ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ‌ಕೊರತೆ ಇಲ್ಲ


Team Udayavani, Sep 29, 2020, 12:46 PM IST

Mysuru-tdy-2

ಸಾಂದರ್ಭಿಕ ಚಿತ್ರ

ಮೈಸೂರು: ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಬೆಳೆಗಳಿಗೆ ಅವಶ್ಯವಿರುವ ಯೂರಿಯಾ ರಸಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿ ಲಭ್ಯವಿದ್ದು ಯಾವುದೇ ಕೊರತೆ ಇರುವುದಿಲ್ಲ. ಆದರೆ, ಜಿಲ್ಲೆಯ ಯಾವುದೇ ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಲೈಸೆನ್ಸ್‌ ರದ್ದುಪಡಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಮಾರಾಟ ಮಹಾ ಮಂಡಳಿಯಲ್ಲಿ 759 ಮೆ.ಟನ್‌ ಕಾಪು ದಾಸ್ತಾನು ಸೇರಿದಂತೆ ಒಟ್ಟಾರೆಯಾಗಿ 4396 ಮೆ.ಟನ್‌ ಯೂರಿಯಾ ರಸಗೊಬ್ಬರ ಲಭ್ಯವಿದೆ. ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಿ ಲೈಸೆನ್ಸ್ ರದ್ದುಪಡಿಸಲುಕ್ರಮವಹಿಸಲಾಗುವುದು. ರಸಗೊಬ್ಬರ ಖರೀದಿಸುವ ರೈತರು ತಪ್ಪದೇ ತಮ್ಮ ಆಧಾರ್‌ ಕಾರ್ಡ್‌ ತೆಗೆದುಕೊಂಡು ಹೋಗುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

……………………………………………………………………………………………………………………………………………………………………..

ಇಂದಿನಿಂದ ಹೋಬಳಿವಾರು ಕೋವಿಡ್ ಟೆಸ್ಟ್ :

ಎಚ್‌.ಡಿ.ಕೋಟೆ: ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ 10 ಕೋವಿಡ್ ಸೋಂಕು ತಪಾಸಣೆ ತಂಡಗಳು ಸಜ್ಜಾಗಿದ್ದು, ಮಂಗಳವಾರದಿಂದಲೇ ಹೋಬಳಿ ಮಟ್ಟದಲ್ಲಿ ತಪಾಸಣೆ ಕಾರ್ಯ ಶುರುವಾಗಲಿದೆ ಎಂದು ಎಂದು ತಾಲೂಕು ಅರೋಗ್ಯಾಧಿಕಾರಿ ಡಾ.ರವಿ ಕುಮಾರ್‌ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ತರಬೇತಿ ಪಡೆದ ಗ್ರಾಪಂ ದತ್ತಾಂಶ ನಮೂದಕರು, ವಿವೇಕಾನಂದ ಸಂಸ್ಥೆಯ ಆರೋಗ್ಯ ಸ್ವಯಂ ಸೇವಕರು,ವಿವೇಕಾ ನಂದ ಸಂಸ್ಥೆಯ ಮುಖ್ಯಸ್ಥರು, ತಾಲೂಕಿನ ಕಂದಾಯ ಇಲಾಖೆ ನಿರೀಕ್ಷಕರು, ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.

ಸೋಂಕಿನ ತಪಾಸಣೆಗೆ ಜನ ಭಯ ಭೀತರಾಗುವ ಸಾಧ್ಯತೆಗಳಿದ್ದು, ನಿಯೋಜಿತರು ಕಡ್ಡಾಯವಾಗಿ ಜನರ ಮನವೊಲಿಸಿ ಪ್ರತಿದಿನ 300 ಜನರ ತಪಾಸಣೆ ನಡೆಸಬೇಕು. ಸಂಗ್ರಹಿಸಿದ ಗಂಟಲು ದ್ರವ ಪರೀಕ್ಷೆ ಸ್ಥಳದಲ್ಲಿಯೇ 1 ತಾಸಿನ ಒಳಗೆ ಲಭ್ಯವಾಗಲಿದೆ. ತಾಲೂಕಿನ 39 ಗ್ರಾಮ ಪಂಚಾಯ್ತಿಗಳಲ್ಲೂ ತಪಾಸಣೆ ನಡೆಸಲಾಗುವುದು ಎಂದರು.

