ಈಗಿನ ರಾಜಕಾರಣಿಗಳಿಗೆ ಓದುವ ಹವ್ಯಾಸವಿಲ್ಲ
Team Udayavani, Dec 16, 2020, 4:06 PM IST
ಮೈಸೂರು: ಈಗಿನ ರಾಜಕಾರಣಿಗಳಿಗೆ ಓದುವ ಹವ್ಯಾಸವೇ ಇಲ್ಲ, ಹಾಗಾಗಿ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಪ್ರಗತಿಪರ ಚಿಂತಕಕೆ.ಎಸ್. ಭಗವಾನ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ವತಿಯಿಂದಹಮ್ಮಿಕೊಂಡಿದ್ದ “ಡಿ.ದೇವರಾಜ ಅರಸು ಅವರ ಸಾಮಾಜಿಕ ಚಿಂತನೆಗಳು’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಸಮಾಜ ಕಟ್ಟಬೇಕಾದರೆ ಹೊಸ ಆಲೋಚನೆಗಳು ಬರಬೇಕು. ಏನನ್ನೂ ಓದದೆ ಹೊಸ ಆಲೋಚನೆಗಳು ಬರುವುದಿಲ್ಲ. ದೇವ ರಾಜ ಅರಸು ಅವರು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಈ ಕಾರಣಕ್ಕೆ ಅವರಿಂದ ಪ್ರಗತಿಪರ ಕಾಯ್ದೆಗಳು ಜಾರಿಗೆ ತರಲು ಸಾಧ್ಯವಾಯಿತು.ಈಗಿನ ರಾಜಕಾರಣಿಗಳಲ್ಲಿ ಈ ರೀತಿಯ ಓದುವ ಹವ್ಯಾಸವನ್ನುಕಾಣಲು ಸಾಧ್ಯವಿಲ್ಲ ಎಂದರು.
ಡಿ. ದೇವರಾಜ ಅರಸು ಅವರು ಸಮಾಜದಲ್ಲಿ ಕಡೆಗಣನೆಗೆ ಒಳಗಾದವರನ್ನು ಗುರುತಿಸಿ ಅವರಿಗೆರಾಜಕೀಯಅಧಿಕಾರನೀಡಿದರು.ಅವರಿಗೋಸ್ಕರ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಇದು ದೇವರಾಜ ಅರಸು ಅವರ ಬಹುದೊಡ್ಡ ಗುಣ ಎಂದು ಹೇಳಿದರು.
ಬಡ ವರ್ಗದವರ ಬಗ್ಗೆ ದೇವರಾಜ ಅರಸುಅವರಿಗೆ ಇದ್ದ ಹೃದಯ ಶ್ರೀಮಂತಿಕೆ ಇನ್ನೂ ಯಾರಲ್ಲೂ ಕಾಣಲು ಸಾಧ್ಯವಾಗಿಲ್ಲ. ರಾಜಕೀಯ ಹಿನ್ನೆಲೆ ಇಲ್ಲದ ಶೋಷಿತ ಸಮುದಾಯದವರನ್ನು ಗುರುತಿಸಿ ಅವರಿಗೆ ರಾಜಕೀಯ ಅಧಿಕಾರ ನೀಡಿದರು ಎಂದು ಸ್ಮರಿಸಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಅರಸು ಪ್ರತಿಮೆ ನಿರ್ಮಾಣಕ್ಕೆಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಮಾತನಾಡಿ, ಸಾಕಷ್ಟು ಜನರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಎಲ್ಲರ ಹೆಸರು ಜನಮಾನಸದಲ್ಲಿ ಉಳಿದಿಲ್ಲ. ಇಂದಿಗೂ ಅರಸು ಅವರ ಹೆಸರುಜನಮಾನಸದಲ್ಲಿ ಉಳಿಯಲು ಅವರು ನೀಡಿದಕೊಡುಗೆಗಳೇ ಕಾರಣ ಎಂದರು. ವೇದಿಕೆಯಲ್ಲಿಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನಿವೃತ್ತನಿರ್ದೇಶಕಡಾ.ಟಿ. ತಿಮ್ಮಯ್ಯ,ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್,ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್. ಅರಸ್ ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ, ಕಾಂಗ್ರೇಸ್ – ಬಿಜೆಪಿ ಸರಕಾರ : ಡಿಕೆಶಿ ವ್ಯಂಗ್ಯ
ಬಣ್ಣಾರಿ ಕಾರ್ಖಾನೆ-ಲಾರಿ ಮಾಲಿಕರ ಸಂಘರ್ಷ ಅಂತ್ಯ
ಆನ್ ಲೈನ್ ಕ್ಲಾಸ್ ಗೂ ಹಾಜರಾತಿ ಕಡ್ಡಾಯ ಮಾಡುವ ಕುರಿತು ನಿರ್ಧಾರ: ಅಶ್ವಥ್ ನಾರಾಯಣ್
ಬಜೆಟ್ ನಲ್ಲಿ ಮೈಸೂರು ಅಭಿವೃದ್ಧಿಗೆ ಒತ್ತು ಕೊಡಲು ಸಿಎಂ ಗಮನಕ್ಕೆ ತರುವೆ: ಸೋಮಶೇಖರ್
ನಾನು ಶಾಸಕನಾಗಿದ್ದರೂ ಸಚಿವನಾಗಬೇಕೆಂಬ ಭ್ರಮೆ ಇಲ್ಲ: ರಾಮದಾಸ್