಂಗೀಕರಿಸಲಾಗಿದೆ ಎಂದು ಈಗ ಪ್ರೊ. ಅಸ್ಸಾದಿ ಅವರಿಗೆ ತಿಳಿಸಿದೆ. ಗೋವಾ ವಿ ವಿ ಯಲ್ಲಿ ತಾವು ಕಾರ್ಯನಿರ್ವಹಿಸಿದ ಬಗ್ಗೆ ತಮ್ಮ ಸೇವಾ ರಿಜಿಸ್ಟರ್ ಕೂಡ ಇನ್ನು ಮೈಸೂರು ವಿ ವಿ ಗೆ ಬಂದಿಲ್ಲ ಎಂದು ಪ್ರೊ. ಮುಜಾಫರ್ ಅಸ್ಸಾದಿ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur; ಗದ್ದಿಗೆಯಲ್ಲಿ 59 ಆದಿವಾಸಿ ಜೋಡಿಗಳ ಸಾಮೂಹಿಕ ವಿವಾಹ

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ

Cauvery; ತಮಿಳುನಾಡಿಗೆ ಮತ್ತೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ: ಸಿದ್ದರಾಮಯ್ಯ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

Mysuru Dasara: ಅರಮನೆಗೆ ಬಂದಿಳಿದ ಗಜಪಡೆಯ 2ನೇ ತಂಡ
MUST WATCH
ಹೊಸ ಸೇರ್ಪಡೆ

India-Canada Diplomatic Row: ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್, ಜೈಶಂಕರ್ ಭೇಟಿ

Sukhpal Singh Khaira: ಡ್ರಗ್ಸ್ ಪ್ರಕರಣ.. ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಬಂಧನ

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

Gudibande: ಬುದ್ದಿ ಹೇಳಿದ್ದಕ್ಕೆ ಪೊಲೀಸರ ಬೈಕ್ ಗೆ ಬೆಂಕಿ ಇಟ್ಟ ಭೂಪ

Daily Horoscope: ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ಹಿನ್ನಡೆ, ಸಾಹಿತ್ಯ ಸಾಧಕರಿಗೆ ಗೌರವ