ಹೋಬಳಿವಾರು, ಗ್ರಾಮ ಪಂಚಾಯಿತಿವಾರು ಕಡ್ಡಾಯವಾಗಿ ಕೋವಿಡ್ ತಪಾಸಣೆ ನಡೆಸಬೇಕು ಎಂದು ತಹಶೀಲ್ದಾರ್‌ ಆರ್‌. ಮಂಜುನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ತಾಪಂ ಇಒರಾಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಸರಗೂರು ತಾಪಂ ಇಒ ಶ್ರೀನಿವಾಸ್‌, ವಿವೇಕಾನಂದ ಸಂಸ್ಥೆಯ ಸಿಬ್ಬಂದಿ, ಮತ್ತು ಗ್ರಾಪಂ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

 

ಟಾಪ್ ನ್ಯೂಸ್

1-PAK

Pak ಉಗ್ರರ ಬಳಿ ಈಗ ಚೀನ ಅತ್ಯಾಧುನಿಕ ಎನ್‌ಕ್ರಿಪ್ಟ್ ಅಲ್ಟ್ರಾ ಹ್ಯಾಂಡ್‌ಸೆಟ್‌!

bjp-congress

By-election: ಕೈ, ಬಿಜೆಪಿ ಟಿಕೆಟ್‌ ಈ ವಾರವೇ ಅಂತಿಮ?

1-vishnu

1.70 ಮೀ. ಉದ್ದದ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ: ಅಧಿಕಾರಿ

1-aasasa

Team India ಸೇಡು ತೀರಿಸಲಿ; ಆಸ್ಟ್ರೇಲಿಯ ಒತ್ತಡದಲ್ಲಿ: ಸೋತರೆ ಸೆಮಿ ಬಸ್‌ ಮಿಸ್‌!

suicide (2)

Italy; ಕೈ ತುಂಡಾದ ಭಾರತೀಯ ವಲಸಿಗನನ್ನು ರಸ್ತೆ ಬಳಿ ಬಿಟ್ಟು ಹೋದ ವ್ಯಕ್ತಿ!

rishi-sunak

Election ದಿನಾಂಕದಲ್ಲೂ ಬೆಟ್ಟಿಂಗ್‌:ರಿಷಿ ಸುನಕ್‌ಗೆ ಮುಜುಗರ

ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

Mangaluru; ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ

B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ

ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!

Fake ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!

1-BJP-JDS

Hunsur ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

5-hunsur

Hunsur: ಶುಂಠಿ ಮದ್ಯೆ ಬೆಳೆಸಿದ್ದ ಗಾಂಜಾ ಗಿಡ ವಶ, ಆರೋಪಿ ಪರಾರಿ

4-hunsur

Hunsur: ಮೈಮುಲ್ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ವಜಾಗೊಳಿಸುವ ಸಚಿವರ ಹುನ್ನಾರ ನಡೆಯಲ್ಲ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

bjp-congress

By-election: ಕೈ, ಬಿಜೆಪಿ ಟಿಕೆಟ್‌ ಈ ವಾರವೇ ಅಂತಿಮ?

1-PAK

Pak ಉಗ್ರರ ಬಳಿ ಈಗ ಚೀನ ಅತ್ಯಾಧುನಿಕ ಎನ್‌ಕ್ರಿಪ್ಟ್ ಅಲ್ಟ್ರಾ ಹ್ಯಾಂಡ್‌ಸೆಟ್‌!

1-vishnu

1.70 ಮೀ. ಉದ್ದದ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ: ಅಧಿಕಾರಿ

1-aasasa

Team India ಸೇಡು ತೀರಿಸಲಿ; ಆಸ್ಟ್ರೇಲಿಯ ಒತ್ತಡದಲ್ಲಿ: ಸೋತರೆ ಸೆಮಿ ಬಸ್‌ ಮಿಸ್‌!

suicide (2)

Italy; ಕೈ ತುಂಡಾದ ಭಾರತೀಯ ವಲಸಿಗನನ್ನು ರಸ್ತೆ ಬಳಿ ಬಿಟ್ಟು ಹೋದ ವ್ಯಕ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.